ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೨

ರಾಮಚಂದ್ರಚರಿತಪುರಾಣಂ

ಚ || ಅಸದನುಶಾಸನಂ ಸದವನಂ ನೃಪಲಕ್ಷಣವೊಂದು ಬಾಹು ಸಾ |
ಹಸಗುಣ ಮೊಂದು ದಾನಗುಣಮಾಯೆರಡು ನಿಮಿರ್ವಂತು ಪೋಗಿ ಸಾ ||
ಧಿಸುವೆನರಾತಿ ಮಂಡಲಮನೆನ್ನನುಜಂಗನಗಮ್ಮನಿತ್ತು ದಂ ।
ವಸುಧೆಯನೀವೆನೆಂದು ಮನದೊಳ್ ತಪಸಂದನುದಾತ್ತರಾಘವಂ || ೧೧೩ ||

ಅಂತು ನಿಶ್ಚಯಿಸಿ ಕೈಕೆಯ ಮುಖಕಮಲ ವಿಲೋಕನಂಗೆಯ್ದು ಮುಕುಳಿತ
ಕರಕಮಲನುಂ ವಿಕಸಿತ ಹೃದಯ ಕಮಲನುವಾಗಿ-

ಚ || ಪುಸಿ ಪೊಲನು ನಾಲಗೆಗೆ ಪಂದೆತನಂ ಮೊಜತೆಯಲು ಕೈಯ ಕೂ |
ರಸಿಗೆ ಕುಲಕ್ರಮಂ ರಘುಕುಲಕ್ಕಿ ದು ದೇವಿಯರ್ಗೆನ್ನ ದೂಸಚಿ೦ ||
ಪುಸಿನುಡಿಯಂ ಮದೀಯ ಜನಕಂ ನುಡಿದಂದು ಜನಾಪವಾದವೆ |
ಣ್ಣೆ ಸೆಗವನರ್ಗಳಂ ಪರೆಗುಮಾನದನೇಳಿಸೆ ದೈನ್ಯಮಾಗದೇ ||೧೧೪ ||

ಮ || ಧರೆಯಂ ತಂದೆಯ ನನ್ನಿಗಿತ್ತು ಧರೆಯಂ ಕೈಕೊಂಡೊಡೆನ್ನೊಳು ನೀ |
ಸರಮಕ್ಕುಂ ಬಗೆ ಕೂಡದಂದು ನಿಮಗಕ್ಕುಂ ಪ್ರಾರ್ಥನಾಭಂಗಮಾ ||
ಯೆರಡುಂ ದುರ್ಣಯವೆನ್ನ ಕೀರ್ತಿಗೆ ಕಲಂಬಂ ಮಾಡುಗುಂ ರಾಜ್ಯಮಂ|
ಭರತಂಗಿ ತೊಳಿತ್ತೆನೆನ್ನ ನುಡಿಯಂ ನೀನಿಂತು ನ೦ಬ೦ಬಿಕೇ || ೧೧೫ ||

ಕಂ || ಎನಗೆ ಬೆಸಸಿದೊಡೆ ಸಾಲದೆ
ಜನನಿಯರೀ ಧರೆಯನೆನ್ನ ತಮ್ಮಂಗಾನೀ ||
ಯೆನೆ ಬೇಡವೇಟ್ಟುದೇ ಮ
ಜ್ಜನಕನನಿಲ್ಲಿವರಮಿ೦ತಿದಾವುದು ಗಹನಂ||೧೧೬ ||

ಎಂದು ತಾಯ ಬಯಕೆಯಂ ತೀರ್ಚಿ-

ಮ || ಜನಕಂ ರಾಜ್ಯಮನೀಯೆ ರಾಮನ ಮುಖಂ ಹರ್ಷಕ್ಕೆ ಪಕ್ಕಾದುದಿ |
ಲ್ಲನುಜಂಗಯ್ಯನ ನನ್ನಿಯಂ ಸಲಿಸಲೆಂದೀವಲ್ಲಿ ಹರ್ಷಕ್ಕೆ ತಾ||
ಯ್ಯನೆ ತಾನಾದುದಿದಾವುದಚ್ಚರಿಯೊ ಪೇಟಿವಲ್ಲಿ ಸತ್ಪಾತ್ರದೊಳ್ |
ಧನಮಂ ಪೋ ನಲಿವಂದದಿಂ ನಲಿವನೇ ಧನ್ಯ ಧನಪ್ರಾಪ್ತಿಯೊಳ್ || ೧೧೭ ||

ತದನಂತರಮುದಾತ್ತರಾಘವಂ ತಂದೆಯ ಮುಖಾರವಿಂದಮಂ ನೋಡಿ-

ಚ || ಎಡೆಗುಡದಿರ್ದೊಡಂ ಗಗನಮಂಡಲಮುರ್ವರೆ ತಾಳದಿರ್ದೊಡಂ |
ಮಿಡುಕದೆ ಗಾಳಿ ಮೆಯ್ದ ರೆದೊಡಂ ಮಳೆಗಳ್ ಮಳೆಗಾಲದಂದಣಂ ||