ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಷಷ್ಠಾಶ್ವಾಸಂ

೧೪೭

ಮ || ಧರೆಯಂ ದ್ವಾದಶ ಚಕ್ರವರ್ತಿಗಳಿಗಿತ್ತಲ್ ದೇವ ನಿಖ್ಯಾ ಭುಜಾ |
ಪರಿಘಕ್ಕೊಪ್ಪಿಸಿ ಬೇಟ್ಟುದಂ ಪಡೆದುವೆತ್ತಾನುಂ ದಿಶಾದಂತಿ ದಿ ||
ಕರಿಣೀ ಪೇಚಕ ಚುಂಬನೈಕ ಸುಖಮಂ ಶೇಷೋರಗಂ ಭೋಗಿನೀ |
ಪರಿರಂಭೋತ್ಸವಮಂ ಪುರಾಣ ಕಮಠಂ ನಿದ್ರಾಂಗನಾ ಸಂಗಮಂ || ೮೪ ||

ಚ || ಬಳವದರಾತಿ ಮಂಡಲಮನಂಡಲೆದುದ್ದತ ಬಾಹು ದಂಡದಿಂ |
ದಿಳೆಯನಿಳೇಶ ನೀ೦ ತಳೆದುದಂ ರಣ ಬಾಲಕರೆಮ್ಮ ವಂದಿಗರ್ ||
ತಳೆವರೆ ವಿಶ್ವ ಲೋಕಮುಮನಶ್ರಮದಿಂ ಪ್ರಬಲ ಪ್ರಭಂಜನಂ |
ತಳೆವವೊಲಕ್ಷಮಂ ತಳೆಯಲಾರ್ಕುಮೆ ವೀಜನ ಮಂದಮಾರುತಂ || ೮೫ ||

ಎನೆ ದಶರಥಂ ತನಯನ ವಿನಯ ವಚನಮಂ ಮನದೆ ಕೊಂಡು-

ಮ || ತನಯಂಗೊಪ್ಪಿಸಿ ರಾಜ್ಯಮಂ ನಿಯಮದಿಂ ನಿಲ್ವರ್ ತಪೋರಾಜ್ಯದೊಳ್ |
ಮನುವಂಶ ಕ್ಷಿತಿನಾಥರೀ ಸ್ಥಿತಿಗೆ ನಿನ್ನ ಪ್ರಾರ್ಥಿಸಲೈಡ ನಂ ||
ದನ ಸಂಕ್ರಂದನ ವಂದನೀಯ ಪದದೊಳ್ ನಿಲೈಂ ತಪೋರಾಜ್ಯದೊಳ್ |
ನಿನಗದ್ವಚನಂ ವಿಧೇಯಮದ೦೦ ಕೈಕೋಳ್ ಧರಾಭಾರನಂ || ೮೬ ||


ಎಂದಿವುಮೊದಲಾಗೆ ಪಲತೆ ಆದಿಂ ಮಜುಮಾತಿಂಗೆಡೆಯಿಲ್ಲದಂತು ನುಡಿ
ದೆಂತಾನುಂ ರಾಮನನೊಡಂಬಡಿಸಿ ರಾಜ್ಯಸ್ಥನಪ್ಪಂತು ಮಾಡೆ ತದನಂತರಂ ಭರತಂ
ಮುಕುಳಿತ ಕರಸರೋಜನಾಗಿ-

ಚ || ಒಡಲಶುಚಿತ್ವಮಂ ಗತಿ ಚತುಷ್ಟಯದೋಳ್ ದೊರೆಕೊತ್ವನಿಷ್ಟಮಂ |
ಕಿಡುವ ಸುಖಂಗಳಿಂ ತಣಿಯದಾಯಸಮಂ ತಿಳಿದಿರ್ದುಮೇನೊ ನಿ ||
ಮೂಡಿ ನಿಮಗಳ್ಳಿ ಬಿನ್ನವಿಸಲಿನ್ನೆವರಂ ಸೆಡೆದಿರ್ದೆನಿನ್ನೆರಂ |
ಬಡೆದೆನಿವೇಶ ನಿಮ್ಮೊಡನೆ ಸಾಧಿಸುವೆಂ ಪರಮಾರ್ಥಸೌಖ್ಯಮಂ ||೮೭ ||


ಉಪಚಿತ ಸೌಖ್ಯ ಮೊಂದಧಿಕ ದುಃಖ ಸಮಾಗಮ ಜನ್ಮಭೂಮಿಯೊಂ |
ದಪಗತ ದೋಷಮೊಂದಖಿಲ ದೋಷ ಸಮನ್ವಿತಮೊಂದತಾಪಮೊಂ ||
ದಪರಿಮಿತಾನುತಾಪ ಪದಮೊಂದದ ಆಂ ತಿಜಿನಸಾದ ಕಲ್ಪ ಪಾ |
ದಸ ಪರಿಸೇವೆಗಂ ಜನಸ ಸಂಸದ ಸೇವೆಗಾವುದಂತರಂ || ೮೮ ||

ಎಂದು ತಆಸಂದು ಭರತ ಬಿನ್ನವಿಸೆ ತತ್ಸಭೆಯೊಳೊರ್ವಳತಿತ್ವರಿತ


1. ಸುಖಂಗಳಂ. ಚ. 2. ಕ.ಖ. ಚ 3. ನಿಜ. ಕ. ಖ. ಗ. ಘ. ಚ.