ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೮

ರಾಮಚಂದ್ರಚರಿತಪುರಾಣಂ

ಗತಿಯಿಂ ಬಂದು ರಾಮಂಗೆ ರಾಜಮನಿತ್ತು ದಶರಥಂ ಭರತಂಬೆರಸು ತಪೋ
ವನಕ್ಕೆ ಪೋಪುದಂ ನಿವೇದಿಸೆ ಕೈಕೆ ವಿಕಳೆಯಾಗಿ-

ಕಂ || ಧರೆಯಂ ರಾಮಂಗಿತ್ತಂ
ಗುರುವಾನಿ ಸಿಂದಮಿರ್ದೊಡೆನಗಕ್ಕುಂ ಕಿಂ ||
ಕರ ಭಾವವೆಂಬ ಬಗೆಯಿಂ
ಭರತಂದೊಡರಸಿದುದಕ್ಕು ಮಿಾ ನಿರ್ದೆಗಂ || || ೮೯||

ಅವನೀಶ್ವರನೊಡನೆ ತನೂ
ಭವಂ ತಪಂಬಟ್ಟೋ ಡಾಸೆಯಾರೆನಗೆಂದಾ ||
ಯುವತಿ ಭಯಚಕಿತೆ ಚಿಂತಾ
ರ್ಣವ ಗರ್ತ ನಿಮಗೆ ಮಜ ದಳೆವೆಯಿಕ್ಕುವುದಂ || ೯೦||

ತಕ್ಕುದೆನಗೆ ಸಪತ್ನಿಯ
ರಿಕ್ತುಂಗೂಲಿಂಗೆ ಬಯಸಿ ಪಾರ್ದಿಪ್ರ ವಿಷಾ ||
ದಕ್ಕೆ ಗುರಿಯಪ್ಪ ದುರ್ಯಶ
ಮಕ್ಕುಂ ತನಯಂ ತಪಕ್ಕೆ ಪಕ್ಕಾಗಲೊಡಂ || ||೯೧ ||

ಎಂದು ಪಲುಂಬಿ ಹಂಬಲಿಸುತ್ತುಮಾ ಸಮಯದೊಳ್-

ಕಂ|| ತನಗಿನಿಯನಿತ್ತ ಮೆಚ್ಚ
ನೆನೆದಳ್ ಮಡಗಿಟ್ಟು ಮಜದ ಧನನಂ ಬಡವಂ ||
ನೆನೆವಂತೆ ಕಾಂತೆ ಚಿಂತಾ
ಘನಾಂಧಕಾರ ಪ್ರದೀಪ ರೂಪೋಪಮಮಂ|| ೯೨ ||

ಅಂತು ನೆನೆದು ಮನದೊಳ್ ಗುಡಿಗಟ್ಟ ಭರತನಂ ರಾಜ್ಯ ಮೋಹದೊಳ್ ತೊಡರ್ಚಲೆಂದೊಡರ್ಚಿ

ಚ || ಕನಕ ವಿಭೂಷಣ ಪ್ರಭೆ ತನುಪ್ರಭೆಯಿಂ ತನಿಗೊರ್ವುಗೊರ್ವೆ ಮೋ |
ಹನಮನೊಡರ್ಚಲೆಂದು ಗುಣ ಹಾನಿಗೆ ಬೆರ್ಚದೆ ಧರ್ಮಹಾನಿಯ೦||
ನೆನೆಯದೆ ಪಾತ್ರಸೇವೆ ವೃಥೆಯಾದುದೆನಲ್ ಮಲಿನಾಂತರಂಗೆ ಟ |
ಕೈನಸೊಡರಂತೆ ಕೈಕ ಪುಗುತಂದಳಿಳಾಧಿಪ ರಮ್ಮ ಹರ್ವ್ಯಮಂ ||೯೩ ||

ಕಂ|| ಉದ್ವೇಗ ಭರಂ ಸಭೆಗೆ ಜ
ಗದ್ವಲ್ಲಭನಭಿಮತಕ್ಕೆ ವಿಘ್ನಮಪಾಯಂ ||