ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಮಾಶ್ವಾಸಂ
೧೬೭

ನಡೆಯೆ ವನಕ್ಕದಂ ಮದುಮೇcಬೆಸಗೊಂಡನೆ ದೀಕ್ಷೆಗೊಂಡನಾ |
ಗಡೆ ವಿಭು ಸರ್ವಭೂತಹಿತ ದಿವ್ಯಮುನೀಂದ್ರರ ಪಾದಪಾರ್ಶ್ವದೊಳ್ || ೮ ||

ಅಂತು ದಶರಥಂ ದಶಧರ್ಮನಿರತನಪ್ಪುದುಂ, ಭರತಂ ರಾಜ್ಯಸುಖ ನಿರತನಾದ
ನಾಗಳಪರಾಜಿತಾಮಹಾದೇವಿಯುವುದಾತ್ಯರಾಘವನ ವನಪ್ರವೇಶ ಕೇಶಾಯಾ
ಸಮಂ ನೆನೆದವಿಶ್ರಾಂತ ವಿಗಳಿತಾಶ್ರು ಸಲಿಲ ಕಲಿಲ ಕಪೋಲ ಯುಗಳೆ ಗದ್ದದಕಂಠ
ಯಾಗಿ-

ಕಂ | ಏನನಿದಂ ನೆಗೆಟ್ಟಿ ಮ್ ಸುತ
ಕಾನನಮಂ ಪೋಗಿ ಪೊಕ್ಕು ಮಂಗಲ ಗೀತ ||
ಧ್ಯಾನಮಿರೆ ಸಿಂಹ ಶರಭ
ಧ್ಯಾನಮನಾಲಿಸುವ ಮಹಿಮೆಗಲಿಗನಾದ್ರೆ|| ೯ ||

ಧವಳ ಚಮರರುಹ ಪವನನ
ನವಮಾನಂಗೆಯ್ದು ಕಂದ ನಿಷ್ಟುರ ಚೀರೀ ||
ರವ ಮುಖರ ಪರುಷ ಕಾನನ
ಪವಮಾನನ ಸೋಂಕನಾಸೆಗೆಯ್ಯಲ್ ಬಗೆದ್ದೆ || ೧೦ ||

ಚ || ನನ ಜಲಕೇಳಿಯಂ ಬಿಸುಟು ನಂದನ ನಿರ್ಝರ ಶೈಲಸಾನು ನಂ |
ದನ ಜಲಕೇಳಿಯೊಳ್ ತೊಡರ್ದೆ ವಾರವಧೂ ಜನ ಮುಗ್ಧ ಸಾಲಕಾ ||
ನನಮಿರೆ ಸಾಲ ಕಾನನಮನೀಕ್ಷಿಸಲಚಿಗನಾದೆ ದಿವ್ಯ ಭೋ |
ಜನಮಿರೆ ಕಂದ ಕಂದ ಫಲ ಮೂಲದಿನಾ ಸುವೈ ಕ್ಷುಧಾಗ್ನಿಯ೦ ||೧೧ ||

ಮುಡಿಯ ಪಯೋಧರಂಗಳ ನಿತಂಬದಳುಂಬಮೆನಿಪ್ಪ ಬಿಣ್ಣಿನಿ೦ |
ಗಡಣದಿನಂಚೆಯೊಳ್ ಗೃಹ ವನೋಪವನ ಸ್ಥಳದೊಳ್ ವಿನೋದ ದಿ೦ ||
ನಡೆವೆಡೆಯೊಳ್ ಬಬಿಲ್ವ ಜನಕಾತ್ಮಜೆಯಂ ರಘುವಂಶರಾಮ ನೀಂ |
ನಡೆಯಿಸುವಂದಮಾವುದೊ ತನೂಜ ದುರಂತ ವನಾಂತರಾಳದೊಳ್ || ೧೨ ||


ಕಂ|| ನಡೆಯಂ ವನ್ಯ ಗಜಂಗಳ
ನಡೆಯೋಳ್ ಸೋಗೆಗಳ ಸೋಗೆಯೊಳ್ ಸೋರ್ಮುಡಿಯ೦ ||
ನುಡಿಯಂ ಕೋಕಿಲ ರುತಿಯೊಳ್
ಪಡಿಯಿಡಲೊಡನು ತನಯ ಜನಕಾತ್ಮಜೆಯಂ|| ೧೩||


1. ಪೆಸರ್ಗೊ೦ಡನೆ. ಕ. ಘ.