ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೫

ಪಂಚಮಾಶ್ವಾಸಂ

ಮಂತಾಗದಂತೆಮ್ಮುಮನೆಮ್ಮಭಿಮಾನಮುಮಂ ಕಾದೊಡೆಮ್ಮ ಮಗಳಂ ಕನ್ಯಾ
ರತ್ನಮಂ ಸೀತೆಯನಿತ್ತೆನೆನೆ ಮತ್ತೊರ್ವಖಚರನಿಂತೆಂದಂ;

ಕಂ||ಎರಲೆಯುಮಂ ಬೇಡನುಮಂ
ಧುರದೊಳ್ ಬೆ೦ಕೊಂಡನೆಂದದಂ ಸಾಹಸಮಾ||
ಗಿರೆ ಪೊಗಳ್ವಿ ಸಕಳ ವಿದ್ಯಾ
ಧರ ವಲ್ಲಭ ಸಭೆಯೊಳಿದು ಪೊಗಳ್ತೆಗೆ ಪೊಲನೇ||೨೨||

ಗಗನಾ೦ಗಣದೊಳ್ ನಡೆವರ್
ಬಗೆದೆಡೆಗೇ೦ಬಾಳ್ತೆಯಾದುದಾವೊಡಮೆಗಳ೦||
ಬಗೆದಾಗಡೆ ಕುಡುಗುಂ ವಿ
ದ್ಯೆಗಳೆನೆ ಖೇಚರರ ಮಹಿಮೆ ಭೂಚರರ್ಗುಂಟೇ||೨೩||

ಎನೆ ಜನಕಂ ಮುನಿದು--

ಚ||ಪುರು ಜಿನನಾದಿಯಾಗೆ ಜಿನಪುಂಗವರುಂ ಭರತೇಶನಾದಿಯಾ|
ಗಿರೆ ಸಕಲಾರ್ಧ ಚಕ್ರಿಗಳುಮೇ೦ ಗಳ ಭೂಚರರಲ್ಲದಾರೊ ಖೇ||
ಚರರದನೇಕೆ ನೀನಳಿಯೆ ಪಾಳಿದೊಡೇಂ ಫಲಮುಂಟೆ ಪಕ್ಕಿಯಂ|
ತಿರೆ ಪುರುಷಾರ್ಥಮಲ್ತು ಪರ ನಿಂದೆಯುಮಾತ್ಮ ಗುಣ ಪ್ರಶಂಸೆಯುಂ||೨೪||

ನಿಮಗವರೇತಳಿ೦ದುರದರೆಂದಿಳಿಕೆಯ್ವಿರೋ ವಂಶ ವೀರ್ಯದಿ೦|
ಸಮನವರ್ಗಾರುಮಿಲ್ಲವರಶೇಷ ಕಲಾ ಕುಶಲರ್ ಪ್ರಚಂಡ ವಿ॥
ಕ್ರಮರವರೀ ತ್ರಿಖಂಡ ಭರತೋರ್ವರೆಯಂ ಭುಜ ದಂಡದಿಂಹಮಾ|
ಕ್ರಮಿಸುವ ಗಂಡಗರ್ವದ ಬಲಾಚ್ಯತರಲ್ಲರೆ ರಾಮ ಲಕ್ಷ್ಮಣರ್||೨೫||

ಎಂಬುದುಮಿಂದುಗತಿ ವಿಯಚ್ಚರೇಂದ್ರನಾನುಡಿಗೆ ಕನಲ್ದು--

ಮ||ದೆಸೆಬಿದ್ದಂ ಬಲಗರ್ವಮಂ ಪೊಗಳ್ವೆ ವಜ್ರಾವರ್ತಮಂ ರಾಮನೇ|
ರಿಸೆ ವೈದೇಹಿಯನೀವುದಾರದೊಡೆ ಮತ್ಪುತ್ರಂ ಪ್ರಭಾಮಂಡಲಂ||
ಗೆ ಸರೋಜಾಕ್ಷಿಯನೀವುದೀ ನುಡಿಯನೇಗೊಳ್ಳೆಂಬುದುಂ ರಾಮ ಸಾ|
ಹಸಮಂ ಬಲ್ಲುದರಿ೦ದಮಾನುಡಿಯನೇಗೊಡಂ ಮಹೀವಲ್ಲಭಂ||೨೬||


೧. ಗಂ ಬಾಳ್ತೆಯಾದೊಡಾವೊಡಮೆ. ಚ ೨.ನರಿಯ , ಗ, ಘ ಚ,