ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೫೧


ಕಂ|| ಕೀರ್ತಿಗೆ ಧರೆ ತಲೆಗರೆದಿರೆ
ಮಾರ್ತಲೆ ರಾಘವನಮೋಘಶರಮುಂ ವಜ್ರಾ ||
ವರ್ತಮುಮಲ್ಲದೆ ರಕ್ಷಿಸ
ಲಾರ್ತ ಪುವೇ ನೆಲನನು೦ದರ೦ಬುಂ ಬಿಲ್ಲುಂ

ಗುಣಹಾನಿಗೆ ಬೆರ್ಚದೆ ಧಾ
ರಿಣಿಯಂ ಪ್ರಣಯದಿನಿಟೇಶನಿತ್ತೊಡಮೇಂ ಲ ||
ಕ್ಷಣನೀಯಲೀಯನೆಂಬುದ
ನೆಣಿಸಳೆ ಜಡಮತಿಗಳಾಗದಿರ್ಪರೆ ಪೆಂಡಿರ್|| ೧೦೭ ||

ಸುತಮೋಹದಿನೀ ವಧು ಪತಿ
ಹಿತಮಂ ಭಾವಿಸಿದಳಿಲ್ಲ ತನಗಮಣಂ ದು ||
ರ್ಗತಿ ಹೇತುವನತಿಮೋಹ
ಗತಿಗಿಡಿ ಸುಗುಮೆಂಬ ನಾಡನುಡಿ ತಪ್ಪುಗುಮೆ|| ೧೦೮||

ಮೋಘಮನಖಿಲ ಸರಿಗ್ರಹ
ದಾಘಮನೀ ಕೈಕೆ ಬೇಡೆ ಧರೆಯಂ ತೃಣದಿ೦ ||
ಲಾಘವಮೆನೆ ಬಗೆದೀಗುಂ
ರಾಘವನೌದಾರ್ಯ ತುಂಗನೀಯದುದುಂಟೇ|| ೧೦೯ ||

ಮ||ಸ್ತ ||ಭರತಂ ಲಜ್ಞಾನತಂ ತಾಯ್ ವಿಕಳೆ ದಶರಥಂ ವಿಹ್ವಲ೦ ಲಕ್ಷಣಂ ಕೋ |
ಪ ರಸಾವೇಶಂ ಸಭಾಮಂಡಲಮಸಕೃದಸದ್ವಾಕ್ಯ ಮುಷ್ಟ ಮಂತಃ ||
ಪುರವಂತಶೂನ್ಯಮಿ೦ತಿ ರ್ಪುದುಮುಚಿತ ಕಾರುಣ್ಯ ದೃಷ್ಟಿ ಪ್ರಭಾ ನಿ|
ರ್ಭರ ಪೂರಂ ಪಾರಿಜಾತಂ ಕಡಲ ನಡುವೆ ಕೈ ವಂದವೋಲ್ ರಾಮನಿರ್ದ೦

ಉ|| ತಂದೆಯ ನನ್ನಿ ನಿಲ್ವುದು ಮನೋರಥವಪ್ಪುದು ತಾಯೆ ರಾಜ್ಯದೊಳ್ |
ನಿಂದವನೆನ್ನ ತಮ್ಮನೊಸೆದಿತ್ತು ಕೃತಾರ್ಥನೆನಫೈನೆನ್ನ ಸೈ ||
ಪಿಂ ದೊರೆಕೊಂಡುದೀ ಪರಮ ಲಾಭವೆನುತ್ತುಮುದಾತ್ತ ಚಿತ್ತನಾ |
ನಂದಮನಸ್ಸು ಕೆಯ್ದು ಪುಲಕೋದ್ದ ಮಮಂ ತಳೆದ ಹಲಾಯುಧಂ||೧೧೧||

ಚ|| ಮಗನೆನಿಪಂಗೆ ಮಾತೃ ಪಿತೃ ಭಕ್ತಿಯ ಕೃತ್ಯಮಿಹಿಗಂ ಪರ |
ತೆಗನುಪಕಾರಿ ಬೇರೆ ಸೆತಾವುದೊ ಚಾರುಚರಿತ್ರ ಮೆಂದು ಕೀ||
ರ್ತಿಗೆ ದೆಸೆ ಸಾಲವೆಂಬಿನೆಗರರ್ಣನ ಮೇಖಲೆಯಂ ಧರಿತ್ರಿಯಂ |
'ಬಗೆಯನೆ ಬಾಗೆಯ್ಯನೆ ಜರತ್ಕಣ ಲಾಘವವೆಂದೆ ರಾಘವಂ || ೧೧೨ ||


1. ಬಗದನೆ ಬಾಡಿಗೆಯನೆ. ಚ.