ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಾಶ್ವಾಸಂ

೧೩೧

ಲೊಡಂ ಜಾತಿಸ್ಮರನಾಗಿ ಮೂರ್ಛಗೆ ಸಲ್ವುದುಮೊಡನೆ ವಿಯಚ್ಚರರಾತನಂ ರಥ
ನೂಪುರಚಕ್ರವಾಳಪುರಕ್ಕಿಂದುಗತಿ ಖಚರ ಚಕ್ರವರ್ತಿಯ ಕೆಲಕ್ಕೆ ತರ್ಪುದುಂ-

ಕಂ || ಘನಸಾರ ಸಲಿಲಮಂ ಚ೦
ದನ ರಸಮಂ ತಳಿದು ಬೀಸೆ ಬಿಜ್ಜಣಿಗೆಯ ತ ||
ಣ್ಣನೆ ತೀಡುವೆಲರ ತೀಟದಿ
ನಿನಿಸಾನುಂ ತಡೆದು ಮೂರ್ಛಯಿ೦ದೆ ತ೦ || ೧೫ ||

ಆಗಳಾ ವಿಯಟ್ನರಾಧಿಪತಿ ಕುಮಾರನ ಮುಖಾರವಿಂದಮಂ ನೋಡಿ-

ಕಂ || ಜನಕಜೆಯಿಂ ನೂರಡಿ ಮಿಗಿ
ಲೆನಿಪ್ಪ ಕಡುಚೆಲ್ಪುವೆತ್ತ ಖೇಚರ ಕನ್ಯಾ ||
ಜನದೊಳ್ ವಿವಾಹ ಮಂಗಲ
ಮನೊಡರ್ಚುವೆನಮ್ಮ ಬಿಸುಡು ಮನದುಮ್ಮಳಮಂ || ೧೬ ||

ಎಂಬುದುಂ ಪ್ರಭಾಮಂಡಲಂ ಕಿಂಚಿದುನ್ನಮಿತ ಕಂಧರನಿಂದುಗತಿಯ ವದ
ನೇಂದುವಂ ನೋಡಿ ಮುಕುಳಿತ ಕರ ಕಮಲನೆಂದನೆನ್ನ ಮೂರ್ಛಾ ಪ್ರಪಂಚಕ್ಕಿದು
ನಿಮಿತ್ತವಲೀ ಪೋದ ಭವದೊಳಾಂ ಪ್ರತಾಪಸಿಂಹನೆಂಬ ದೇಶಾಧೀಶ೦ಗೆ ಕುಂಡಲ
ಮಂಡಿತನೆಂಬೆನಾಗಿ ಪುಟ್ಟ ತಂದೆಗವಿಧೇಯನಾಗಿ ಪೋಗಿ-

ಕಂ || ಬಿಟ್ಟ ಅನನೆನಗೆ ಪಾಪದ
ಬಟ್ಟೆಯ ಪೆರ್ವಡೈಯಾಗೆ ನಾಡ ಬೀಡಂ ||
ಸುಟ್ಟ ಅದು ಕಟ್ಟ ಕವರ್ದಾ೦
ಕಟ್ಟಾಳನದಿಂ ವಿದಗ್ಧ ನಗರದೊಳಿರ್ದೆ೦ || ೧೭ ||

ಎನಗರಸಿ ಮಾಡಿದೆಂ ಕಪಿ
ಲನೆಂಬನಾಪುರದೊಳಿರ್ಪನೊರ್ವಂ ದ್ವಿಜನಾ ||
ತನಪೆಂಡತಿಯಂ ದರ್ಪಾ೦
ಧನೆನಾಡದ ಗೊಡ್ಡಮೇನುಮಿಲ್ಲೆಂಬಿನೆಗಂ || || ೧೮ ||
ಅ೦ತಿರ್ಪುದು೦---


1.ನೆಯ, ಕ. ಖ. ಗ.