ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೮

ರಾಮಚಂದ್ರಚರಿತಪುರಾಣಂ

ಆ ಸಮಯದೊಳ್-
ಕಂ || ಅವಿರಳ ಗಳದಶ್ರು ಜಲ
ಸ್ಥವ ದೌತ ಕಪೋಲತಳಮವಂತೀಶ್ವರನಂ ||
ತವುರಂ ಪರಿಪಾಳಿಪುದೆ
ಮೂವತಂಸಮನೆಂದು ಬ೦ದು ಕಾಲೈ ಆಗುವುದುಂ||೬೪ ||


ಮ || ಮಲೆತಿರ್ದ೦ ಗಡ ವಜ್ರ ಕರ್ಣನೊಳದಂ ನೀಂ ಮಾಣಿಸೆಂದಟ್ಟಿ ದಂ |
ಕೊಲಲೆಂದಟ್ಟಿ ದನಿಲ್ಲ ರಾಮನಧಿರಾಜಂ ಚಿಂತೆ ಬೇಡ೦ತಜ೦ ||
ದೆಲೆ ಸಿ೦ಹೋದರ ಮಾನಿನೀಜನಮೆ ಶೋಕೊದ್ರೇಕಮಂ ಮಾಣಿಮಂ |
ಜಲಿಮೆ೦ದ೦ ಘನ ದುಂದುಭಿ ಧ್ವನಿಗಳೊಂದಾದಂತೆ ಲಕ್ಷ್ಮೀಧರಂ || ೬೫ ||

ಅಂತವರ ಮನದ ಶಂಕಾ ಕಳ೦ಕಮಂ ಕಳೆದು ಸಿಂಹೋದರನನೆದುಯ್ಯುದು
ಮವನಿವರ್ ಬಲಾಚ್ಯುತರೆಂದದು-

ಚ || ಅತಿಬಲನಪ್ಪ ಲಕ್ಷಣ ಕುಮಾರನ ವೀರರಸ ಪ್ರವಾಹಿನೀ |
ಪತಿತ ಮಹಾ ಮಹೀರುಹಮೆನಲ್ ನತನಾದನವಂತಿ ವಲ್ಲಭಂ ||
ಹತ ಸುಮನೋವಿಳಾಸನದ ಸಾರಿತ ಮೂಲಬಲಂ ನಿರಸ್ತ ವಿ |
ಸೃತ ನಯನಸ್ತಸಾರನವಿಚಾರನಿಳೇಶ್ವರ ಪಾದ ಪಾರ್ಶ್ವದೊಳ್|| ೬೬ ||


ಆಗಳುದಾತ್ತ ರಾಘವಂ-

ಚ || ಮನದೊಳೆ ಮೆಚ್ಚಿ ಲಕ್ಷ್ಮಣನ ದೋರ್ವಲ ಗರ್ವಮನಾನತಂಗೆ ಸ |
ಮನದೊಳೆ ಭೀತಿಯಂ ಕಳೆದು ವಿಗ್ರಹದಾಗ್ರಹಮಿರ್ಕೆ ವಜ್ರಕ ||
ರ್ಣನೊಳನುಬಂಧಮಂ ಮಗುವಿಗೆ ಮಾದು ನೀನೇನೆ ಜಾನಕೀ ಪ್ರಿಯಂ |
ವಿನಮಿತ ಮಸ್ತಕಂ ಮುಗಿದ ಕೈವೆದನೆಂದನವಂತಿ ವಲ್ಲಭಂ || ೬೭ ||

ಉ || ದೇವರ ಸನ್ನನಾವುಗೆಗಳಂ ಪಿಡಿದೆಂಬುದನಿಂಬುಕೆಯ ಸ |
ದ್ಯಾವಮೆ ಸಾಲು ಮೊಲ್ಲೆನು೦ದೇನುಮನೀ ಬೆಸನಂ ನರೇಂದ್ರ ನೀ ||
ನೀವುದು ಪೇಕ್ಷೆಗೆಯ್ದು ದುಮಪೇಕ್ಷಿಸುವೆಂ ಫಲ ಮೂಲ ವಲ್ಕಲ |
ಪ್ರಾವಣಾದ್ರಿ ಕುಂಜ ವನ ವಾಸ ಪವಿತ್ರ ತಪಶ್ಚರಿತ್ರಮಂ || ೬೮ ||

ಎಂದು ಬಿನ್ನವಿಸುತ್ತಿರ್ಪುದುಮಿತ್ತಲ್-


1. ಸನ್ಮನ. ಚ.