ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೨

ರಾಹುಚ೦ದ್ರಚರಿತಪುರಾಣಂ

ಯಾರ್ಧದ ಶಶಿಪುರಮನಾಳ್ವ ರತ್ನಮಾಲಿಗಂ ವಿದ್ಯುಲ್ಲತೆಗಂ ಸೂರಿಂಜಯನೆಂಬ
ಮಗನಾದೆ; ನಿಜಜನಕನಪ್ಪ ರತ್ನಮಾಲಿ ಸಿಂಹಪುರಮನಾಳ್ವ ವಜ್ರಲೋಚನ
ನೊಳ್ ಕಾದಲೆಂದು ಚತುರಂಗ ಬಲ ಸಹಿತನಾಗಿ ಪೋಗುತ್ತಮಿರೆ-

ಕಂ || ಮನದ ಮುನಿಸೆಂಬ ಕಟ್ಟಲೆ
ಯನಲೆವ ಮಾಣಿಕ್ಯ ದೀಪಮೆನೆ ದಿನದಿಂದಾ ||
ತನ ಮುಂದಣಿತಂದಂ
ದಿನಲಕ್ಷ್ಮಿಗೆ ತನ್ನ ದೇಹರುಚಿ ಕುಡೆ ಕೊರ್ವ೦|| ೫೯ ||

ಅ೦ತುಬಂದು-

ಕಂ || ವಿಗ್ರಹದೊಳ್ ನಿನಗಿನಿತೇ
ಕಾಗ್ರಹವು ಮುಳಿಸನೊಂದು ಕಥೆಯಂ ಕೇಳೇ ||
ಕಾಗ್ರ ಮನದಿಂದ ಮೆಂದು ಸ
ಮಾವಧಿ ಬೋಧನಮರನಂದಿಂತೆಂದಂ || ೬೦ ||

ಈ ಭರತದ ವಿಜಯಾರ್ಧಮ
ಹೀಗೃತಟ ತಿಲಕಮೆನಿಪ ಶಶಿಪುರದೊಡೆಯಂ ||
ಭೂ ಭುವನ ಪ್ರಥಿತಯಶಂ
ಶ್ರೀಭೂತಿ ಸುಭೂತಿವೆಸರ ಸುತನಂ ಪಡೆದಂ || ೬೧ ||

ಉಪಮನ್ಯುವೆಂಬನಂ ತನ
ಗೆ ಪುರೋಹಿತನಾಗೆ ಸಿರಿಯ ಸಿರಿಯಂ ಸುಖದಿ೦ ||
ದುಪಭೋಗಿಸುತ್ತುಮಿರ್ದೊ
ರ್ಮೈ ಪೊರ್ದಿದಂ ಕಮಲಗರ್ಭ ಯತಿಪತಿ ಪದಮಂ || ೬೨ ||

ಅ೦ತಾ ತಪೋನಿಧಿಯ ಸನ್ನಿಧಿಯೊಳ್ ಮಧು ಮದ್ಯ ಮಾಂಸ ನಿವೃತ್ತನಾಗಿ
ವರ್ತಿಸುತ್ತಿರ್ಪ ಶ್ರೀಭೂತಿಯಂ ತತ್ಪುರೋಹಿತನಪ್ಪುಪಮನ್ಯು ದುಷ್ಟಮತಿ ನಷ್ಟ
ವ್ರತಮ್ಮಾಡಿ, ತಾನುಂ ರಣಮರಣದಿಂ ನಾರಣವಾಗಿ ಮತ್ತಂ ಮರಣಮನೆ,
ಮುನ್ನಂ ತನ್ನ ಪತಿಯಪ್ಪ ಶ್ರೀಭೂತಿಯ ಮೋಹದಿ೦ದಾತನ ಸುತನಪ್ಪ ಸುಭೂತಿಗಂ
ಯೋಜನಗಂಧಿಗಮರಿಂದಮನೆಂಬ ನಂದನನಾಗಿ, ತಾನೊಂದುದಿವಸಂ ಕಮಲಗರ್ಭ
ಮಹಾಋಷಿಯ ದರ್ಶನದಿಂ ಜಾತಿ ಸ್ಮರನಾಗಿ, ತತ್ಸಮಾಸದೊಳ್ ತೋಜಿದು ತಪೋ


1. ಮರವಿಂದ. ಕ. ಫ.