ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಚತುರ್ಥಾಶ್ವಾಸಂ

      ಅಂತವನಿಗವತರಿಸಿ ಪುರಶ್ರೀಯ ಮುಖಶ್ರೀಯನನುಕರಿಸುವ ಕಮಲವನ
ಸಮಿಾಪದೊಳ್ ವಿಶ್ರಮಿಸಿ ಜನಕಂ ಹಯಪ್ರಿಯನಪ್ಪುದಂ ತಿಳಿದು--

ಮ|| ನೃಪನೀತಂ ತುರಗಪ್ರಿಯಂ ವಿಷಮ ವಾಹಾರೋಹಣಾತ್ಯಂತ ಲೋ|
     ಲುಪನೊಲ್ದೇರದೆ ಮಾಣನೇರಿದೊಡೆ ಸಾಲ್ಗುಂ ಕೊಂಡು ಪೋಪೆಂ ಮದೀ||
     ಯಪುರಕ್ಕೆನ್ನಯ ಪೂಣ್ಕೆ ತೀರ್ಗುಮಿದರಿಂ ಪೋಗೆಂದು ನಿಶ್ಚೈಸಿ ರೂ|
     ಪ ಪರಾವರ್ತನ ವಿದ್ಯೆಯಿಂ ತುರಗರೂಪಾದಂ ಚರಂ ಖೇಚರಂ||೧೦೫||

     ಅಂತು ವಿಷಮ ಹಯ ವೇಷಮಂ ತಳೆದು--

     ಕಂ||ಎಯ್ದದೆಡೆಯೆಲ್ಲಮಂ ಪರಿ
          ದೆಯ್ದಿ ಪುರೋಪವನಮೆಲ್ಲಮಂ ತುಳಿದು ಪಲರ್‌||
          ಬಾಯ್ದೆರೆದು ಪುಯ್ಯಲಿಡೆ ಕಡು
          ಕೆಯ್ದುಕೈವಗುದುರೆ ಪೊಳಿಲನಳಿಲಿಸಿತಾಗಳ್||೧೦೬||

          ಅದು ತಿಗುರಿಯಂದದಿಂ ತಿರಿ
          ದುದು ಮುಂದಂ ನೆಗೆದು ಪಿಂದನೀಡಾಡಿ ಬಿಸಿ||
          ಲ್ಗುದುರೆಯವೋಲ್ ಬಿರುವರಿವರಿ
          ದುದು ಕೆಳರ್ದ ಕೃತಾಂತನಿಂತಿದೆನೆ ಕೃತಕಾಶ್ವಂ ||೧೦೭||

          ಕತ್ತರಿಸಿ ಕಿವಿಗಳಂ ನಸು
          ಗುತ್ತುತ್ತುಂ ಮೆಯ್ಯ ಖಂಡಮಂ ಘುರುಘುರೆನು||
          ತ್ತೊತ್ತರಿಸೆ ಘೋಣ ಪವನನು
          ದಾತ್ತಂ ಮಸಗಿತ್ತು ವಾಜಿ ಪೆರ್ಮಾರಿಯವೋಲ್||೧೦೮||

          ಖರ ಖುರ ಹತಿಯಿಂ ಖರಮಂ
          ಕರಭಂಗಳನಟ್ಟಿ ಮುಟ್ಟಿ ದಂತಾಹತಿಯಿಂ||
          ಪರಿದೊರಸಿ ಮನುಷ್ಯರನಾ
          ತುರಗಂ ಪುಗಿಸಿತ್ತು ನಿಮಿಷದಿಂ ಯಮಪುರಮಂ||೧೦೯||

          ಇಡೆ ಗುಂಡೆಯ್ದವು ಪೊಯ್ದೊಡೆ
          ಬಡಿಕೊಳ್ಳವು ತುತ್ತೆ ಕಯ್ದುವುರ್ಚವು ಮನದಿಂ||
          ಕಡುಗಡಿದು ಮಿಥಿಲೆಯಂ ಕೂ
          ಗಿಡಿಸಿದುದದ್ಭುತ ತುರಂಗಮಂ ಸಿಂಗದವೋಲ್||೧೧೦||


1. ಪಾಯ್ದೆಡೆ. ಚ.