ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೮೦

ರಾಮಚಂದ್ರಚರಿತಪುರಾಣಂ

ವಿದೇಹಿ ಸಂತೋಷಂಬಟ್ಟು ನಿಜ ತನೂಜೆಯ ಮುಖ ಸರೋಜಮಂ ನೋೞ್ಪುದುಂ--

           ಕಂ|| ಆ ಸತಿಗೆ ಪುಟ್ಟಿ ಹರ್ಷ ವಿ
            ಕಾಸಂ ಮಧುಬಿಂದುಮಾಲೆ ನೀಲೋತ್ಪಲದಿಂ||
            ಸೂಸುವವೋಲ್ ನಗೆಗಣ್ಣಿಂ
            ಸೂಸಿದುವಾನಂದಬಾಷ್ಪಬಿಂದುವಿತಾನಂ||೨೫||

ತದನಂತರಂ----

      ಕ೦|| ಆ ರಾಜಭವನದೊಳ್ ಮಣಿ
            ತೋರಣಮೋಡರಿಸಿದುವೀಕ್ಷಣಾಕರ್ಷಣಮಂ||
            ಭಾರತಿಕನಾಗೆ ಮಂದ ಸ
            ಮೀರಂ ಕೈನಿದುವುತ್ಸವ ಧ್ವಜ ತತಿಗಳ್||೨೬||


            ಕೆದಱಿದ ಪಿಷ್ಟಾತಕದಿಂ
            ದೊದವಿದ ಪಟವಾಸ ಚೂರ್ಣದಿಂದಳವಡೆ ಕ||
            ಟ್ಟಿದ ರನ್ನದ ಮೇಲ್ಕಟ್ಟಿಂ
            ಪದೆಪಂ ಪುಟ್ಟಿಸಿದುದಿಟ್ಟಳಂ ನೃಪಸದನಂ||೨೭||

            ಬದ್ದವಣಂ ಬಾಜಿಸೆ ದೆಸೆ
            ಬಿದ್ದಂ ಕುಣಿದಾಡೆ ಗಣಿಕೆಯರ್ ಪೂವಲಿಯೊಳ್ ||
            ಮುದ್ದಾಡೆ ತುಂಬಿಗಳ್‌ಮುಗಿ
            ಲುಂದ್ದಂ ಸರಿದತ್ತು ಹರ್ಷರಸವಾ ಪುರದೊಳ್ || ೨೮ ||

ಚ||ಪಡೆದುದು ಗಾಯನೀಮಧುರ ಮಂಗಳ ಗೇಯಮುಪಾಯನಂಗಳಂ|
    ಕುಡಲೆಡೆಯಾಡುತಿರ್ಪ ಗಣಿಕಾ ಮಣಿನೂಪುರ ಕಿಂಕಿಣೀರವಂ|
    ಕುಡಿದುಪಹಾರ ಪುಷ್ಪರಸಮಂ ಮೊರೆದೇಳ್ವಿಳಿನೀ ರವ೦ ಮಗ|
    ಳ್ವಡೆಯೆ ವಿದೇಹಿ ಪೌರಜನ ಕರ್ಣರಸಾಯನದೊಂದು ತಂದಲಂ || ೨೯ ||

 ಅ೦ತು ಜಾತಕರ್ಮೊತ್ಸವಮಂ ಮಾಡಿ ದಶಮದಿನದೊಳ್ ಸರ್ವಲಕ್ಷಣ
ಸಸ್ಯಸಂಪತ್ತಿಗೆ ಸೀತೆಯಪ್ಪುದರಿಂ ಸೀತೆಯೆಂದು ಪೆಸರನಿಟ್ಟು ಕೊಂಡಾಡಿ ನಡ
ಪುತ್ತುಮಿರೆ ಮದನಮೋಹನ ದೀಪಕಳಿಕೆಯಂತೆಯುಂ, ಕಾಮ ಕಲ್ಪಲತೆಯಂತೆ
ಯುಂ, ನಿರಂತರೋಪಚಯಮನಪ್ಪುಕೆಯ್ದು ಭರತಶಾಸ್ವಾದಿ ಸಕಲ ಕಲೆಯೊಳತಿ
ಪರಿಣತಿವಡೆದು-