ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೬

ರಾಮಚಂದ್ರಚರಿತಪುರಾಣಂ

       ಆ ಪ್ರಸ್ತಾವದೊಳ್ ದಶರಥಮಹೀನಾಥಂ ಸುತಮುಖ ನಿರೀಕ್ಷಣ ಭರದಿಂ
ಪಾರಿಜಾತಂ ಕೊರಕಿತಮಾದಂತೆ ಪುಲಕಿತಶರೀರನಾಗಿ---

ಮ|| ಜಿನ ಪೂಜೋತ್ಸವಮಂ ಸುರೇಂದ್ರನಳವಲ್ತೆಂಬನ್ನೆಗಂ ಮಾಡಿ ಬೇ|
     ಳ್ಪನಿತಂ ಬೇಳ್ಪವರ್ಗಿತ್ತು ಕಲ್ಪಕುಜನಂ ಕೀಳ್ಮಾಡಿ ಸನ್ಮಾನಭಾ||
     ಜನರಂ ಸಜ್ಜನರಂ ವಿಚಿತ್ರ ವಸನ ಸ್ರಗ್ಭೂಷಣಾಲೇಪದಿಂ|
     ಜನಪಂ ಮನ್ನಣೆಮಾಡಿ ತತನಯ ಜನ್ಮೋತ್ಸಾಹಮಂ ಮಾಡಿದಂ||೧೧೮||

ಚ|| ದಿವಿಜ ಕುಜ೦ಗಳಾರವೆಗಳಾದುವು ಸಿದ್ಧರಸಂ ತಟಾಕಮಾ|
     ದುವು ಸುರಧೇನು ಪಿಂಡಳಿಯದೊ೦ದೆಡೆಯೊಳ್ ನೆರೆದಿರ್ದುವೆಂಬಿನಂ||
     ಭುವನ ಜನಕ್ಕೆ ಬಾಂಧವ ಜನಕ್ಕಖಿಲಾರ್ಥಿಜನಕ್ಕೆ ಹರ್ಷದಿ೦||
     ದವರಿವರೆನ್ನದಿತ್ತು ಮೆಳೆದಂ ಜನಸಂ ಸುತ ಜಾತಕರ್ಮಮಂ||೧೧೯||

     ಅಂತು ಜಾತಕರ್ಮೋತ್ಸವಮಂ ಮಾಡಿ ದಶಮದಿನದೊಳ್ ಪದ್ಮಾಲಂಕೃತ ವಿಶಾಲವಕ್ಷಸ್ಸ್ಥಲನಪ್ಪುದರಿ೦ ಪದ್ಮನುಂ, ಸಕಲ ಶುಭ ಲಕ್ಷಣಾಭಿರಾಮನಪ್ಪುದರಿಂ ರಾಮಚಂದ್ರನುಮೆಂದಿವು ಮೊದಲಾಗೆ ಪೆಳವುಮನ್ವರ್ಥನಾಮಂಗಳನಿಟ್ಟು ಕತಿಪಯ
ದಿನಂಗಳೊಳ್--

     ಕಂ|| ರವಿಕಿರಣಂ ಸೋಂಕದೆ ಹಾ
           ಸ ವಿಲಾಸಂಬಡೆದ ಕಮಲಮಂ ನೆನೆಯಿಸುಗುಂ
           ನೆವಮಿಲ್ಲದ ನಗೆಯಿಂದೊ
           ಪ್ಪುವಾಸ್ಯಮುತ್ತಾನಶಯ್ಯೆಯೊಳ್ ಬಾಲಕನಾ||೧೨೦||

           ನಿರಪೇಕ್ಷಕಮೆನಿಸಿಯುಮೇಂ
           ಪರಿದತ್ತಲೆ ಪರಿವ ಸುತನ ಕಣ್ಬೊಳಪಿಂದಂ||
           ತೆರೆಮಸಗಿದುದರಸಿಯ ಮೋ
           ಹ ರಸಂ ಚಂದ್ರಿಕೆಯ್ದಿನಮೃತ ಜಲರಾಶಿಯವೋಲ್||೧೨೧||

           ಹ ರಿನೀಲೋಪಲ ವಿರಚಿತ
           ಮರಳೆಲೆ ಬಾಲಕನ ನಿಟಿಲದೊಳ್ ನಯನ ಮನೋ|
           ಹರಮಾದುದರ್ಧಚಂದ್ರೋ
           ದರದೊಳ್ ಕಣ್ಗೊಳಿಸಿ ತೋರ್ಪ ಕರ್ಪೆ೦ಬಿನೆಗಂ||೧೨೨||