ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೩

ಪ೦ಚಮಾಶ್ವಾಸಂ

ಕ೦ || ಪಳಿಕಿನ ಕಂಭಗಳ್ ಕ
ಡ್ಕೊಳಿಸುವ ಮಾಣಿಕದ ಸೊಡರ್ಗಳಿಂ ನಾಡೆಮನಂ ||
ಗೊಳಿಸಿದುವು ಲಸಿತ ಭಸಿತೋ
ಜ್ಜಲಗಾತ್ರಂ ಸ್ಥಾಣು ನೊಸಲ ಕಣೋ ಆದವೋಲ್ ||೧೧೮ ||

ಅರುಣಮಣಿ ದೀಪ ರುಚಿಯಿಂ
ಪರಭಾಗಂಬಡೆದ ನೀಲರತ್ರ ಸಂಭಾ೦ ||
ತರದಬಲಾಪ್ರತಿಬಿಂಬ೦
ಸಿರಿ ನಿರ್ಮಿದಳೆನಿಸಿದತ್ತು ಪೀತಾ೦ಬರನಂ || ೧೧೯||


ಚ ॥ ಉಗುಳ ಪುದಿಂದ್ರಚಾಪ ಲತೆಯಂ ನವರತ್ನ ವಿತಾನಮಾಡಿದ |
ತಗುರುವ ಧೂಪಧೂವು ಲತೆ ತುಂಬಿಯ ನೀಲದ ಮೆಯ್ಕೆ ಹಾಸ್ಯಮ೦ ||
ಪಗಲನಿರುಳೆ ಮಾಣಿಕದ ದೀವಿಗೆ ಕೈಸೆಗೊಟ್ಟು ದುತ್ವತಾ |
ಕೆಗಳನಿಲಂಗೆಮಾಡಿದುವು ಮಾರ್ಗ ನಿರೋಧವನಾ ನಿವಾಸದೊಳ್ ||೧೨೦||

ಆ ಮಂಟಪದ ಮಧ್ಯ ಪ್ರದೇಶದೊಳ್-

ಕ೦ || ಮರಕತ ಮಂಗಲ ವೇದಿಕೆ
ಧರಾ೦ಗನಾ ಕೇಶಬಂಧದ೦ತಿರೆ ಮುಕ್ತಾ ||
ವಿರಚಿತ ರಂಗವಲಿ ಮನೋ
ಹರವಾದುದು ತೊಳಗಿ ಪೊಳೆವ ತಲೆದುಡುಗೆಯವೋಲ್ ||೧೨೧ ||

ಪಸುರ್ವರಲ ಜಗಲಿಯೋಳ್ ರಂ
ಜಿಸಿದುದು ಚೆಂಬೊನ್ನ ಪಟ್ಟವಣೆ ಪಸುರೆಲೆಯಿ೦ ||
ಮುಸುಕಿದ ತಾವರೆಗೋಳದೊಳ್
ಪಸುರ್ಗ೦ದು ಮರಬ್ಬರಲ್ಲ ಪೊಂದಾವರೆವೋಲ್ || ೧೨೨||

ಎಳ ಅಡಕೆಯ ಗೊನೆಯಿಂ ಮಾ
ತುಳುಂಗದಿಂ ನಾರಿಕೇಳಫಲದಿಂ ದ್ರಾಕ್ಷಾ ||
ಫಳದಿಂ ಕಾಂಚನ ಕದಳೀ
ಫಳದಿಂದೊಪ್ಪಿದುದು ವೇದಿಕಾಂತರ್ಭಾಗಂ ||೧೨೩ ||

ಮ || ಬಿಸಸೂತ್ರ ತ್ರಿತಯಂ ಯವಾ೦ಕುರ ಕೃತ ಗ್ರೆವೇಯಕಂ ಪಲ್ಲವೋ |
ಲ್ಲಸಿತಾದರ್ಶ ಸುದರ್ಶನೀಯಮಮಲ ಕುಂದರಂ ಪಂಚರ ||