ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಷಷ್ಠಾಶ್ವಾಸಂ

೧೬೩


ಗಳುಮನಾಶೀರ್ವಾದ ಪಾರಿಜಾತ ಒಕಂಗಳುಮನುತ್ತಂಸಂಮಾಟ್ಟು ದುಮನಂತರ೦
ಲಕ್ಷಣಂ ಮಣಿ ಕಿರೀಟ ಕಿರಣದಿಂ ತದೀಯ ಪದ ನಖ ಮಯೂಖಮಂ ಕೊರ್ವಿಸೆ
ಸಾರ್ವಭೌಮನಾಗೆಂದು ಪರಸಿ-

ಮ || ಶಯನ ಕೇಶದೊಳನ್ನ ಪಾನ ಗಮನಾಯಾಸ೦ಗಳೊಳ್ ನಿನ್ನ ಸೇ |
ದೆಯುಮಂ ನೋಡದತಿ ಪ್ರಯತ್ನ ಪರಿಚರಾರಂಭದಿಂ ಪುತ್ರ ಸೀ ||
ತೆಯುಮಂ ರಾಮನುಮಂ ಸಮಾಹಿತಮನರ್ಮಾಡೆಂದು ಸಂಪ್ರೀತಿಯಿಂ |
ಪ್ರಿಯದಿಂ ಪ್ರಾರ್ಥಿಸಿದಳೋ ಗುಣಪ್ರಿಯೆ ಸುಮಿತ್ರಾದೇವಿ ಸೌಮಿತ್ರಿಯಂ||೧೭೬||

ಗುಣಮುಂ ನೋಡದರಣ್ಯ ಮಂ ಪುಗಿಸಿದ ರಾಜ್ಯಾರ್ಹನಂ ಪುತ್ರಕಾ |
ರಣದಿಂ ಕೈ ಕೆ ಸುಮಿತ್ರೆ ರಾಮನೊಡವೋಗೆಂದಟ್ಟಿದಳ್ ಪಾಲಿಸಲ್ ||
ಗುಣಮಂ ಲಕ್ಷ್ಮಣನಂ ಜಗಂ ಪಿವಿನಂ ಜೀಯೆಂಬಿನಂ ಕೇವಲಂ |
ಗುಣಹೀನರ್ ಗುಣವಂತರನ್ನೆ ಯಮನೊಳಂ ಮಾಲ್ಪು ದಾಶ್ಚರ ಮೇ ||೧೭೭||

ಅಂತು ರಾಮಲಕ್ಷ್ಮಣರಂಬಿಕೆಯ ಚರಣಾಂಬುಜಂಗಳಂ ಬೀಳ್ಕೊಂಡರ
ಮನೆಯಂ ಪೋಯಮಟ್ಟು ಪಾದಮಾರ್ಗದಿಂ ವಿಪಣಿಮಾರ್ಗದೊಳಗನೆ ವೈದೇಹಿವೆರಸು
ಬರ್ಸ ಸಮಯದೊಳ್ ಕೌವರೆಗೊಂಡು ನೆರೆದು ಪರಿತಂದು ನೋಟ್ಸ್ ಪುರಜನಂ
ಗಳಲ್ಲಿ ಕೆಲಬರಿಂತೆಂದರ್‌-

ಉ|| ಸಂಗಡದಿಂ ಪುರಾಂಗನೆಯರಿಕ್ಕದೆ ಸೇಸೆಯನೇಕೆ ಶಂಖ ನಾ |
ದಂ ಗಗನಕ್ಕೆ ಲಂಘಿಸದೆ ಮಂಗಲ ತೂಲ್ಯ ನಿನಾದಮುಲ್ಮದೆ ||
ಇ೦ ಗುಡಿ ತೋರಣಂ ತುಲುಗಿ ಕಟ್ಟದೆ ಮಂಗಲ ಗೀತ ನಾದಮುಂ |
ಮಂಗಲ ಪಾಠಕ ಸ್ತುತಿಯುಮಿಲ್ಲದೆ ಭೂಪರದೆತ್ತ ಮೋದಪರ್ ||೧೭೮ ||

ಆನೆಯ ಮೇಲೆ ಬೆಳ್ಕೊಡೆಯನೆತ್ತಿಸಿ ಚಾಮರಮಕ್ಕೆ ಚಾರು ಚ೦ ||
ದ್ರಾನನೆಯರ್ಕಳಿರ್ಕೆಲದ ಪೆರ್ವಿಡಿಯೊಳ್ ನೆಲಸಿರ್ದು ಸುತ್ತಲುಂ ||
ದಾನ ಗಜ೦ ಘನಾಘನದವೋಲ್ ಬರೆ ಬಾರದೆ ಪಾದಮಾರ್ಗದಿ೦ |
ಜಾನಕಿಯುಂ ಬಲಾಚ್ಯುತರು ಮೇಳಿದರ೦ದದೆ ಬರ್ಪುದಾವುದೋ || ೧೭೯ ||


ಶಾ || ಪೌರಸ್ತ್ರೀ ನಯನಪ್ರಭಾ ಸಹಚರಂ ಹಾರಾಂಶು ವಿಸ್ತೀರ್ಣ ವ|
ಕೋರಂಗ ಸ್ಥಲದೊಳ್ ರಸಾಭಿನಯಮಂ ತೋರ್ಪನ್ನೆಗಂ ವಾಜಿಯಂ ||
ಧಾರಾ ಪಂಚಕದೊಳ್ ವಿಚಿತ್ರ ಲಯದಿಂ ತಾಮೇಜ್ ಬರ್ಸಿ ಮಹಾ |
ಧೀರರ್ ಕಾಲ್ನಡೆಯೊಳ್ ನೃಪಾವಸಥದಿಂ ಬರ್ಪಂದಮಾವಂದನೋ ||೧೮೦||


1. ರು೦ (?) ಮಳಿದರ೦ದದಿನತ್ತ ಮೋದಪರ್. ಚ.