ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೫

ಚತುರ್ಥಾಶ್ವಾಸಂ

     ಅಂತೆಯ್ದೆವರ್ಪುದುಮವರನುಚಿತ ಪ್ರತಿಪತ್ತಿಯಿಂ ಮನ್ನಿಸಿ--

ಪೃ||ನೆಲಂ ಬೆಸಲೆಯಾದವೋಲ್ ನೆರೆದ ಲುಬ್ಧಕವ್ಯೂಹಮಂ|
    ಗೆಲಲ್ ನೆರೆದೆನೀಗಳೆಂಬ ಬಲಗರ್ವಮಂ ತಾಳ್ದಿದ೦||
    ಬಲಾಚ್ಯುತರ ಕೂಟದಿಂ ಜನಕನುಗ್ರ ವನ್ಯದ್ವಿಪಂ|
    ಬಲ೦ಬಡೆದುದೆಂಬಿನಂ ವಿಕಟ ದಂತಕೂಟಂಗಳಿ೦||೫೩||

    ಅನಂತರಮುದಾತ್ತರಾಘವನಮೋಘ ಶರಾಸನಾದಿ ವಿವಿಧಾಯುಧ ಸನಾಥ
ನಾಗಿ ರಥವನೇರಿ ಲಕ್ಷ್ಮಣಂ ಕಾಲ್ಗಾಪಿನೊಳ್ ನೆರೆದುಬರೆ ಜನಕ ಕನಕರಿರ್ವರ್
ವಿಜಯ ಗಜಮನೇರಿ ಮುಂಗೋಲೊಳ್ ನಡೆಯೆ ನಾಡ ಗಡಿಯನೆಯ್ದಿ ಬರ್ಪ ಸಮಯದೊಳ್--

ಮ|| ಬಲಭಾರಕ್ಕೆ ಬಿಗುರ್ತು ಸುಯ್ಯೆ ಫಣಿರಾಜಂ ಸುಯ್ದಸುಯ್ಲಿಂ ಧರಾ|
      ವಲಯಂ ಕಿಳ್ತು ನಭಕ್ಕೆ ಪಾರಿದಪುದೋ ಪೇಳಿಂಬಿನಂ ಭಾನು ಮಂ||
      ಡಲಮಂ ಮಂಡಳಿಸಿತ್ತು ತದ್ಬಲ ಪದ ಪ್ರೋಧ್ಧೂತ ಧೂಳೀಚ್ಚಟಾ|
      ವಲಿ ಕಲ್ಪಾಂತ ಕೃಶಾನುಧೂಮ ಪಟಲೀ ಶಂಕಾ ಸಮುತ್ಪಾದಕಂ||೫೪||

      ಅನಂತರಂ ನೆಲ೦ ಬೆಸಲೆಯಾದಂತೆ ಬರ್ಪ ಬೇಡವಡೆ ರಸೆಯಿನೊಗೆವಸು ರರ ಪಡೆಯ೦ತೆಯು೦,ವ್ಯೋಮತಳದಿನಿಳಿವಧೂಮಕೇತುಗಳಂತೆಯುಂ, ಕಡೆಗಾಲ
ದೊಳಡೆವೊತ್ತಿ ಸುತ್ತಲುಂ ನೆಗೆವನಲವ ಪೊಗೆಯಂತೆಯುಂ, ನಡೆವ ನಂಜಿನ ಬಿಂಜ
ದಂತೆಯುಂ, ಕರ್ಬುಲಿಯ ಪಿಂಡಿನಂತೆಯುಂ, ಸಿ೦ಗದ ಜಂಗುಳಿಯಂತೆಯುಂ, ಜವ ನೆರ್ಮೆವೋರಿವಿಂಡಿನಂತೆಯುಂ, ಬರಸಿಡಿಲ ಬಳಗದಂತೆಯುಂ, ಕಾಲಾಯಸ ಕಾಳ
ಪುರುಷ ಪರಿಷಜ್ಜನದಂತೆಯುಂ, ಕಾಳರಕ್ಕಸನ ಸಂತಾನದಂತೆಯುಂ,ಕುಲನಗ
ಮಹತ್ತರ ಕುಲದಂತೆಯುಂ, ಅರ್ಧಪ್ರಹಾರವರ್ಧನದಂತೆಯುಂ, ಯಮ ಘಂಟಾ ಸಂಘಾತದಂತೆಯುಂ, ಮಾರಿಯ ಮೂರಿಯಂತೆಯುಂ, ಕ್ರೂರಗ್ರಹ ಪರಿಗ್ರಹ
ದಂತೆಯುಂ, ಅಗುರ್ವುಮದ್ಭುತಮುಮಾದುದಲ್ಲಿಂಬಳಿಯಂ--

ಚ|| ಕರಿಗಳೆರಂಕೆವೆಟ್ಟುಗಳವೋಲ್ ನಡೆತ೦ದುವು ವಾಜಿರಾಜಿಗಳ್|
     ತೆರೆಗಳ ತೆರ್ಕೆಯಂತೆ ಕವಿತಂದುವು ಲುಬ್ಧಕ ಸೈನಿಕಾಬ್ಧಿಯೊಳ್||
     ಕರಿ ಮಕರಂಗಳಂತೆ ರಥಕೋಟಿಗಳಾಸುರಮಾಗೆ ಬಂದುವಾ|
     ವರಿಸಿದುವಾವಗಂ ಗಗನಮಂ ವೃಕ ಕಾಕ ಸೃಗಾಲ ಕೇತುಗಳ್||೫೫||


1. ಗೋಳೊಳ್. ಕ. ಖ. ಗ. ಘ. ಚ
2. ಘ೦ಟ, ಚ,