ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೮೧
ಚತುರ್ಥಾಶ್ವಾಸಂ

      ಕಂ|| ಶಶಿಲೇಖೆಯೆನಲ್ ಕರ್ಪೂ
            ರ ಶಲಾಕೆಯೆನಲ್ ವಿಳೋಚನೋತ್ಸವಮಂ ಮಾ||
            ಡಿ ಶಿಲೀಮುಖಕುಂತಳೆ ಮದ
            ನ ಶಿಲೀಮುಖದಂತೆ ಭುವನಮಂ ಸೋಲಿಸಿದಲ್||೩೦||

            ಮನಸಿಜನಾಜ್ಞಾರೂಪಮಿ
            ದೆನೆ ಕರ್ವಿನಬಿಲ್ಲನೊಲ್ಲದುರ್ಚುವ ಸಮ್ಮೋ||
            ಹನ ಶರಮೆನೆ ಬಾಜಿಸಿದುದು
            ಜನಕಜೆಯ ಬೆಡಂಗು ಮದನ ಜಯ ಡಿಂಡಿಮಮಂ||೩೧||

ಉ|| ಲೀಳೆಯನಪ್ಪುಕೆಯ್ದು ನಯನೋತ್ಸವಮಂ ದಯೆಗೆಯ್ವ ಗಾಡಿಯಿಂ|
     ದೇಳಿಸಿ ಕಾಮ ಕಲ್ಪಲತೆಯಂ ಪರಿಪೂರ್ಣ ಕಳಾವಿಳಾಸದಿಂ||
     ದೇಳಿಸಿ ಚಾರು ಚಂದ್ರಕಲೆಯಂ ನೆಲೆವೆರ್ಚಿಸಿದಳ್ ಮರಾಳ ಲೀ|
     ಲಾಳಸಯಾನೆ ಜಾನಕಿ ವಿದೇಹಿಗೆ ಮೋಹರಸ ಪ್ರವಾಹಮಂ||೩೨||

      ಕ೦|| ಜನಕಂಗೆ ಹರ್ಷದೊದವಂ
            ಜನಿಯಿಸಿ ಜಾನಕಿಯ ರೂಪವಿಭವಂ ಮಾಡಿ||
            ತ್ತನುರೂಪಂ ನೃಪಸುತನಾ
            ವನೋ ವರನೀ ವನಿತೆಗೆಂಬ ಮನದುಮ್ಮಳಂ||೩೩||

ಚಂ|| ಜನಕಜೆ ಮೀರೆ ಶೈಶವಮನೇಂ ತಲೆದೋರಿದುದೋ ನವೀನ ಯೌ|
      ವನ ವಿಭವಂ ಮುಗುಳ್ನಗೆಯನೊಂದೆರಡಂ ನಿಜ ಪಲ್ಲವಾಧರಂ||
      ನನೆಯ ಸರಲ್ಗಳೊಂದೆರಡುಮಂ ಕಡೆಗಣ್ ಕುಡುವುರ್ವು ಕಾಮದೇ|
      ವನ ಕುಡುವಿಲ್ಲನೊಂದೆರಡುಮಂ ಪಡೆದೊಪ್ಪಮನಪ್ಪು ಕೆಯ್ವಿನಂ||೩೪||

      ಅಂತು ಜಾನಕಿ ಜನನೀಜನಕರ ಮನಕ್ಕೆ ಸಂತೋಷಮನೊದವಿಸುತಿರ್ಪಿನ ಮೊ೦ದುದಿವಸ೦--

ಮ||ಸ।।ಚರನೊರ್ವ೦ ಬ೦ದು ಬೇಗಂ ಜನಕನ ಸಭೆಯಂ ಪೊಕ್ಕು ಮೆಯ್ಯಿಕ್ಕಿ ಭೀತಾ|
       ತುರ ಚಿತ್ತಂ ಚೀನ ಚೇಲಾಂಚಲಮನಧರದತ್ತುಯ್ದು ಚಿತ್ತೈಸಿದೊಂದಂ||
       ಹರಿವಂಶೋತ್ತಂಸ ಲೋಕಾದ್ಭುತಮನಸಮಯೋತ್ಪಾತಮಂ ಲೋಕಲುಂಟಾ।
       ಕರಸಂಖ್ಯಾತರ್ ಕಿರಾತರ್ ನೆರೆದು ನಿಖಿಲ ಭೂಚಕ್ರಮಂ ಸೂರೆಗೊಂಡರ್‌||

       ಕಂ||ಇರಿದು ತವಿಸುವೊಡೆ ಪಡೆ ನಾ
            ಡೆರೆಯರ ಕೈಯಳವಿಯಲ್ತು ಕಂಡಂತುಟನೆ||