ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಮಾಶ್ವಾಸಂ
೧೯೧

ಮ|| ಸ ನೆಲನಿಲ್ಲಿಂದಿತ್ತಲಿಲ್ಲೆಂಬಿನಮಿನಿತೆ ದಿಶಾಘಾಟಮೆಂಬನ್ನೆಗಂ ಕ |
ಅಲೆ ಚಂದ್ರಾದಿತ್ಯ ತೇಜಕ್ಕದಿರದಿದಿರನೊಡ್ಡಿರ್ದುದೆಂಬನ್ನೆಗಂ ಕ ||
ಅಲಿಸುತ್ತಿರ್ದು ಕಾಡಾನೆಯ ಕಡುಪುಗಳಿ೦ ಸಿಂಹ ಸಂಘಾತದಿಂ ಪೆ |
ರ್ವುಲಿವಿಂಡಿಂ ಕಣ್ಣ ಗುರ್ವ೦ ಪಡೆದು ಕುಲನಗಸ್ಪರ್ಧಿ ವಿಂಧ್ಯಾಚಲೇ೦ದ್ರ೦ ||

ಆ ನಗೋಸತ್ಯಕದೊಳ್ -

ಕಂ || ಮಲಯರುಹ ಗಂಧಿ ಮೃಗಮದ
ತಿಲಕೆ ತಮಾಲ ಪ್ರನಾಳ ಕುಂತಲೆ ಪುಳಿನ ||
ಸ್ಥಲ ವಿಪುಲ ಜಘನೆ ಮದಗಜ
ವಿಲಾಸವತಿ ವನಲತಾಂಗಿ ಕಣ್ಣೆ ಸೆದಿರ್ದಳ್ || ೧೨೪ ||

ಆ ವಿಂಧ್ಯನಗಮಂ ದಾಂಟ ಪೋಗಿ 'ತಾಏಯೆಂಬ ತೊ ಜಿಯಂ ಪಾಯ್ಕರುಣೆ
ಯೆಂಬಗ್ರಹಾರಮಂ ಪೊಕ್ಕದೊಂದು ಗೃಹಮಂ ಪುಗುವುದುಮಾಗಳಾಗೃಹದ ವಿಪ್ರ
ವಧು-

ಕ೦ || ಆದೇಯ ರೂಪರಂ ಕ೦
ಡಾದರಿಸಿದಳೇ ಅಲಿಕ್ಕಿದಳ್ ಸೀತೆಗೆ ಶೀ ||
ತೋದಕದಿಂ ಗಮನ ಶ್ರಮ
ಖೇದಮನಾಯಿಸಿದಳೇನವಳ್ ಶುಭಮತಿಯೋ ||೧೨೫ ||

ಅನ್ನೆಗಮಾಕೆಯ ಭರ್ತಾರಂ ನಿಜಮಂದಿರಕ್ಕೆ ಬಂದವರಂ ಕಂಡಿವರನೇಕಿಲ್ಲಿ
ಪುಗಲಿಯೆಂದರ್ಥ್ಯ ಪಾನೀಯ ಪಲಾಶ ಕಾಂಡ ಕುಶ ಕುಸುಮ ಹಸ್ಯನಪ್ರಶಸ್ತ೦
ಕೆಡೆನುಡಿಯೆ-

ಚ || ಕಪಿಲನ ಕೃಪೆವಾತು ಕಿವಿಗೆಯ್ದರೆ ಜಾನಕಿ ಪೋಗಿ ಬಿಚ್ಚತಂ ।
ವಿಪಿನದೊಳಿರ್ಪಾಗೃಹದೊಳಿರ್ಪುದಅ೦ದೆನೆ ಕೇಳು ಲಕ್ಷಣಂ ||
ಕುಪಿತನನಂ ಕಟಾಕ್ಷಿಸುವುದುಂ ದ್ವಿಜನೀತನವಧ್ವನಿ ಸೈ |
ರಿಪುದನುಜಾತ ನೀಂ ಮುಳಿಯಲಕ್ಕುಮೆ ದುರ್ಬಲರೇನನೆಂದೊಡಂ || ೧೨೬ ||

ಎಂದು ರಘುವೀರನಲ್ಲಿಂತಳರ್ದು ಪೋವೊಬಿಲಂ ಸೆಜಗಿಕ್ಕಿ ಪರ್ವಟ್ಟೆವಿಡಿದು ನಡೆಯುತ್ತುಂ-

1. ತಾರೆ. ಗ. ಘ.