ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ರಾಮಚಂದ್ರಚರಿತಪುರಾಣಂ

ಮತ್ತಿತ್ತ ವಿಮುಂಚಿಯುಂ ದಾನಾರ್ಥಿಯಾಗಿ ಮಗುಟ್ಟು ಬಂದು ಮಗನ
ವಾರ್ತೆಯಂ ಕೇಳು ತಾನುಂ ತನ್ನ ಹೆಂಡತಿಯಪ್ಪನುಮತಿಯುಂ ಸರಸೆಯ ತಾಯ
ಪುರಿಯುಂ ಕಪ್ಪಡಮನುಟ್ಟ ತಿಭೂತಿಯನಚಿಸುತ್ತ ಬಂದಂಬರ ಪುರದೊಳ್ ಸರ್ವ
ಮುನಿಗಳೆಂಬ ದಿವ್ಯಜ್ಞಾನಿಗಳ ಪಕ್ಕದೆ ಧರ್ಮಮಂ ಕೇಳು ವಿಮುಂಚಿ ಮುಂಚಿ
ತೋಚಿದನನುಮತಿಯುಂ ಉರಿಯುಂ ಕನಕಶ್ರೀಕಂತಿಯರ ಪಕ್ಕದೆ ತೊರೆದು
ದೇವಗತಿವಡೆದರ್‌-

ಕಂ || ಅಪವರ್ಗ ಲಕ್ಷ್ಮಿಯಂ ಕುಡು
ವ ಪರಮಜಿನ ಚರಣ ಸೇವೆಗರಿದಾದುದೆ ನಾ ||
ಕಸದ ಪ್ರಾಪ್ತಿ ಯನೊದವಿಸು
ವ ಪೆರ್ಮೆಯೆನೆ ದಿವದೊಳನಿಬರುಂ ಜನಿಯಿಸಿದರೆ ||೩೬ ||

ಮತ್ತಿತ್ತ ಸರಸೆ ದುರಾಚಾರದಿಂ ಕಾಲಮಂ ಕಂಪಿ ನರಕ ತಿರ್ಯಗ್ಧತಿಗ
ಳೊಳ್ ತಿರಿಯುತ್ತುಂ ಬಂದು ಬಲಾಹಕನಂಬಬೆಟ್ಟ ದೊಳ್ ಪುಲಿಯಾಗಿ ಪುಟ್ಟ
ಬೇಗೆಗಿರ್ಚಿನೊಳ್ ಸತ್ತು ಚಂದ್ರಧ್ವಜನೆಂಬರಸನರಸಿ ಮನಸ್ಸಿಗೆ ಚಿತ್ರೋತ್ಸವ
ಯೆಂಬ ಮಗಳಾಗಿ ಪುಟ್ಟ ದಳದಲ್ಲದೆಯುಮತ್ತಲ್-

ಮ | ಮಕರಾಂಕದ್ವಿಪ ದಂತದಂಡ ದಳಿತ ಸ್ವಾಂತಂ ಪರ ಪ್ರೇಯಸೀ ||
ವಿಕಲಂ ದುರ್ಗತಿಯೊಳ್ ಕಯ೦ ತಿಂತರುತ್ತು ಬಂದು ಮತ್ತಂ ಕ್ರಮೇ ||
ಕನಾದಂ ಕಲಿಸಿದಲ್ಲಿಯುಂ ಕಪಿಳನೆಂಬಂ ಧೂಮಕೇಶಂಗೆ ದಾ |
ರಕನಾದಂ ಕಡೆಯೊಳ್ ವಿಚಾರಿಸೆ ವಿಚಿತ್ರಂ ಕರ್ಮ ನಿರ್ಮಾಪಣಂ || ೩೭ ||

ಮತ್ತಿತಲತಿಭೂತಿಯುಂ ನರಕಾಯುಷ್ಯಾದಿ ಭವಾಟವಿಯೊಳ್ ತೋಳಲುತ್ತು೦
ಬಂದು ತಾರಾಕ್ಷಮೆಂಬ ಹಂಸವನದೊಳ್ ಕಲಹಂಸನಾಗಿ ಜಿನ ಸ್ತವನ ಶ್ರವಣ
ದಿಂದುಪಶಮ ಚಿತ್ತನಾಗಿ ಕಿನ್ನರಗತಿವಡೆದನಂತರಂ ಕುಂಡಲ ಮಂಡಿತನಾಗಿ
ವಿದಗ್ನಪುರಮನಾಳುತ್ತಿರೆ ಕಪಿಳಂ ಚಿತ್ರೋತ್ಸವೆಯಂ ತನಗೆ ಸೆಂಡತಿಮಾಡಿ ತಂದಾ
ಪುರದೊಳಿರ್ಪುದುಂ ನಿನಗೆ ಮುನ್ನಿನ ಪೆಂಡತಿಯಾದನುಬಂಧಂ ಕಾರಣಮಾಗೆ
ನೀನಾಕೆಯಂ ಕಪಿಳನ ಕೈಯಿಂ ಕಳೆದುಕೊಂಡೆ; ಮುಂಪೇ ವಿಮು೦ಚಿಯುಂ ಸುರ
ಲೋಕದಿಂ ಬಂದಿಂದುಗತಿಯಾದನಾತನ ಹೆಂಡತಿಯಪ್ಪ೦ದಿನನುಮತಿ ಪುಷ್ಪವತಿಯಾ
ದಳದುಕಾರಣದಿಂದಿವರ್ ನಿನಗತಿಸ್ನೇಹಿತರಾದರಂದಿನ ಕಯಂ ಕಪಿಳದೇವನಾಗಿ ನೀಂ


1. ಭಾವನದಿಂ. ಚ.
2. ವಿದಗ್ಧ ನಗರದೊಳ್ ಕಪಿಲನ ಕೈಯಿಂ ಚಿತ್ರೋತ್ಸವಯಂ ಅತಿಭೂತಿಯಾದಂದಿನನು
ಬಂಧ೦ ಕಾರಣಮಾಗೆ ನೀಂ ಕಳೆದುಕೊಂಡ. ಚ