ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

13

ರಿಂದ ಪಿತೃವಾಕ್ಯ ಪರಿಪಾಲನವೇ ನಿನ್ನ ಕರ್ತವ್ಯವು, ತಂದೆಯು ಕ್ರಮದಿಂದ ನನಗಿತ್ತ ರಾಜ್ಯವನ್ನು ನಾನು ನಿನಗೆ ಕೊಡುವೆನು ; ಆದುದರಿಂದ ರಾಜ್ಯಭಾರ ವನ್ನು ವಹಿಸುವುದು ನಿನಗೆ ಸ್ವಲ್ಪವೂ ಅಕ್ರಮವಲ್ಲ” ಎಂದು ಹೇಳಿ ಭರತನ ನೊಡಂಬಡಿಸಿದನು. ಇದನ್ನು ನೋಡಿ ಸಭಾಜನರು ರಾಮನ ಸತ್ಯಸಂಧತೆ ಯನ್ನೂ ಔದಾರ್ಯವನ್ನೂ ಕೊಂಡಾಡುತ್ತಿರಲು ಲಕ್ಷ್ಮಣನು ರಕ್ಷಣ ನಾಗಿ ಭರತನ ಮೇಲೆ ಕೋಪಗೊಂಡನು, ರಾಮನು ತನ್ನ ಕಣೋಟದಿಂದ ಲಕ್ಷ್ಮಣನ ಕೋಪವನ್ನು ಶಾಂತವಾಡಿ ತಂದೆಯ ಪಾದಗಳಿಗೆರಗಿ ಶತ್ರುಗಳನ್ನು ಜಯಿಸಿಕೊಂಡು ಬರುವೆನೆಂದು ಆತನೊಡನೆ ಹೇಳಿ ಸಭೆಯಿಂದೆದ್ದು ಹೊರಡಲು ದಶರಥನು ಮೂರ್ಛ ಹೋದನು. ಇದನ್ನು ನೋಡಿ ಕೈಕೆಯು ಇದೆಲ್ಲವೂ ತನ್ನಿಂ ದಾಯಿತಲ್ಲಾ ಎಂದು ವ್ಯಥೆಪಟ್ಟು ಅಳುತ್ತ ಹೊರಟು ಹೋದಳು. ಲಕ್ಷ್ಮಣನು ರಾಮನ ಸಹಾಯಕ್ಕಾಗಿ ಅವನೊಡನೆ ತಾನೂ ಹೋಗುವ ಆಲೋಚನೆಯಿಂದ ರಾಮನನ್ನು ಸೇರಿದನು. ಈ ವೃತ್ತಾಂತವೆಲ್ಲವನ್ನೂ ಸುಮಿತ್ರೆಯ ಅಪರಾಜಿತೆಯೂ ಕೇಳಿ ಭಯಭ್ರಾಂತರಾಗಿ ವ್ಯಸನಪಡುತ್ತಿರುವಲ್ಲಿ ರಾಮಲಕ್ಷ್ಮಣರು ಬಂದು ಅವರನ್ನು ನಮಸ್ಕರಿಸಿ ಕುಳಿತುಕೊಂಡರು. ಅಪರಾಜಿತೆಯು ರಾಮನ ವನವಾಸವನ್ನು ನೆನೆ ನೆನೆದು ಗಟ್ಟಿಯಾಗಿ ಅಳತೊಡಗಿದಳು. ಲಕ್ಷ್ಮಣನು ತಕ್ಕ ಮಾತುಗಳಿಂದ ಆಕೆ ಯನ್ನು ಸಮಾಧಾನ ಗೊಳಿಸಲು, “ಸೀತೆಯೂ ನಿಮ್ಮೊಡನೆ ಬರುವಳು, ಇಲ್ಲಿರುವವಳಲ್ಲ" ಎಂದು ಆಕೆಯು ಹೇಳಿದಳು. ಸುಮಿತ್ರೆಯು ಲಕ್ಷ್ಮಣನನ್ನು ಕುರಿತು, ತಾನು ತನ್ನ ಕಷ್ಟವನ್ನೂ ಲಕ್ಷಿಸದೆ ಅಣ್ಣನನ್ನೂ ಅತ್ತಿಗೆಯನ್ನೂ ಭಕ್ತಿಯಿಂದ ಸೇವಿ ಸುತ್ತಿರೆ೦ದು ಬುದ್ಧಿವಾದವನ್ನು ಹೇಳಿದಳು.
ರಾಮಲಕ್ಷ್ಮಣರು ತಾಯಿಯರ ಅಪ್ಪಣೆಯನ್ನು ಪಡೆದು ಸೀತೆಯೊಡನೆ ಅಯೋಧ್ಯೆಯ ಅ೦ಗಡಿಯ ಬೀದಿಯಲ್ಲಿ ಪಾದಚಾರಿಗಳಾಗಿ ಬರುತ್ತಿರುವಲ್ಲಿ ಪುರ ಜನರು ತಂಡತಂಡವಾಗಿ ನೆರೆದು ಕೌತುಕಗೊಂಡು ನೋಡುತ್ತ ಅರಸುಮಕ್ಕಳು ಈ ತೆರನಾಗಿ ಹೋಗುವುದಕ್ಕೆ ಕಾರಣವನ್ನು ತಿಳಿಯದೆ ನಾನಾ ವಿಧವಾಗಿ ಮಾತ ನಾಡಿಕೊಳ್ಳುತ್ತಿದ್ದರು. ಈ ಮಾತುಗಳನ್ನು ಕೇಳುತ್ತ ಅವರು ಸಾಯಂಕಾಲದ ಹೊತ್ತಿಗೆ ಪಟ್ಟಣದ ಹೊರಗಣ ಅರಭಟ್ಟಾರಕರ ಬಸದಿಯನ್ನು ಹೊಕ್ಕು ಪ್ರದಕ್ಷಿಣ ನಮಸ್ಕಾರವನ್ನು ಮಾಡಿದರು.


ಆಶ್ವಾಸ ೭-ಶರದ್ವರ್ಣನೆ

ಶ್ರೀರಾಮನು ಅಖಿಲಾರಾಧ್ಯನ ರತ್ನಭವನವನ್ನು ಬಲಗೊಂಡು ಒಳಹೊಕ್ಕು ಕೈಮುಗಿದು ದರ್ಶನಸ್ತುತಿಗೈದು ಕುಳಿತಿರಲು ಸೂರನಸ್ತಮಿಸಿದನು. ಆಗ ರಾಮನು, ವ್ಯಸನದಿಂದ ಅಲ್ಲಿಗೆ ಬಂದ ತಾಯಿಯರೊಡನೆ ವಿನಯ ವಚನಗಳನ್ನು ನುಡಿದು ಸಮಾ