ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ರಾಮಚಂದ್ರಚರಿತಪುರಾಣಂ

     ಕಂ||ದೇವರ್ ದಿಗ್ವಿಜಯ ನ್ಯೂಸ
          ನಾವಷ್ಟಂಭದೊಳೆ ನಡೆಯದಾಟವಿಕರೊಳಾ||
          ದೀವಿಗ್ರಹಕ್ಕೆ ನಡೆವುದಿ
          ದಾವುದೊ ಜಸಮಿರುಪೆಗಾನೆ ಮೊಗಮಿಕ್ಕುವುದೇ||೪೭||

     ಅದರಿ೦ ದೇವರೀ ಬೆಸನನೆಮಗೆ ದಯೆಗೆಯ್ವುದಿವರನಾಸ್ವಾದಿತ ರಣ ರಸರ್
ಕಿರಿಯರೆಂದು ಬಗೆಯವೇಡದೆಂತೆನೆ--

ಚ|| ಕಿಡಿ ಕಿರಿದಾದೊಡಂ ಸುಡದೆ ಕಾನನಮಂ ತರುಣಾರ್ಕನಾದೊಡಂ|
     ಕಿಡಿಸನೆ ತೀವ್ರಮಪ್ಪ ತಮಮಂ ಹರಿ ಬಾಲಕನಾದೊಡಂ ಪಡ||
     ಲ್ವಡಿಸನೆ ಗಂಧಸಿಂಧುರ ಘಟಾವಳಿಯಂ ಕಿರುಗೂಸೆನಲ್ಕೆವೇ||
     ಡೆಡರಿದರಂ ಜವಂಗೆ ಪೊಸತಿಕ್ಕನೆ ವಿಕ್ರಮಶಾಲಿ ಲಕ್ಷ್ಮಣಂ||೪೮||
     
     ಕಂ||ಮಾತೇನೊ ಕಿಂಕಿರಾತಂ
          ಪೂತಂತೆ ಕಿರಾತಸೇನೆ ಪುಣ್ಬಡೆ ಶರ ಸಂ||
          ಘಾತದ ಸವಿದೋರ್ಕು೦ ರಘು
          ಜಾತಂಗೆಂಟನೆಯ ಕೇಶವಂಗಿದಿರುಂಟೇ||೪೯||

ಸ್ರ||ಅಂಬೇರಿಂಗಾಂತರಂ ತತ್ತರದರಿದು ಭುಜಾಗರ್ವಮಂ ಬಿಟ್ಟು ಬಾಯ್ವಿ|
    ಟ್ಟಂ ಬೇಯೆಂಬನ್ನೆಗಂ ಬೆಂದಗುಳ್ದು ಮೆರೆದು ಬಿಲ್ಬಲ್ಮೆಯಂ ನಾಡನಿನ್ನೆಂ||
    ದುಂ ಬೇಡರ್ಪೊರ್ದದಂತಾಗಿರೆ ನಿಯಮಿಸಿ ಬಂದಪ್ಪೆನಾನೆಂದು ಶೌರ್ಯಾ|
    ಲಂಬಂ ರಾಮಂ ರಣಕ್ಕಳ್ತಿಗನೆನೆ ಬೆಸನಂ ತಂದೆಯಂ ಬೇಡಿಕೊಂಡಂ||೫೦||
  
    ಅಂತು ಬೆಸನಂ ಬೇಡಿಕೊಂಡು ತಂದೆಯಂ ಬೀಳ್ಕೊಂಡು--

    ಕಂ||ಅಪರಿಮಿತಮೆನಿಪ ಚತುರಂ
         ಗ ಪತಾಕಿನಿ ತಮಗೆ ಕದನಕೇಳಿಗೆ ನೆರಮH
         ಲ್ತುಪಕರಣಮೆನಿಪ ಕೋದಂ
         ಡಪಾಣಿಗಳ್ ದಂಡಪಾಣಿಗೆಣೆಯೆನೆ ತಳರ್ದರ್||೫೧||

         ಗೆಲಲರಿದಿವರಿರ್ವರ ದೋ
         ರ್ಬಲಮಂ ತ್ರಿಭುವನದೊಳಿವರ್ಗೆ ನೆರಮಲ್ತು ಚತು||
         ರ್ಬಲಮಿನಿತುಂ ನುಡಿ ನೆರವೆನೆ
         ಬಲಾಚ್ಯುತರ್ ನಿಚ್ಚವಯಣದಿ೦ದೆಯ್ತಂದರ್‌||೫೨||


1, ದಾಂತರಂ, ಘ,