ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

2

ಪ೦ಪರಾಮಾಯಣದ ಕಥೆ

ತನ್ನ ತಂದೆಯು ತನ್ನನ್ನು ಕಳುಹಿಸಿದನೆಂದು ಹೇಳಲು, ದೊರೆಯು ಸಂತೋಷ ಪಟ್ಟು, ಅದಕ್ಕೆ ಸಮ್ಮತಿಸಿದನು. ಕೂಡಲೆ ಶುಭದಿನ ಮುಹೂರ್ತ ದಲ್ಲಿ ವಿವಾಹ ಮಂಗಳೋಪಕರಣಗಳೊಡನೆ ವಜ್ರ ಬಾಹುವು ಆನೆಯನ್ನೇರಿ ಉಚಿತ ಪರಿವಾರ ದೊಡನೆ ಪ್ರಯಾಣವನ್ನು ಬೆಳೆಯಿಸಿ ವಸಂತಗಿರಿಯ ಬಳಿಗೆ ಬಂದು ಅದರ ಸೊಬಗ ನ್ನು ನೋಡುತ್ತಿರುವಲ್ಲಿ, ತಪಸ್ಸು ಮಾಡುತ್ತಿರುವ ಗುಣಸಾಗರ ಭಟ್ಟಾರಕನೆಂಬ ಒಬ್ಬ ಮುನಿಯು ಆತನ ಕಣ್ಣಿಗೆ ಬಿದ್ದನು. ವಜ್ರಬಾಹುವು ಆ ಮುನಿಯನ್ನು ಕಂಡು ಅತ್ಯಂತ ಭಕ್ತಿಯಿಂದ ಕೂಡಲೆ ಆ ಮುನಿಯ ಬಳಿಯಲ್ಲಿ ದೀಕ್ಷೆಗೊಂಡನು. ಇದನ್ನು ನೋಡಿ ಉದಯಸುಂದರನೂ ಇಪ್ಪತ್ತು ಮೂವರು ಅರಸುಮಕ್ಕಳೂ ತಪಕ್ಕೆ ನಿಂತರು. ಅಣ್ಣನು ದೀಕ್ಷೆಗೊ೦ಡ ವಾರ್ತೆಯನ್ನು ಕೇಳಿ ಅನಂಗೋನ್ಮಾದೆಯೂ ದೀಕ್ಷೆ ಗೊಂಡಳು. ಮದುವೆಗಾಗಿ ಹೊರಟ ಮೊಮ್ಮಗನು ಪ್ರಪಂಚದ ಸುಖವನ್ನು ಬಿಟ್ಟು ತಪೋರಾಜ್ಯದಲ್ಲಿ ನಿಂತದ್ದನ್ನು ಕೇಳಿ ವಿಜಯರಥನು ತನ್ನ ಮೊಮ್ಮಗನಾದ ಪುರಂದರ ನಿಗೆ ಪಟ್ಟವನ್ನು ಕಟ್ಟಿ ತಾನೂ ದೀಕ್ಷೆಗೊಂಡನು. ಪುರಂದರನು ಸಕಲ ಸಾಮ್ರಾಜ್ಯ ಸುಖ ಸುಧಾರಸದಿಂದ ತಣಿದು ಮಗನಾದ ಕೀರ್ತಿಧರನಿಗೆ ಪಟ್ಟವನ್ನು ಕಟ್ಟಿ ತಾನೂ ದೀಕೈಗೊಂಡನು. ಕೀರ್ತಿಧರನು ಒಂದು ದಿನ ಸೂರ್ಯಗ್ರಹಣವನ್ನು ನೋಡಿ ಜಗತ್ತನ್ನು ಬೆಳಗುವ ಸೂರ್ಯನಿಗೂ ರಾಹುವಿನಿಂದ ಈ ಸ್ಥಿತಿಯು ಬಂದಿತಲ್ಲವೆ ಎಂದು, ಭೂಮಂಡಲವನ್ನು ಹುಲ್ಲುಕಡ್ಡಿಗೆ ಸಮಮಾಡಿ, ವೈರಾಗ್ಯ ಪರನಾದನು. ಆಗ ಮಂತ್ರಿಗಳು ರಾಜ್ಯವು ಅನಾಯಕವಾಗುವುದೆಂದು ಭಯಪಟ್ಟು ದೊರೆಯನ್ನು ತನಗೊಬ್ಬ ಮಗನು ಹುಟ್ಟುವವರೆಗೂ ರಾಜ್ಯಭಾರ ಮಾಡುವಂತೆ ಒಡಂಬಡಿಸಿ ದರು. ಮಗನು ಹುಟ್ಟಿದ ಕೂಡಲೆ, ಸುಕೌಶಲನೆಂಬ ಆ ತೊಟ್ಟಿಲ ಮಗುವಿಗೆ ಪಟ್ಟ ವನ್ನು ಕಟ್ಟಿ, ಕೀರ್ತಿಧರನು ಜಿನದೀಕ್ಷೆಗೊಂಡನು. ಸುಕೌಶಲನು ತನ್ನ ಕೀರ್ತಿಯನ್ನು ನಾಲ್ಕು ಕಡೆಗಳಲ್ಲಿಯೂ ಹಬ್ಬಿಸಿ ಅರಸುಗೆಯುತ್ತಿರುವಲ್ಲಿ ಒಂದು ದಿನ ಆತನ ತಾಯಿ ಯಾದ ಸಹದೇವಿಯು ಸಹಚರಿಯರೊಡನೆ ಮಣಿಮಂಟಪದಲ್ಲಿಯ ಮಣಿಮಯಾ ಸನದ ಮೇಲೆ ಲೀಲೆಯಿಂದ ಕುಳ್ಳಿರಲು, ಕಾಂತಿಯುತನಾದ ಒಬ್ಬ ಯತಿಯು ಅರ ಮನೆಯನ್ನು ಹೊಕ್ಕನು. ಇದನ್ನು ನೋಡಿ ಗುಣಹೀನೆಯಾದ ಸಹದೇವಿಯು ತನ್ನ ಮಗನು ಎಲ್ಲಿ ದೀಕ್ಷೆಗೊಳ್ಳುವನೋ ಎಂಬ ಭಯದಿಂದ ಪಾಪಕ್ಕಂಜದೆ ಆ ಯತಿ ಯನ್ನು ಪಟ್ಟಣದಿಂದ ಅಟ್ಟಿಸಿಬಿಟ್ಟಳು. ಸುಕೌಶಲನ ದಾದಿಯೊಬ್ಬಳು ಈ ಯತಿ ಯು ಕೀರ್ತಿಧರನೆಂದರಿತು ನೊಂದು ಎದೆಯನು ಗುದ್ದಿಕೊಳ್ಳುತ್ತ ಅಳತೊಡಗಿದಳು. ಸುಕೌಶಲನು ಇದಕ್ಕೆ ಕಾರಣವನ್ನು ತಿಳಿದು ಬಹಳ ದುಃಖಪಟ್ಟು, ಇಹ ಲೋಕ ಸೌಖ್ಯವು ಮುಖ್ಯವಲ್ಲೆಂದು ತಿಳಿದು, ಕೀರ್ತಿಧರ ಮುನೀಂದ್ರರ ಪಾದಾರ ವಿಂದದಲ್ಲಿ ಮುಕ್ತಿ ಸುಖವನ್ನು ಪಡೆಯುವೆನೆಂದು ನಿಶ್ಚಯಿಸಿ ಅರಮನೆಯನ್ನು ಬಿಟ್ಟು ಹೊರಟು, ಉಪವನವನ್ನು ಸೇರಿ ಕೀರ್ತಿಧರ ಭಟ್ಟಾರಕರ ಮುಂದೆ ನಿಂತನು. ಅವನ ಮಾಂಡಲಿಕರೂ ಸಾಮಂತರೂ ಮಂತ್ರಿಗಳೂ ಅಂತಃಪುರ ಸ್ತ್ರೀಯರೂ ತಮಗಿನ್ನೇನು