ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೪

ರಾಮಚಂದ್ರಚರಿತಪುರಾಣಂ

ಉ|| ಹಾರಮನಿಕ್ಕಿ ಮಿಕ್ಕ ಕನಕಾಭರಣಂಗಳ ಬಿಣ್ಪನೇನುಮಂ|
     ಸೈರಿಸದಿರ್ಪುದಪ್ಪುದೆ ವಲಂ ಕನಕಾದ್ರಿಯ ಬಿಣ್ಪನಪ್ಪೊಡಂ||
     ಸೈರಿಸದರ್ಭಕಂ ಬಳೆಯೆ ಗರ್ಭಸರೋಜದೊಳಾ ವಿನೀಳ|
     ನೀರೇರುಹನೇತ್ರೆ ತತ್ಕನಕಮಾತ್ರದ ಬಿಣ್ಣನದೇಕೆ ಸೈರಿಪಳ್||೧೦೫||

ಚ|| ತನು ತನುವಾದ ಗರ್ಭಿಣಿಗೆ ತತ್ಸಮಯೋಚಿತ ಮಂಗಳ ಪ್ರಸಾ|
     ಧನಮೆಸೆದತ್ತು ಕಪ್ಪುರದ ಕಂಠಿಕೆ ಬಣ್ಣದ ಸಣ್ಣಮಾಲೆ ತೆಂ||
     ಗಿನ ತಿರುಳೋಲೆ ತಾವರೆಯನೂಲುಡೆನೂಲ್ ಸಿರಿಕಂಡದಣ್ಪು ಮು
     ತ್ತಿನ ತಿಸರಂ ಮೃಣಾಳಿಕೆಯ ಮುದ್ರಿಕೆ ಪೂವಿನ ಪಿಂಡುಗಂಕಣಂ||೧೦೬||

     ಘನಕುಚೆ ಮೇಳದಂಗನೆಯ ಮೇಲೆ ಮಲಂಗಿ ಸರೋಜಪತ್ರ ವೀ।
     ಜನಪವನಂ ವಿಕಾಸಮನೊಡರ್ಚೆ ಮನಕ್ಕೆ ಸುಧಾಪ್ರವಾಹಮೆಂ||
     ಬಿನಮೆರಡುಂ ಕೆಲಂಬಿಡಿದು ಬಾಜಿಪ ವಾದ್ಯದಿನೋಜೆವೆತ್ತ ಗಾ|
     ಯನಿಯರ ಸೀಯನಪ್ಪ ರಸಗೇಯಮನಾಲಿಸುತಿರ್ಪಳೊರ್ಮೆಯುಂ||೧೦೭||

ಉ|| ಸೋರ್ಮುಡಿ ಮಾಲೆಯಿಂ ಕದಪುಗಳ್ ಮಲಯೋದ್ಭವ ಪತ್ರಭಂಗದಿಂ|
     ಪೆರ್ಮೊಲೆ ಹಾರದಿಂದೆಸೆಯೆ, ಬಂಬಲಬಾಡಿದ ರೂಪು ಗಾಡಿಯಂ||
     ನೂರ್ಮಡಿ ಮಾಡೆ ಮೇಳದವಳ೦ ಸತಿ ನಿರ್ಭರ ಗರ್ಭಧಾರದಿಂ|
     ನೆರ್ಮಿ ನಿಮಿರ್ಚ್ಚುವಳ್ ಪುರುಳಿಯೊ ಳ್ ಪರಿಹಾಸ ವಚೋವಿಲಾಸಮಂ||೧೦೮||

     ಅ೦ತು ವಿವಿಧವಿಲಾಸಂಗಳಿ೦ ದಿವಸ೦ಗಳಭಿಲಷಿತ ಫಲಪ್ರಸವಂಗಳಾಗೆ ಸುಖ
ಪ್ರಸವ ಸಮಯದೊಳ್--

     ಕಂ|| ಉರ್ವರೆ ಮಣಿಪರ್ವತಮಂ
           ಶಾರ್ವರಿ ಪರಿಪೂರ್ಣಚಂದ್ರನಂ ಪಡೆವಂತಂ||
           ತರ್ವತ್ನಿ ಸರ್ವಲಕ್ಷಣ
           ಸರ್ವಗುಣಾನ್ವಿತನೆನಿಪ್ಪ ಸುತನಂ ಪಡೆದಳ್||೧೦೯||

           ನೀರಜಮಾದುದು ಮೇದಿನಿ;
           ನೀರಜಮೀತನ ಚರಿತ್ರಮೆಂದರಿಪುವವೋಲ್||
           ನೀರಚ್ಛಮಾದುದೀ ವಸು
           ಧಾರಮಣಂ ಸ್ವಚ್ಛಹೃದಯನೆಂದರಿಪುವವೋಲ್