೧೩೨
ಕಂ|| ಅನರಣ್ಯನ ಪಡೆವಳ್ಳ೦
ಮುನಿದಿದೋಡಿಸಿದೊಡೋಡಿ ಪರ ಮಂಡಲದೊಳ್ ||
ಜಿನಮುನಿ ಮುಖ್ಯಂ ಕುಡೆ ಪಡೆ
ದೆನಣುವ್ರತಮಂ ವಿನೇಯಜನ ಸಮ್ಮತಮಂ || ೧೯ ||
ಅ೦ತಾಮಾರ್ಗಮಂ ಪತ್ತು ವಿಡದೆ ನಡೆದು ಜೀವಿತಾವಧಿಯೊಳ್ ದೇವಗತಿ
ನಡೆದಾನುಮೆನ್ನ ದೇವಿಯುಮಾ ದೇವಲೋಕದಿಂ ಬುಲ್ಲಿ ಬಂದಿಲ್ಲಿ ಜನಕನ ಮಹಾ
ದೇವಿಯಪ್ಪ ವಿದೇಹಿಯ ಗರ್ಭದೊಳಮಳಳಾಗಿ ಪುಟ್ಟ ಬಳೆವುದುಮಾಸಮಯದೊಳೆನ್ನ
ಮುನ್ನಿನ ಪಗೆವನಪ್ಪ ಕಪಿಳಂ ದೇವಗತಿವಡೆದೆನ್ನಂ ಪಿಡಿದುಯ್ದು ಕೊಲಿಡರ್ಚಿ
ಕಾಣಲೊಡಂ ಕರುಣಿಸಿ ತನ್ನ ಮಣಿಕುಂಡಲಮನೆನ್ನ ಕಿವಿಯೊಳಿಟ್ಟು ಪರ್ಣಲಘು
ವಿದ್ಯೆಯಿಂ ನಿಮ್ಮ ತಲ್ಪ ದೊಳಿರಿಸಿ ಪೋಗೆ ದೇವರೆನ್ನಂ ಪಿರಿಯರಸಿಗೆ ದಯೆಗೆಯು
ಕೊಂಡಾಡಿ ನಡಪಿ ಯುವರಾಜ ಪದವಿಯಂ ದಯೆಗೆಯ್ಲಿ ರಾನುವೆನ್ನ ತಂಗೆಯಪ್ಪುದ
ನಜಯದೆ ಸೀತಾದೇವಿಗಾಟಿಸಿದನೆಂದು ಬಿನ್ನವಿಸೆ-
ಕಂ || ಖಚರಸತಿ ವಿಸ್ಮಯಾಕುಲಿ
ತ ಚಿತ್ತನಜ್ಞಾನ ತಿಮಿರ ವಿಘಟನ ದೀಪ ||
ಪ್ರಚುರ ರುಚಿಯೆನಿಸೆ ಮಣಿ ಮಕು
ಟ ಚ೦ಕನತ್ಕಾಂತಿ ತಲೆಯನೇಂ ತೂಗಿದನೋ || ೨೦ ||
ಅಂತು ಬಗೆಯೊಳೊಗೆದ ವಿಸ್ಮಯವೆ ತನಗೆ ವೈರಾಗ್ಯ ಹೇತುವಾಗೆ-
ಕಂ|| ದೊರೆಕೊಳ್ಳದೊಳಿತಾದುದು
ತರುಣಿಯ ಸಂಬಂಧವಿಾ ಸುತಂಗೆತ್ತಾನುಂ ||
ದೊರೆಕೊಂಡೊಡೆನ ವಂಶಂ
ದುರಂತ ದುಪ್ರೀರ್ತಿ ದಾವಶಿಖಿಗೊಳಗಕ್ಕುಂ ||೨೧ ||
ಉಪಕಾರಮನೊಡರಿಸುವಂ
ಗಪಕಾರವನುಂಟುಮಾಮಪಕಾರಿಗೆ ತಾ ||
ನುಪಕಾರಮನೊಡರಿಸುಗುಂ
ವಿಪರೀತಂ ಬಗೆದುನೋಡೆ ಕರಣ ಗ್ರಾಮಂ ||೨೨ ||
ಉ || ಪೋದುವು ಮತ್ತು ಜಾಗತ ಧನುರ್ಯುಗವೆನ್ನ ಮಹೋನ್ನತಿಕ್ಕೆ ಕೀ |
ಬಾದುದು ರಾಮಲಕ್ಷ್ಮಣರ ತೇಜನಗುಂದಲೆಯಾದುದೆಂದು ನಿ ||
1. ಬಳ್ಳಿ. ಚ.