೩೫
ಕ೦|| ಉದಯಿಸಿದ ತನೂಜನ ತೇ
ಜದೊಳೇನುಂ ಮಲಿನಭಾವ ಲಾಂಛನ ಮಿಲ್ಲೆ೦||
ಬುದನರಿಪುವಂತೆ ಪೊಗೆಯಿ
ಲ್ಲದೆ ಪೊಣ್ಮಿತ್ತಗ್ನಿ ದಕ್ಷಿಣಾವರ್ತಮುಖಂ||೧೧೧||
ಈ ತನಯನೆ ಸಕಲೋತ್ಸವ
ಹೇತು ಜಗತ್ತಾಪ ಶಮನನೆಂದರಿಪುವವೋಲ್||
ಶೀತಲ ಸಮೀರನೆಸಗಿ
ತ್ತಾತನ ಜಸದಂತೆ ವಿಶದವಾಯ್ತಾಕಾಶಂ||||೧೧೨||
ಎಳವಿಸಿಲುಂ ಬೆಳ್ದಿಂಗಳು
ಮೇಳಸಿದುವೆನೆ ರಮ್ಯ ಹರ್ಮ್ಯಶಿಖರ ಸ್ಥಳಿಯೊಳ್||
ಪೊಳೆದುವು ಪೊಂಗಳಸಂಗಳ
ಪೊಳೆಪುಂ ಕೇತನ ದುಕೂಲ ಚೇಲಾಂಚಲಮುಂ||೧೧೩||
ಅವಿರಳಮೆನೆ ಪೂವಲಿ ಪುದಿ
ದುವು|ಗುಡಿಯುಂ ತೋರಣಂಗಳುಂ ತಳ್ತುವು ಬ||
ದ್ದವಣಂ ಬಾಜಿಸಿದುವು ವೀ
ಧಿವೀಧಿಯೊಳ್ ಕೇರಿಕೇರಿಯೊಳ್ ಮನೆಮನೆಯೊಳ್||೧೧೪||
ಉ|| ರಾಗದ ಬಳ್ಳವಳ್ಳಿಯೆನೆ ರನ್ನದ ತೋರಣಮಾಲೆ ಕೂಡೆ ಚೆ|
ಲ್ಯಾಗಿರೆ ದಾನಮೇಘ ರುತಿಯ೦ತಿರೆ ಮಂಗಳ ಶೂರ್ಯನಾದಮಾ||
ಶಾಗಜ ಕರ್ಣಪೂರಮೆನೆರಾಗ ರಸಾಮೃತವಾಧಿ ಘೋಷದಂ||
ತಾಗಿರೆ ಪುಣ್ಯಪಾಠಕ ರವಂ ಪೊಸತಾದುದು ರಾಜಮಂದಿರಂ||೧೧೫||
ದೇಸಿ ವಿಲಾಸಮಂ ಪಡೆಯೆ ಗೊಂದಳವಕ್ಕಣವಾಗಳಾ ನೃಪಾ|
ವಾಸದೊಳಾಡಿದತ್ತೆಸೆಯೆ ಪಾಣಿತಲಂ ಪಡೆವಂತೆ ಕುಂಕುಮ||
ಸ್ಥಾಸಕಮಂ ಕುರುಳ್, ಕೆದರುವಂತೆ ತಮಾಲ ನವ ಪ್ರವಾಳಮಂ|
ಕೇಸಡಿ ಪಾಸುವಂತೆ ತಳಿರ೦ ನಗೆಗಣ್ಣುಗುಳ್ವಂತೆ ನೆಯ್ದಿಲಂ||೧೧೬||
ಚ|| ಉದಯಿಪುದುಂ ತ್ರಿಲೋಕತಿಲಕಂಗೃಹದೇವತೆಯರ್ ಪ್ರಸನ್ನವೇ|
ಹದಿನೆಸೆದಾಡುವಂತೆ ಮಣಿಭಿತ್ತಿಗಳಂ ಮಣಿ ಕುಟ್ಟಿ ಮಂಗಳಂ||
ಪುದಿದು ಮನಕ್ಕೆ ಸಂತಸವನಿತ್ತುವು ನೃತ್ಯರಸಾಮೃತ ಪ್ರವಾ||
ಹದೊಳವಗಾಹಮಿರ್ದ ಗಣಿಕಾಪ್ರಚಯ ಪ್ರತಿಬಿಂಬ ಲಕ್ಷ್ಮಿಗಳ್||೧೧೭||