ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೬

ಸಪ್ತಮಾಶ್ವಾಸಂ

ಕಂ || ಬಾಳಂ ಬ೦ಚಿಸಿ ಪಿಡಿದಂ
ಬಾಳಕನಂ ಪಿಡಿವ ಮಾತ್ರೆಯಿಂದವನಂ ಬಿ ||
ಬ್ಲಾಳನೆಂದುಯ್ದ ನಾವ೦
ಕಾಳೆಗದೊಳ್ ಲಕ್ಷಣಂಗೆ ಕೂರ್ಪಂ ತೋರ್ಪಂ || ೫೯ ||

ಆಗಳಾ ಕಳಕಳಕ್ಕೆ ಮುನ್ನೀರೆ ಮೇಲೆ ದಪ್ಪಿದಂತೆ ಬೆಂದಗುಳು ಬರ್ಸ
ಮಾರ್ಪಡೆಗೆ ಕಡೆಗಾಲದ ಕೃತಾಂತನಂತೆ ಪೆಡಂಮಗುಟ್ಟು-

ಕಂ || ಕೂರಾಳಿಂ ಕರಾಳಂ
ತೇರಿ೦ ತೇರಂ ಕಡಂಗಿ ಹಯದಿಂ ಹಯಮಂ ||
ನಾರಣದಿಂ ವಾರಣಮಂ
ನಾರಾಯಣನಿಟ್ಟು ತವಿಸಿದಂ ಮಾರ್ಬಲಮಂ||೬೦ ||

ಉ || ಏನುದಾ೦ಪುದುಂ ಜವನವೋಲ್ ತವೆ ಕೊಂದನೊ ವೈರಿ ಸೇನೆಯ೦ |
ಮಾನವನಂದಮಲ್ಲವಿದು ದಾನವನಂದಮೆನಲ್ ಬೃಹದ್ಬಲಂ ||
ಮಾನವರಿಂ ಹಯ ಪ್ರಕರನಂ ಹಯದಿಂ ರಥಮಂ ರಥಂಗಳಿ೦ |
ದಾನೆಯನಿಟ್ಟು ಕೈಗೆ ದೊರೆಕೊಂಡುದೆ ಕೈದುವೆನಲ್‌ ಜನಾರ್ದನಂ || ೬೧ ||

ಅಂತಗುರ್ವುವದ್ಯುತಮುಮಾಗೆ ಕಾದಿ-

ಮ || ಚಕಿತಾರಾತಿ ಚತುರ್ಬಲಂ ಬಲಯುತಂ ದೋಸ್ತಂಭದೊಳ್ ಸಾಲಭಂ |
ಜಿಕೆವೋಲ್ ರಂಜಿಸೆ ವೀರಲಕ್ಷ್ಮಿ ರಘುವೀರಂ ಲಕ್ಷಣಂ ರಾಷ್ಟ್ರ ಕಂ ||
ಟಕನಂ ಬಾಲೆಗೊಂಡನುಯ್ದ ನಿಭಮಂ ಪಂಚಾನನಂ ಹಸ್ತಿ ಮ |
ಸ್ತಕ ಮಸ್ತಿಷ್ಯ ರಸಾನುರಕ್ತ ರಸನಂ ಮಾರ್ಕೊಂಡು ಕೊಂಡುಯ್ಯ ವೋಲ್ ||

ಆ ಸಮಯದೋ೪° ಪರಿಜನಂಬೆರಸು ಕರುಮಾಡದೆರಡನೆಯ ನೆಲೆಯೊಳಿರ್ದು
ವಜ್ರ ಕರ್ಣಂ ಕರ್ಣಾ೦ತ ವಿಶ್ರಾಂತ ವಿಸ್ತಾರಿತ ವಿಲೋಚನನಿದೇನೆಂದು ನೋಡುತ್ತು
ಮಿರೆ-

ಮ||ಸ ||ಗಣನಾತೀತಾನ್ಯ ಸೇನಾಂಗಮನನಿತುಮನೇಕಾಂಗದೊಳ್ ಶೂನ್ಯ ಹಸ್ತಂ |
ರಣದೊಳ್ ಸೀಳೊಟ್ಟ ಸಿಂಹೋದರನನುಜದೆ ಕೊಂಡುಯ್ದನುದ್ದಂಡನೀತ೦||
ಗೆಣೆಯಾವಂ ಗಂಡನೆಂದಾ ಪುರಜನವನಿತುಂ 'ವಿಸ್ಸುರತ್ಮಕ ವಿಕ್ಷೇ |
ಪಣ ಮೆಯ್ತಂದೀಕ್ಷಿಸಿತ್ತು ತ್ಸುಕ ಸರಭಸ ಯಾನಂ ಗತಾನ್ಯಾವಧಾನಂ|| ೬೩ ||


1. ವಿಸ್ಮಯಾ ಕ್ರಾನ ವಿಕ್ಷೇಪಣ. ಕ. ಖ. ಗ; ವಿಸ್ಮಯವೃಕ್ಷ ವಿಕ್ಷೇಪಣ. ಫ.
12