೧೬೮
ಎಂದತಿ ಪ್ರಳಾಪಂಗೆಯ್ಕೆ ಸುಮಿತ್ರೆಯುಮೊಡನೆ ಶೋಕಿಸೆ ಕೈಕೆ ಕೇಳು ತನ
ಗತ್ಯಂತ ಶೋಕಾವೇಗವಾಗೆ-
ಕಂ|| ಪತಿ ದೀಕ್ಷೆಗೊಂಡನಹರಾ
ಜಿತೆಗಿ ನಿವಿರಿದಾಯ್ತು ದುಃಖಭಾರಂ ಧರೆಯಂ ||
ಸುತನುಮಿಲಿ ಕೆಯ್ದ ನೀ ದು
ಹೃತಮಂ ಸ್ತ್ರೀತ್ವದ ಜಡತ್ವದಿಂದೊಡರಿಸಿದೆ|| ೧೪ ||
ಎಂದು ತನ್ನಂ ತಾನೆ ನಿಂದಿಸಿಕೊಂಡು ಭರತನಂ ಬರಿಸಿ ಮಗನೆ ನಿನ್ನ ರಾಜ್ಯಂ
ರಾಮಲಕ್ಷ್ಮಣರಿಲ್ಲದೊಪ್ಪಲಿಯದವರ ಜನನಿಯರುವವರ ವಿಯೋಗ ವಿಷಾದ
ವೇಗದಿಂ ವಿಗತ ಜೀವಿತೆಯರಪ್ಪರದುಕಾರಣದಿಂ ಬೇಗಮೆಮ್ಮೆ ವೋಗಿ ಪೋಗಲೀಯದೆ
ನಿಲಿಸಾನುಂ ನಿನ್ನ ಒಂದನೆ ಬಂದಪೆನೆಂಬುದುಮಂತೆಗೆಯೋನೆಂದು ರಾಘವನಂ
ಕಲಿಸಿ ಬಂದ ಸಾಮಂತರ್ವೆರಸು ತೊಜಿಯಂ ಪಾಯು ಪೋಗಿ ಮುಂದೆ ಕಲಿಂಗಿ
ಕಲಿಸಿದ ಕಾನನದ ಬಟ್ಟೆಯೊಳ್ ಜಾನಕಿಯ ಗಮನ ಪರಿಶ್ರಮಮನಾಗಿಸುತಿರ್ದ
ರಘುವೀರನಂ ಮುಟ್ಟೆವಂದು ವಾಹನದಿನಿ೦ದು ಕಾಲಮೇಲೆ ಕವಿದುಬಿಟ್ಟು-
ಕಂ || ಪುದಿಯೆ ತಮಂ ಮನಮಂ ಮೋ
ಹ ದವಾಗ್ನಿಯ ಧೂಮದಂತೆ ಕರಣ ಬಲ ಪ್ರಾ ||
ಣದ ಚೇಷ್ಟೆಗೆಟ್ಟು ಭರತಂ
ಸದಾನಂ ವಿಕಲನಾಗಿ ಮೂರ್ಛಗೆ ಸಂದ೦|| ೧೫ ||
ಅಂತು ಮೂರ್ಛಿತನಾಗಿ ಕಿಅದಾನುಂ ಬೇಗದಿನೆಂತಾನುಮೆತ್ತು ಸೀತೆಗಂ ಲಕ್ಷಣಂಗಂ
ತುಟಿ ಯು ನಿಟಿಲ ತಟ ಘಟಿತ ಮುಕುಳಿತ ಕರಸರೋಜ೦
ರಾಮಚಂದ್ರನ ಮುಖಚಂದ್ರನಂ ನೋಡಿ-
ಕಂ || ಅಕ್ರಮದಿನಸಿ ವಸುಧಾ
ಚಕ್ರಮನಾನಾಸೆಗೆಯ್ಯ ದುರ್ಯಶಮಾಶಾ ||
ಚಕ್ರಾವಧಿಯಕ್ಕುಂ ದೋ
ರ್ವಿಕ್ರಮ ಧನ ನಿಮ್ಮ ಮನದೊಳವಧರಿಪುದಿದಂ||೧೬ ||
ಅನಯಂ ಮನುಕುಲದೊಳ್ ನಾ
ಭಿ ನರೇಂದ್ರನಿನಿತ್ತಲಾದುದಿಲ್ಲೆಂದಂ ||
ಜನಿಯಿಸಿದೊಡೆ ಕುಲ ದೂಷಕ
ನೆನಿಪ್ಪ ಪಾಪಕ್ಕೆ ಸಟಿಗೆ ಪಕ್ಕಾಗಿರೆನೇ|| ೧೭ ||