ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಸ್ಥಾಶ್ವಾಸಂ

೧೪೩

ನಿಷ್ಠೆ ಯೊಳ್ ನೆರೆದು ದೇವನಾಗಿ ಶತಾರ ಕಲ್ಪದೊಳನಲ್ಲ ಸುಖಮನನುಭವಿಸುತಿರ್ದ
ನನ್ನೆಗಮಿತ್ತಲ್‌-

ಕಂ || ಅ೦ದು ದುರಾಚಾರದ ಫಲ
ದಿಂದಂ ಶ್ರೀಭೂತಿ ಸತ್ತು ಪುಲ್ಲೆಯ ಬಸಿರೊಳ್ ||
ಬಂದಂ ಕಾಲಿರ್ಚ್ಚು ಸುಡಲ್
ಬೆಂದಂ ಮಂದಾರವೆಂಬ ಗಹನಾಂತರದೊಳ್ || ೬||

ಅ೦ತು ಕು೦ದು ಕಾಂಭೋಜದೊಳ್ ಕಿರಿಂಜಯನೆಂಬ ಕಿರಾತನಾಗಿ-

ಕಂ|| ಆಡಿದ ಕಾಡೊಳ್ ಜವನೆ
ಚಾಡಿದನೆನೆ ಕೊಂದು ತಿಂದು ಕೈಯುಂ ಕಾಲುಂ ||
ಮಾಡಿದುವು ಪಾತಕಕ್ಕೆನೆ
ಕಾಡೊಡೆಯಂ ಕ೦ದು ಶರ್ಕರಾಪ್ರಭೆಗಿಳಿದಂ || ೬೪ ||

ಅದನುಪಮನ್ನುಚರನಪ್ಪ ದೇವನವಧಿಯಿನದಲ್ಲಿಗೆ ಬಂದು ನಿನಗೆ ಧರ್ಮೋ
ಪದೇಶಂಗೆಯ್ಯ ಕೈಕೊಂಡು ನೀನೀಗಲ್ ರತ್ನಮಾಲಿಯಾದೆ; ನಿನಗೆ ಧರ್ಮೋಪ
ದೇಶಂಗೆಯ್ದೆ ವಾವೆಂದು ಪೇಆತಿ, ಕೇಳದುವೆ ಸರ್ವೆಗಕಾರಣಮಾಗೆ ಸೂರಿಂಜಯ
ನೆಂಬ ನಿಜ ತನೂಜನಂ ರಾಜ್ಯಮಂ ಕೈಕೊಳ್ವುದೆನಲಾತಂ ತಪೋರಾಜ್ಯಮನಲ್ಲದೆ
ಲ್ಲೆನೆಂಬುದುಂ, ತದಪತ್ಯನಪ್ಪ 'ಕಲ್ಪಾನಂದಂಗೆ ರಾಜ್ಯ ಮಂ ಕೊಟ್ಟು ರತ್ನಮಾಲಿ,
ಸೂರಂ ಜಯಂಬೆರಸು ತಿಲಕಸುಂದರ ಮುನಿಗಳ ಸಮಕ್ಷದೊಳ್ ದೀಕೈಗೊಂಡನೇಕ
ಕಾಲಂ ತಪಂಗೆಯ್ದು ಮಹಾಶುಕ್ರ ಕಲ್ಪದೊಳ್ ಪುಟ್ಟ ಪದಿನಾಲು ಸಾಗರೋಪಮಮ
ನಲ್ಲಿಯ ಸುಖಮನನುಭವಿಸಿ ಬಂದಂದಿನ ಸೂಯ್ಯಂಜಯನೆ ನೀನೀಗಳ್ ದಶರಥನಾದೆ;
ನೀ೦ ನಂದಿವರ್ಧನನಾದಂದಿನ ನಿನ್ನ ತಂದೆಯಪ್ಪ ನಂದಿಘೋಷರೆಂಬವರ್ ತೊರೆದು
ನವಗ್ರೆ ವೇಯಕದೊಳ್ ನೆಲಸಿ ಬಂದು ಸರ್ವಭೂತಹಿತ ಭಟ್ಟಾರಕರಾವಾದೆವಾ
ಶ್ರೀಭೂತಿಯುಮುಪಮನ್ಯುವು ಬಂದು ನಿನ್ನ ಮೈದುನರಪ್ಪ ಜನಕನುಂ ಕನಕನು
ಮಾದರೊಂದು ಬೆಸಸೆ ದಶರಥಂ ವಿಸ್ಮಯಾಕ್ರಾಂತ ಸ್ವಾಂತನಾಗಿ

ಚ || ಯತಿಪತಿ ಸೇತಿ ಕೇಳು ಭವಸಂತತಿಯಂ ಬಗೆದಾ ಜವಂಜನ |
ಸ್ಥಿತಿಯನನಾದಿಯಂ ಸುಕೃತ ದುಷ್ಕೃತ ಕರ್ಮ ವಿಪಾಕ ಸೌಖ್ಯ ದು ||
ಸ್ಥಿತಿಗಳನುಂಡು ರಾಟಳದ ಗುಂಡಿಗೆಯಂತವೊಲಾದೆನೆಂದು ನಿ |
ರ್ವೃತಿಸುಖದಲಾಟಿಸಿದನೇಂ ರಘುಸೂನು ಮಹಾನುಭಾವನೋ || ೬೫||


1. ಕಲ್ದಾಮರಂಗ. ಕ. ಖ. ಘ. ; ಕಲ್ಯಾಮರಾಗೆ ನ೦ದಾಗ. ಗ.