ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೦

ರಾಮಚಂದ್ರಚರಿತಪುರಾಣಂ


ಭರತ೦ಗ೦ಬಸವಾದಮಕುಮದ ಅ೦ದೇನೆಂಬೆನಾನೆಂದು ಮೂ |
ರವೋಲ್ ಮೌನದೊಳೊಂದಿ ಪಚ್ಚಬಗೆಯಿಂ ದುಮ್ಮಚ್ಚಮಂ ತಾಳಿದ೦೧೦೦

ಅಂತು ದಶರಥ ನರನಾಥಂ ದಿವಸದವಸಾನದ ರಥಾಂಗದಂತೆ ಚಿಂತಾಕ್ರಾಂತ
ನಾಗಿರ್ಪುದು೦-
ಕಂ || ಮಜ್ಜನನಿ ನೆಲನನೆನಗೆ
ಸ್ಮಜ್ಜನಕನನೆರೆದಳೆಂದು ನೊಂದಂ ಭರತಂ ||
ಲಜ್ಞಾನತನಭಿಮಾನದ
ಪಜ್ಜೆಯನೇಂ ತಪ್ಪಿ ಮೆಟ್ಟಲಅಗುಮೆ ತಕ್ಕಂ || ೧೦೧ ||

ಇಷ್ಟ ಮೆನಗಲ್ಕು ಪತಿಗಮ
ನಿಷ್ಟಂ ಭಾವಿಸಿದಳಿಲ್ಲ ತನಗಂ ದೃಷ್ಟಾ ||
ದೃಷ್ಟ ವಿರೋಧಂ ದುರ್ಣಯ
ಚೇಷ್ಟಿತಮಂ ಜನನಿ ಮುಗ್ಧಮತಿ ತಿಳಿದವಳೇ ||೧೦೨ ||

ಎಂದು ಭರತಂ ವಿಷಾದ ಭರ ತಂದೀಭೂತ ಚೇತಸನಾಗಿರ್ಪುದುಂ-

ಚ || ನುಡಿದಳನಿಷ್ಟಮಂ ನುಡಿದಳನ್ನೆಯಮಂ ಪತಿಗಂ ವಿರುದ್ದ ಮಂ |
ನುಡಿದಳಸೇವ್ಯಮಂ ನುಡಿದಳನ್ವಯ ರಾಜ್ಯ ವಿನಾಶ ಹೇತುವಂ ||
ನುಡಿದಳೆನುತ್ತು ಮಳ್ಳದೆ ನರೇಂದ್ರ ಸಭಾ ಜನಮಂದು ಕೈಕೆಯಂ |
ನುಡಿದುದು ಮೆಚ್ಚಿದಂದದೊಳೆ ದೋಷಮೆ ದುರ್ಬಲವಾಗದಿರ್ಕ್ಕುಮೇ|| ೧೦೩||

ಮನದಟ್ಸಿಲ್ಲದಂಗನೆಯರೊರ್ವರುಮಿಲ್ಲೆನೆ ಕೈಕೆ ಬೇಡಿ ಮೇ |
ದಿನಿಯನಿದೇಕೆ ಮಾಡಿದಳೊ ಮುಗೈ ಸಹೋದರರೊಳ್ ವಿಭೇದಮಂ ||
ತನಗಹನಾದಮಂ ದಶರಥಂಗೆ ವಿಷಾದಮನೀಗಳಾತ್ಮನಂ |
ದನನ ಮನಕ್ಕೆ ಖೇದಮನದೊಂದುಚಿತಾಚರಣ ಪ್ರಮಾದಮಂ || ೧೦೪ ||

ಕಂ || ಇತರರಳವಲ್ಲದಸರಾ
ಜಿತಾ ಸುತಂಗಲ್ಲದೇಕೆ ದೇವಿ ಧರಿತ್ರೀ |
ಪತಿಯಂ ವಸುಮತಿಯಂ ಜಡ
ಮತಿ ಬೇಡಿದಳೆಂದು ಕೆಲಬರೇಳಿಸಿ ನುಡಿದರ್||೧೦೫ ||


1. ನಲ್ಲಿ. ಗ.