ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨

ರಾಮಚಂದ್ರಚರಿತಪುರಾಣಂ

ಎಂದು ಪುರಜನ ಪರಿಜನಂಗಳೊರೊಲ್ವರೊಳ್ ನುಡಿಯೆ ಪುರಮಂ ಪೊಕ್ಕು
ಕರುಮಾಡದ ಮುಂದಣ ವಿವಾಹಮಂಡಪದ ಮುಂದೆ ವಾಹನಂಗಳನಿದು ಪು
ಣ್ಯಾ'ಪುಣ್ಯಾ೦ಗನಾಜನದ ತಳಿವ ಸಜಳ ಧವಳ ಕಳಮಾಕ್ಷತಂಗಳಿನಳಕ ವಲ್ಲರಿಯಂ
ಕುಸುಮಿಸುತ್ತು ಮೊಳಗಂ ಪುಗುವುದು೦-

ಮ|| ಹರಿನೀಲ ಸ್ತಂಭನಂ 2 ಜಾಗದ ಸಡಲಿಗೆಯುಂ ತುಂಗ ಶೃಂಗಾರಮುಂ ನೆ |
ರ್ಮೀರೆ ಭಾಸ್ಪದ್ಧಿತ್ತಿಯಂ ಸುತ್ತಿರೆ ಸುರುಚಿರ ಚಿತ್ರ ಹರಿದ್ರ ಮಧ್ಯಾ ||
ಜಿರಮಂ ಮುಕ್ತಾವಲೀ ರಂಗವಲಿ ಬಳಸೆ ಕರ್ಕೆತನ ದ್ವಾರ ಶಾಖಾಂ |
ತರಮಂ ರತ್ನ ಸ್ಪುರತ್ತೋರಣಮೆಳಸೆ ಬೆಡಂಗಾದುತಿದುದ್ವಾಹ ಗೇಹಂ || ೧೧೨ ||

ಕ೦ || ಸುರ ದಂಪತಿಗಳ ವಿದ್ಯಾ
ಧರ ದಂಪತಿಗಳ ನರೇಂದ್ರ ದಂಪತಿಗಳ ಕಿ ||
ನರ ದಂಪತಿಗಳ ನಿದ್ದಂ
ವಿರಾಜಿಸಿತ್ತದ ಪೊಳೆವ ಪಳಕಿನ ಕೇರೊಳ್ ||೧೧೩ ||

ಪುರು ಜಿನ ಚರಿತಂ ಭರತೇ
ಶ್ವರ ಚರಿತಂ ಸಗರ ಚಕ್ರವರ್ತಿಯ ಚರಿತಂ ||
ಹರಿವಂಶ ವೀರಪುರುಷರ ಚರಿತಂ ಬರೆದಿರ್ದುವಲ್ಲಿ ಕೆಲಕೆಲವೆಡೆಯೊಳ್|| ೧೧೪ |

ಆಮೋದ ಮುದಿತ ಮಧುಕರ
ದಾಮಕದೊಳ ನೀಲರತ್ನ ದಾನಂ ಮಲ್ಲೇ ||
ದಾವಕದೊಳ್ ಮುಕ್ತಾಫಲ
ದಾನಂ ತಡವಾದುವೊಡನೆ ಮಣಿಮಂಡಪದೋಳ್ ||೧೧೫ ||

ಆಲಂಬಿತ ಮಣಿ ಘಂಟಾ
ಜಾಲಕದೆಡೆಯೆಡೆಯೊಳಎಲೆ ಕಟ್ಟಿದ ಮುಕ್ತಾ |
ಮಾಲಕೆಯಂ ನವ ವಿಚಕಿಲ
ಮಾಲಕೆಗೆಳಸಿ ಸುಲವುವಳಿ ಕಳಭಂಗಳ್ || ೧೧೬||

ಮಂಗಳ ಗಾಯನಿಯರ ಗೀ
ತಂಗಳನುಸಹಾರ ಕುಸುಮ ಮಧುಪಾನ ವ್ಯಾ ||
ಸ೦ಗದೊಳಿರ್ದೆಳದುಂಬಿಗ
೪೦ಗೊರಲಿರ್ನಡಿಸಿದತ್ತು ರಾಜಾಂಗಣದೋಳ್ || ೧೧೭ ||

1.ಪಣ್ಯಾ೦ಗನಾ. ಕ ಖ 2. ಪೊನ್ನ ದೆ. ಚ 3. ದತ್ತಾಹ ಚ