೨೩೪
ಉ || ಮಂಗಲ ರತ್ನ ವೇದಿಕೆಯೊಳೋಲಗಸಾಲೆಯೊಳಿಂದು ಕಾಂತ ರಾ |
ಜಾಂಗಣದೊಳ್ ಗೃಹೋಪವನದೊಳ್ ಗೃಹದೀರ್ಘಕೆಯೋಳ್ ವಿಲಾಸಗೇ |
ಹಂಗಳೊಳಂಚೆವಿಂಡಿನೊಡನಾಡುವ ಜಾನಕಿ ಪಾದಮಾರ್ಗದಿ೦ ||
ದಂಗಡಿ ವೀದಿಯೊಳ್ ಪತಿಯ ಪಿಂತನೆ ಮೆಯ್ಯ ರೆದೆತ್ತ ಪೋದಸಳ್ || ೧೮೧ ||
ಮತ್ತಮಲ್ಲಿ ಕೆಲರ್ ನಯ ನಿಪುಣರುಂ ಕಲಾಕುಶಲರುಮುದಾತ್ತ ರಾಘವನಲ್ಲದೆ
ಪದಪಲ್ಲವರಾಗದಿಂ ನಿಖಿಲ ಸರಿಜನ ಮನೋರಾಗಮನೊದಗಿಸಲುಮವಾರ ವೀರದಿ
ರಯೋಧ್ಯಾ ಸಿಂಹಾಸನಮಂ ಪದುಳಮಿರಿಸಲು೦, ಕಿಂಚಿದುನ್ನ ಮಿತ ಭೂ ಲತಾಂ
ತಲದಿನಖಿಲ ಯಾಚಕ ಮನೋರಥಮಂ ಸಫಲಮಾಡಲುಂ, ಭುಜಪ್ರತಾಪ ತಪನ
ಶಾಪದಿನುದ್ವತ್ತ ರಾಜ ಮಂಡಲಮಂ ಮಸುಳಿಸಲು೦, ನಿಷ್ಪ ಕೃಪಾಣಧಾರಾ
ಜಲಜಲಧಿಯಿಂ ಶರಣಾಗತ ಕುಕೃತ್ಯುಲಮನೊಳಕೊಂಡು ಕಾಯಲು೦, ನಿಖಿಲ
ಎಕ್ಸಾಲ ಮಕುಟ ನಿಕಟ ವರ್ತಿ ನಿಜಾಜ್ಞಾ ಮಾತ್ರದಿಂ ವತ್ಥಾಶ್ರಮ ಚರಿತ್ರಮನವಿಶ್ರಾಂ
ಶಂ ಮಾಡಲುಂ, ದುರ್ಜಯ ವಜ್ರಾವರ್ತ ಚಾಪ ಟಂಕಾರ ಶರಮೋಕ್ಷ ಹೂಂಕಾರದಿಂ
ಲೋಕಲು೦ಟಾಕ ವಿಗ್ರಹ ಮದವೀರಗ್ರಹೋಚ್ಚಾಟನಮನೊಡರ್ಚಲು೦, ಜಗತ್ಪವಿತ್ರ
ಕಾರುಚರಿತ್ರದಿಂ ಮನುಸೂತ್ರಮಂ ವಿವರಿಸಲು, ಸಹಜ ಸಾಹಿತ್ಯ ಕಲಾ ಕೌಮುದೀ
ಲಾಸದಿಂ ವಿದ್ವಜ್ಜನ ಮನಃಕುಮುದಿನಿಯನಲರ್ಚಲು೦, ಪ್ರೇವರಸ ಪುಷ್ಟ ದೃಷ್ಟಿ
ರಾತದಿಂದಭಿಜನಸನಾಭಿಜನಮಂ ಕೃತಾರ್ಥಮಾಡಲು, ಪೆರ್ ನೆರೆಯರೆಂದು
ಕೈಕೆಯ ಕೈತವಕ್ಕೆ ಕನಲ್ಲೊನಲ್ಲು ನುಡಿವ ನುಡಿಗಳನಾಲಿಸುತ್ತುಂ ದಿವಸದವಸಾನ
ಸಮಯದೊಳ್ ಪುರದ ಪರಭಾಗದ ಅರಭಟ್ಟಾರಕರ ಬಸದಿಯ ಕನಕ ಪ್ರಾಕಾರಮಂ
ಪೊಕ್ಕು-
ರು || ಲಲಿತಾಕಾರಮದೀಯೆ ನಾಡೆ ನಯನಕ್ಕಾನಂದಮಂ ಮೇರುವಂ|
ಬಲಗೊಳ್ಳತನೂಜನಂತೆ ಬಲಗೊಂಡಂ ಪಂಕಜ ಶ್ರೀಯನಂ ||
ಡಿವನ್ನ ನಿಜವಾದ ವಿನ್ಯಸನ ಸೌಂದರಂ ಬುಧ ಪ್ರಸ್ತುತಂ |
ಬಲಭದ್ರಂ ಜಿನನಾಥ ದಿವ್ಯ ಗೃಹಮಂ ಸಾಹಿತ್ಯ ವಿದ್ಯಾಧರಂ ||೧೮೨ ||
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಳಚಂದ್ರ
ಮುನೀಂದ್ರ ಚರಣ ನಖ ಕಿರಣ ಚಂದ್ರಿಕಾ ಚಕೋರ ಭಾರತೀ
ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
ರಾಮಚಂದ್ರ ಚರಿತ ಪುರಾಣದೊಳ್
ವನಪ್ರವೇಶ ವರ್ಣನಂ
--ಷಷ್ಠಾಶ್ವಾಸಂ--
1. ಕಾ೦ತಧಾರಾ೦ಗಣ. ಚ. 2. ವಿರಚಿಸಲು. ಚ. 3. ಕಾರದಿನೀಯ. ಕ. ಖ. ಗ. ನ. ಚ.