ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೪

ರಾಮಚ೦ದ್ರಚರಿತಪುರಾಣಂ

ಉ || ದೀಪ ಕಳಾಪಮಂ ತಳೆದು ಬಾಲಿಕೆಯರ್ಬರೆ ಸುತ್ತಿ ಮುತ್ತಿ ತಾ |
ರಾಪತಿ ತಾರೆಗಳೊರಸು ಮಂದರಮಂ ಬಲಗೊಳ್ವ ಮಾಹಿತೈಯಿ೦ ||
ಭೂಪತಿ ಸರ್ವಭೂತ ಹಿತ ದಿವ್ಯಮುನೀಂದ್ರರನಂದು ಬಾಲಚ೦ |
ದ್ರಾಪರನಾಮಧೇಯರನದೇಂ ಬಲಗೊಂಡನೊ ಭಕ್ತಿಪೂರ್ವಕಂ || ೨೭ ||

ಅಂತು ಬಲಗೊಂಡಷ್ಟವಿಧಾರ್ಚನೆಗಳಿಂದರ್ಚಿಸಿ ಗುರುಭಕ್ತಿ ಪೂರ್ವಕಂ ವಂ
ದಿಸುವುದು೦-

ಕಂ || ಮದನಫಣಿ ನಿರ್ವಿಷಿಕರ
ಣ ದಿವ್ಯ ಮಂತ್ರ ಸ್ವನಂ ಜರಾಮರಣ ಶಿಲಾ ||
ವಿದಳನ ಟಂಕಧ್ವನಿ ಪೊ
ಸ್ಮಿದತ್ತು ಮುನಿ ಪರಸೆ ಧರ್ಮವೃದ್ಧಿ ನಿನಾದಂ|| ೨೮ ||

ಕ್ಷುಭಿತ ದಯಾರ್ಣವ ಪೂರ್ಣಿತ
ರಭಸಮನಲ್ ಸರಸಿದನಂತರವಾಸ ||
ತೃ ಭೆ ವಿನತ ಮಕುಟ ಮಣಿ ರುಚಿ
ವಿಭಾಸಿಯಂ ನೃಪ ಪುರಸ್ಸರಂ ರಾಜಕಮಂ || ೨೯ ||

ಅನಂತರಂ ದಶರಥಂ ಸಮುಚಿತಾಸನದೊಳ್ ರಾಮ ಲಕ್ಷ್ಮಣ ಭರತ ಶತ್ರು
ಫರ್ವೆರಸು ಕುಳ್ಳಿ ರ್ದು ದೀಕ್ಷಿತನಾದ ಇಂದುಗತಿಯುಮಂ ಪರಿಮಾನ ದೀನಾನನ
ನಾಗಿ ತನ್ನುನಿಯ ಸಮಕ್ಷದೊಳಿರ್ದ ಪ್ರಭಾಮಂಡಲನುಮಂ ಕಂಡು ಮುನಿ
ಮುಖ್ಯಂಗೆ ಆಗಿ ಮುಕುಳಿ ತಾಂಜಲಿ ಪುಟನಾಗಿ-

ಉ || ಬಾಲ ಮೃಣಾಳಮಂ ಪಿಡಿದು ಕೀಟ್ಟಿ ವೊಲಶ್ರಮದಿಂ ಮನೋಭವ
ವ್ಯಾಲ ಗಜೇಂದ್ರ ದಂತ ಯುಗಳಗಳನೇಕೆ ಕಿತ್ತಿ ನೇಕೆ ನಿ ||
ರ್ಮೂಲಿಸಿದಂ ಭವಾಟವಿಯ೫ಜಿನರೂಪ ಕುಠಾರದಿಂ ಪ್ರಭೋ |
ಧಾಲಯ ಪೇಮಿಾ ಖಚರ ಚಕ್ರಿಯೊಳಾದ ತಪಃಪ್ರಪಂಚಮಂ || ೩೦ ||

ಎಂದು ಬಿನ್ನವಿಸೆ-

ಕಂ || ಶ್ರುತ ದೇವತಾ ಕಟಾಕ್ಷ
ದ್ಯುತಿ ಪಸರಿಸಿ ಪರ್ವುವಂದದಿಂ ನಿಜದಂತ ||
ದ್ಯುತಿ ಪಸರಿಸೆ ದಯೆಯಿಂ ಯತಿ
ಪತಿ ನುಡಿದಂ ಮಧುರ ಮೃದು ಗಭೀರ ಧ್ವನಿಯಿಂ || ೩೧||