ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ ಪ್ತ ಮಾ ಶ್ವಾ ಸಂ

ಕಂ || ಶ್ರೀರಮಣಂ ಬಲಗೊಂಡಖಿ
ಲಾರಾಧ್ಯನ ರತ್ನಭವನಮಂ ಪೊಕ್ಕಂ ನೀ ||
ಹಾರ ರುಚಿ ರುಚಿರ ಕೀರ್ತಿ
ಶ್ರೀರಮಣಂ ಪೆಂಪುವೆತ್ತನಭಿನವ ಪಂಪಂ || ೧ ||


ಅ೦ತು ಜಿನಭವನಮಂ ಪೊಕ್ಕು ಮುಕುಳಿತ ಕರ ಸರೋಜಮಂ ನೊಸಲ್ಲೆ
ತಂದು-

ಕಂ || ಒಡಲುವನಾತ್ಮನುಮಂ ಬೇ
ರ್ಪಡಿಕುಮವೋರೊಂದಲೋಳಗೆ ಪೊಕ್ಕಿರ್ದುವನೇ೦ ||
ಪಡೆಮಾತರಭಟ್ಟಾರಕ
ರಡಿದಳಿರೊಳ್ ಪೊಳೆವ ನಖರುಚಿ ಕ್ರಕಚ೦ಗಳ್|| ೨ ||

ಎಂದು ದರ್ಶನ ಸುತ್ತಿಗೆಯು ಜಿನಭವನ ಮಧ್ಯರಂಗಮಂ ರಾಮಲಕ್ಷ್ಮಣ
ರಲ೦ಕರಿಸಿರ್ಪುದುಮಾಸಮಯದೊಳ್-

ಮ|| ಪ್ರಭವಬದ್ಧ ಕ್ರೋಧದಿಂ ಸಂಧಿಸೆ ಹೆಆಗೆ ತಮಂ ಸ್ಥಾನಮುಂ ಬಿಟ್ಟು ತೇಜ೦ |
ತವೆ ಶೋಕ ಚಕ್ರವಾಕಕ್ಕೊಡರಿಸೆ ದಿವಸ ಶ್ರೀಯನೀಡಾಡಿ ಕೈಕೊಂ ||
ಡವರೋಧ ಸ್ತ್ರೀಯರಂ ಪದ್ಮನಿಯರನಿನಿಸುಂ ನೋಡದುತ್ತಾನ ಪಾದಂ |
ದಿವಸೇಂದ್ರಂ ಭೀತಿಯಿಂದ೦ಬರನನು೦ದು ವಾರಾಶಿಯಂ ಪೋಗಿ ಪೊಕ್ಕಂ ||

ಚ || ಸುಗಿದು ತಮಕ್ಕೆ ಬಿಟ್ಟು ಬಿಸುಸಂ ಪರಿವಾರಮೆನಿಪ್ಪ ಜಕ್ಕವ |
ಕೈಗಳ ವಿಯೋಗಮಂ ನೆನೆಯದಬ್ಬಿ ನಿಯಂ ಕಡುಗೂರ್ಪನಲ್ಲ೪೦ ||
ಬಗೆಯದೆ ಮಂಡಲಾಗ್ರ ರುಚಿ ಅದೆ - ಭೀತಿಯಿನೋಡಿಪೋಗಿ ತೊ |
ಟ್ಟಗೆ ರವಿ ಸಾರ್ದನಸ್ತಗಿರಿಯಂ ಕ್ಷಣಿಕಂ ಸ್ಥಿರಸಾರನಪ್ಪನೇ || ೪ ||

ಮ || ದಿನಪಂ ತನ್ನನಗಲ್ಲು ಪೋಗೆ ಹರಿದಿಕ್ಕಾ೦ತಾನನಂ ಕಂದಿದ |
ತೆನೆ ಮರ್ವುರ್ವಿದುದಾತನೊಳ್ ನೆರೆಯ ರಾಗಂ ಪಶ್ಚಿಮಾಶಾ ವಿಳಾ ||


1. ಜಿನಭವನಮಂ ರಾಜಕುಮಾರರ್ ವ೦ದನೆಯ ಮಾಡಿ ಕುಳ್ಳಿರ್ಪುದು. ಚ.
2. ಸರ್ವವಿ್ರದು. ಚ.