ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ರಾಮಚಂದ್ರ ಚರಿತಪುರಾಣಂ

ಮ||ಸ್ರ||ಕರೆ,ವೋಯೆಂಬತ್ತಲಿತ್ತಲ್ ತೊಲಗು ತೊಲಗು ಪೋಗೆಂಬ ಬಾಯೆಂಬ ಬಿದ್ದಂ|
        ಬರಿಯೆಂಬೋವೋವೊ ಕೂಕೂಗುಗಿದೆನುಡಿದೆನೇಗೆಯ್ವೆನೆಂಬುಚ್ಚನೀಚ೦||
        ಪುರುಷ ಸ್ತ್ರೀ ಬಾಲ ವೃದ್ದ ಸ್ಥವಿರ ಯುವ ಜನಾತಂಕ ಶ೦ಕಾತಿರೇಕಂ|
        ಪುರದೊಳ್ಪೊಣ್ಮಿತ್ತು ವಿದ್ಯಾಧರ ಕೃತಕ ಹಯಾಟೋಪ ಘೋರ ಪ್ರಲಾಪಂ||

ಉ||ಬಾಲಕರಂ ಕೆಲರ್ ಮುದುಪರಂ ಕೆಲರಕ್ಷಿವಿಹೀನರಂ ಕೆಲರ್‌|
    ಬಾಲೆಯರಂ ಕೆಲರ್ಪಿಡಿದು ಚೆಚ್ಚರದಿಂದರರೀ ಪುಟಂಗಳ೦||
    ಕೀಲಿಸಿ ತಮ್ಮತಮ್ಮ ಮನೆವೊಕ್ಕಿರೆ ತತ್ಪುರಮೆಲ್ಲಮಲ್ಲಕ|
    ಲ್ಲೋಲಮಕಾಲಮೃತ್ಯು ಭಯ ವಿಹ್ವಲಮಾದುದು ಸೂಕಳಾಶ್ವದಿಂ||೧೧೨||

    ಆ ಸಮಯದೊಳ್--

 ಚ|ಕಳಕಳನಾದಮಾದ ತೆರನಂ ಜನಕಂ ತಿಳಿದಾ ಸವಾರಿಗಳ್|
    ತಳೆದು ಖಲೀನನಂ ತುರಿಪದಿಂ ಬರೆ ಸಂದಿಸಿ ಹಿಂದೆ ರಾಜ ಮಂ ||
    ಡಳಿ ಬರೆ ಬಂದು ನಿಂದು ಹಯಮಂ ನಡೆ ನೋಳ್ಪುದುಮಾಕ್ಷಣಾ೦ಶುಮಂ |
    ಡಳಿಸಿದುದಿಂದು ರಶ್ಮಿಯೊಳೆ ತೀರ್ಚಿತೊಡರ್ಚಿದ ಕೀಳಿ ನೇಣವೋಲ್॥೧೧೩||
 
    ಅಂತು ನೋಡಲೊಡಂ--

    ಕ೦|| ಸೂಕಳಮಲ್ತಿದು ಸಕಲ ಗು
          ಣಾಕರಮೆನೆ ಜನಕ ಮುಖ ವಿಲೋಕನದಿಂದು||
          ದ್ರೇಕಮನುಳಿದಿರೆ ವಾಹಕ
          ರಾಕುಟಿಲಾಶ್ವಕ್ಕೆ ಖರ ಖಲೀನಮನಿಟ್ಟರ್||೧೧೪||

ಉ|| ಒಟ್ಟಜೆಗೆಟ್ಟು ಕಾರ್ಯವಶದಿಂ ಖಚರಂ ಪಿಡಿಪಟ್ಟು ಪಲ್ಲಣಂ |
     ಗಟ್ಟಿಸಿಕೊಂಡುಮೇನೊ ಮುಖಲೀನ ಖಲೀನ ಕಶಾಭಿಘಾತದಿಂ ||
     ತೊಟ್ಟನೆ ನೋವನೆಯ್ದಿದನಿದಾವುದು ಚೋದ್ಯಮೊ ಕೈತವಕ್ಕೆ ಕೈ|
     ಗೊಟ್ಟ ಖಳಂಗೆ ತೀವ್ರ ಪರಿವೇದನ ಬಂಧನವಾಗದಿರ್ಕುಮೇ ||೧೧೫||

     ಅಂತು ಮಾಯಾಹಯಮಂ ಮಂದುರಂಬುಗಿಸುವುದುಮಾಸಮಯದೊಳ್--

     ಕಂ|| ಮೃಗನಾಭಿಯನಾನೆಯ ಕೊ೦
           ಬುಗಳಂ ಪೆರ್ವಿದಿರ ತೋರಮುತ್ತಂ ಕಣ್ಬೀ||
           ಲಿಗಳಂ ಮುಂದಿಟ್ಟೊರ್ವ೦
           ಪುಗುತಂದಂ ರಾಜಭವನದೊಳಗಂ ಶಬರಂ||೧೧೬||