ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ರಾಮಚಂದ್ರ ಚರಿತಪುರಾಣಂ

ಗಳ ಸಂಪೂರ್ಣಮೆಸಿಪ್ಪ ಜೈನಗೃಹಮಂ ಪೊಕ್ಕಂ ಜಿನಸ್ತೋತ್ರ ಚಾ|
ಪಳ ಜಿಹ್ವಾಗ್ರ ಸಮಗ್ರ ನಾಟಕ ನಟಂ ಸಾಹಿತ್ಯವಿದ್ಯಾಧರಂ||೧೩೧||

ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀ
ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
ರಾಮಚಂದ್ರ ಚರಿತ ಪುರಾಣದೊಳ್
ಜನಕ ಜಿನಭವನದರ್ಶನ ವರ್ಣನಂ
-ಚತುರ್ಥಾಶ್ವಾಸಂ-