ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ರಾಮಚಂದ್ರ ಚರಿತಪುರಾಣಂ

ಅನಂತರಂ ಜನಕನಂ ವಿಚಿತ್ರ ವಸ್ತ್ರಾದಿಗಳಿನರ್ಚಿಸಿ ವಿದ್ಯಾಧರ ಕುಲಕ್ಕೆ
ಮೊದಲಿಗರಪ್ಪ ನಮಿ ವಿನಮಿಗಳ್ಗೆ ನಾಗರಾಜನಿತ್ತ ನಾಗ ವಿದ್ಯಾಧಿಷ್ಠಿತಂಗಳಪ್ಪ
ವಜ್ರಾವರ್ತ ಸಾಗರಾವರ್ತ೦ಗಳೆಂಬ ಬಿಲ್ಗಳಂ ಹಲಾಯುಧ ಗದಾಯುಧ ಸಮನ್ವಿತಂಗಳಂ ತರಿಸಿ ಕೊಟ್ಟವರ್ಕೆ ಚ೦ದ್ರವರ್ಧನನೆಂಬ ಮಹತ್ತರನಂ ಕಾಪುವೇಳ್ದು
ಕಳಿಪುವುದುಂ ವಿಯಚ್ಚರ ಬಲಂಬೆರಸವರಿರ್ವರುಂ ಮಣಿಮಯ ವಿಮಾನಂಗಳ
ನೇರಿ ಪವನ ಪಥದೊಳ್ ಮನಃಪವನವೇಗದಿಂ ಮಿಥಿಳೆಗೆ ಬರುತ್ತಿರ್ಪುದುಂ--

ಚ||ಗಗನದೊಳೊಡ್ಡುಗಟ್ಟ ಬೆಳಗಾ ಬರುತಿರ್ಪುದದಲ್ತು ರೋಹಣಾ|
ದ್ರಿಗಳಿತರ್ಪುವಲ್ಲವು ನವಗ್ರಹ ಮಂಡಲಮಲ್ತು ಕಲ್ಪವಾ||
ಸಿಗರ ವಿಮಾನಮಲ್ತು ಜನಕಂ ಬರುತಿರ್ದಪನೆಂದು ಕಣ್ಬೊಲಂ|
ಬುಗೆ ನಲಿದತ್ತು ದಿಟ್ಟವೆಳಗಿ೦ ಗುಡಿಗಟ್ಟಿ ಪುರಾಂಗನಾಜನಂ||೨೭||

ಉ||ಎಲ್ಲಿಗೆ ಪೋದನೆಮ್ಮರಸನಿನ್ನೆಮಗಾರ್ ಶರಣೆಂಬ ಭೇದಮಂ|
ತಲ್ಲಳಮಂ ಮೊದಲ್ಗಿಡಿಸಲಾ ಬರುತಿರ್ದನೆ ನಮ್ಮ ಸೈಪಿನಿ೦||
ದಿಲ್ಲಿಗೆ ಭೂಪನೆಂದು ನಡೆ ನೋಳ್ಪೆಡೆಯೊಳ್ ನಿಜ ಲೋಚನ ಪ್ರಭಾ|
ಪಲ್ಲವದಿಂ ವಿಪಲ್ಲವಮನಿತ್ತುದು ಚಂದ್ರಿಕೆಗಂಗನಾಜನಂ||೨೮||

ಅ೦ತು ಜನಕಂ ಮಿಥಿಲೆಯಂ ಪೊಕ್ಕು ಚಂದ್ರವರ್ಧನಾದಿಗಳನುಚಿತ ಪ್ರತಿಪ
ತ್ತಿಯಿಂ ಮನ್ನಿಸಿ ಬೀಡಿಂಗೆ ಬೆಸಸೆ ಪುರದ ಬಹಿರ್ಭಾಗದ ರಮ್ಯಪ್ರದೇಶದೊಳ್--

ಮ||ನೆಲೆಮಾಡಂಗಳನೇಕಮಾಗೆ ನೆಲೆವೀಡಂ ವಿದ್ಯೆಯಿಂ ಮಾಡಿ ಮೆ|
ಯ್ಗಲಿ ತಳ್ವಿಲ್ಲದೆ ಚಂದ್ರವರ್ಧನವನಭೀಪ್ಸಾವಲ್ಲರೀ ವರ್ಧನಂ||
ಬಲ ನಾರಾಯಣ ಬಾಹು ದಂಡದಳವಂ ನೋಡಲ್ ಗದಾದಂಡದಿಂ|
ಹಲದಿಂ ಕೂಡಿದ ಚಾಪ ದಂಡ ಯುಗಮಂ ಬೈತಲ್ಲಿ ಕಾದಿರ್ಪುದುಂ||೨೯||

ಅನ್ನೆಗಮಿತ್ತಲ್--
ಕಂ||ಪ್ರಿಯ ಸಂಭಾಷಣ ಸಹಿತಂ
ಬಯಸಿದುದಂ ಪರಿಜನಕ್ಕೆ ಸಾಲ್ವಿನಮಿತ್ತ||
ಪ್ರಿಯಮಂ ಪುಟ್ಟಸಿದಂ ಸುರ
ಭಿಯೊಳೇನೌದಾರ್ಯ ನಿಧಿಯೊ ಜನಕ ನರೇಂದ್ರಂ||೩೦||

ಅನಂತರಂ ಮಜ್ಜನ ಭೋಜನಾದಿ ದಿವಸ ವ್ಯಾಪಾರಮಂ ತೀರ್ಚಿ ಸೆಜ್ಜೆವನೆ


೧. ವಿದ್ಯಾವೇಷ್ಟಿತಂ ಚ.
2: ಭೀಷ್ಮಾ , ಕ. ಖ. ಚ.