೧೬೨
ಅಂತು ಶೋಕ ವಿಕಳೆಯಾದ ಕೌಶಲ್ಯಗೆ ಲಕ್ಷ್ಮೀಧರನಧರ ಕಿಸಲಯದಮೇಲೆ
ದಂತಕಾಂತಿ ಲತಾಂತಮಾಲೆ ಪಸರಿಸೆ ಮುಕುಳಿತ ಕರ ಸರೋಜನಾಗಿ-
ಮ || ಕಲಿಯುಂ ಚಾಗಿಯುಮಿನ್ನರಾರ್ ಮನುಕುಲರ್ ಮುನ್ನಾದರೆಂಬನ್ನೆಗಂ |
ನೆಲನುಂ ನೇಸು ಮುಳ್ಳಿನಂ ನಿಲಿಸಿದಂ ತರ್ಮೆಯಂ ಪೆರ್ಮೆಯಂ ||
ಕುಲ ನಿಸ್ತಾರಕನೇಕ ಕುಂಡಲನದರ್ಕಾನಂದಮಂ ತಾಳದಾ |
ಕುಲಮಂ ತಾಳುವುದೇ ಮದಗ್ರಜನೊಳಾದೀ ಪೌರುಷಂ ಶೋಚ ಮೇ ||೧೭೧||
ಚ || ಚರಮ ಶರೀರನೆಯು ವನೆ ಬಾಧೆಯನುತ್ತಮಸತ್ಯ ನಾರ್ತದೊಳ್ |
ಪೊರೆವನೆ ಪುಣ್ಯಮೂರ್ತಿಗೆಡಲಿಂ ದೊರೆಕೊಳ್ಳುವ ಮೂಲು ಲೋಕಮು೦||
ಧುರದೊಳನಂತವೀರನೊಳಿದಿರ್ಚುಗು ಮೇ ಬಗೆದೀ ವಿಷಾದಮಂ |
ಪರಿಹರಿಸಿಂ ಬಳ೦ ಪ್ರಬಳನಾದೆಸೆಗುಮ್ಮಳ ಮೇವುದಂಬಿಕೆ || ೧೭೨ ||
ಕಂ || ಕೆಲದ ನೆಲದರಸುಮಕ್ಕಳ
ನಲಂಷ್ಣ ಬಲರಂ ತಗುಳ್ಳು ಕಳೆದೊಂದೆಡೆಯೊಳ್ ||
ನೆಲೆವೀಡು ಮಾಡಿ ನಿಮ್ಮ೦
ಬಲಭದ್ರಂ ತರಿಸದಿನಿಸನಂತರಿಸುವನೇ|| ೧೭೩ ||
ಉ || ಸ೦ಬಲಿಸಿ ಬೇಡ ಪೆಜತೇಂ ಭರತಂ ಭವದೀಯ ದಿವ್ಯ ಪಾ |
ದಾಂಬುಜ ಸೇವೆಗೆಮ್ಮಳವಿಗಗ್ಗಳನಲ್ಲದೊಡಂ ಸಮಸ್ತ ಲೋ ||
ಕಾಂಬಿಕೆ ನಿಮ್ಮೊಳಾದಿಸುವೆಸಕ್ಕೆ ಸುಮಿತ್ರೆಯೆ ಸಾಳಗ್ರಜಂ |
ಗಾಂ ಬೆಸಕೆಯ್ದಿನಿ೦ ತೊಲಗಿಸಿ ಮನದೊಳ್ ನಿಮಗಾದ ಖೇದಮ೦ ||೧೭೪||
ಎಂದು ಸೌಮಿತ್ರಿ ಬಿನ್ನವಿಸೆ ಮನದೊಳನಧಾರಿಸಿ ಕೌಶಲ್ಯ ವಿಗತ ಶೋಕ
ಶ ನಂದನನ ಮುಖಾರವಿಂದಮಂ ನೋಡಿ-
ಚ || ಸುಚರಿತೆ ಸೀತೆ ನಿನ್ನೊಡನೆ ಬಸವಳಿರ್ದವಳಲ್ಲಳಿರ್ಪುದೇ |
ನುಚಿತಮೆ ಪೇ೨೨ ಮಿಾಕೆಗೊಡನುಯ್ಯುದೆನಲ್ ರಘುರಾಮನ೦ಬಿಕಾ ||
ವಚನವನಾತ್ಮಚಿತ್ತದೊಳೊಡಂಬಡುವೆತ್ತದನಂತೆ ಗೆಯ್ದೆನೆ೦ |
ದಚಲಿತನಾನತಂ ಪದ ನಖಾಂಶುಗಳಿ೦ ತಳೆದ ಲಲಾಮನಂ || ೧೭೫ ||
ಅಂತು ರಾಮನಪರಾಜಿತಾಮಹಾದೇವಿಯ ಸುಮಿತ್ರಾದೇವಿಯ ಪಾದ ಸಲ್ಲವಂ
1. ನಾರ್ಥ. ಗ. ; ನರ. ಫ. 2. ಬರ್ಹವಳಲ್ಲರಿ ಬರ್ಪುದೇನುಚಿತಮೆ. ಚ.
3. ಮೂಾಕಡ. ಕ. ಖ. ಗ. ಘ.