ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಭಿನವ ಪಂಪನ

ರಾಮಚಂದ್ರ ಚರಿತ ಪುರಾಣದ ಕಥೆ



ಆಶ್ವಾಸ ೧- ಪೀಠಿಕೆ


ತ್ರಿಭುವನ ಲಕ್ಷ್ಮಿಗೆ ನಾಭಿಮಂಡಲದಂತಿರುವ ಜಂಬೂದ್ವೀಪವು ಪ್ರಪಂಚ ದಲ್ಲೆಲ್ಲ ಬಹಳ ಮನೋಹರವಾಗಿ ಮೆರೆಯುತ್ತಿರುವುದು. ಅದು ನಟ್ಟನಡುವೆ ಜಿನ ಜನ್ನೊತೃವಾಭಿಷೇಕದ ರನ್ನ ಗದ್ದುಗೆಯಾದ ಪೊಂಬೆಟ್ಟವು ಹೊಳೆಯುತ್ತಿರುವುದು. ಅದರ ದಕ್ಷಿಣ ದಿಕ್ಕಿನಲ್ಲಿ ಚಂದ್ರಮಂಡಲದಂತೆ ಕಣ್ಣಳಿಗೆ ಸೊಬಗನ್ನು ಬೀರುತ್ತಿರುವ ದಕ್ಷಿಣ ಭರತ ಖಂಡದ ಆರಾಖಂಡವು ವಿರಾಜಿಸುತ್ತಿರುವುದು. ಅದರಲ್ಲಿ ಕಾಲಾನು ಗತವಾಗಿ ಅನೇಕ ಕಲ್ಪಗಳು ಕಳೆದ ನಂತರ ಕುಲಧರಾವತಾರದಲ್ಲಿ ಪರಂಪರೆಯಾಗಿ ಹದಿನಾಲ್ಕು ಮಂದಿ ಮನುಗಳು ಹುಟ್ಟಿದರು. ಈ ಮನುಗಳ ಕಾಲದಲ್ಲಿ ಜನರ ಸ್ಥಿತಿಯು ಮೊದಲಿದ್ದ ನಿರ್ಜರಾವಸ್ಥೆಯಿಂದ ಕ್ರಮೇಣ ಮಾರ್ಪಡುತ್ತ ಬಂದಿತು. ಕಡೆಯ ಮನುವಾದ ನಾಭಿರಾಜನು ಜನರ ಜೀವನಕ್ಕಾಗಿ ಕೃಷಿ ವಿಷಯ ವನ್ನು ಬೋಧಿಸಿ ಕಬ್ಬನ್ನು ಬೆಳೆದು ಉಪಯೋಗಿಸುವ ಉಪಾಯವನ್ನು ಜನರಿಗೆ ಕಲಿಸಿದನು. ಈ ಕಾರಣದಿಂದ ಇವನ ವಂಶಕ್ಕೆ ಇಕ್ಷಾಕು ವಂಶವೆಂಬ ಹೆಸರಾ ಯಿತು; ಈತನ ವಲ್ಲಭೆ ಮರುದೇವಿ ; ಇವರಿಗೆ ಪುರುದೇವನೆಂಬ ಮಗನು ಹುಟ್ಟಿ ಅಯೋಧ್ಯೆಗಧಿಪತಿಯಾದನು. ನಾಡುಗಳಲ್ಲೆಲ್ಲ ಕೌಶಲದೇಶವೂ ಪುರಗಳಲ್ಲೆಲ್ಲ ಸಾಕೇತ ಪುರವೂ ಹೇಗೆ ಪ್ರಸಿದ್ದಿ ಪಡೆದುವೋ ಹಾಗೆಯೇ ರಾಜರುಗಳಲ್ಲೆಲ್ಲ ಪುರುದೇವನು ಪ್ರಖ್ಯಾತನಾದನು. ಆ ವಂಶದಲ್ಲಿ ಅಪ್ರತಿಮನಾದ ವಿಜಯರಥನು ಹುಟ್ಟಿದನು; ಈತನ ಮಗನು ಸುರೇಂದ್ರಮನ್ಯು ; ಈತನಿಗೆ ವಜ್ರಬಾಹು ಪುರಂದರರೆಂಬಿಬ್ಬರು ಮಕ್ಕಳು ಹುಟ್ಟಿದರು.


ಆಶ್ವಾಸ ೨- ದಶರಥನ ವಂಶಾನುಕ್ರಮಣಿಕೆ


ವಿಜಯರಥನು ರಾಜ್ಯಭಾರ ಮಾಡುತ್ತಿರುವಾಗ ಒಂದು ದಿನ ನಾಗಪುರದ ದೊರೆಯಾದ ಇಭವಾಹನನ ಮಗನಾದ ಉದಯಸು೦ದರನು ಆತನ ಸಭೆಗೆ ಬ೦ದ. ಕಾಣಿಕೆಯನ್ನೊಪ್ಪಿಸಿ ತನ್ನ ತಂಗಿಯಾದ ಅನ೦ಗೋನ್ಮಾದೆಯನ್ನು ವಿಜಯರಥನ ಮೊಮ್ಮಗನಾದ ವಜ್ರಬಾಹುವಿಗೆ ಕೊಟ್ಟು ಮದುವೆ ಮಾಡಬೇಕೆಂಬ ಉತ್ಸಾಹದಿಂದ