ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಷ್ಟಮಾಶ್ವಾಸಂ

ಕಂ| ಶ್ರೀನಿಲಯನಿಷ್ಟ ವಿಷಯ ಸು
ಖಾನುಭವಂ ಬಡೆದು ದೇವ ನಿರಿತಮೆನಿಸಿ ||
ರ್ದಾ ನಗರಿಯೊಳಪ್ರಾಕೃತ
ಮಾನಧನಂ ಸುಖದಿನಿರ್ದನಭಿನವ ಪಂಪಂ || ೧ ||

ಆ ಶರತ್ಸಮಯ ಸಮನಂತರಂ ಗಾನೋತ್ಸುಕ ಚಿತ್ತನಾದ ರಾಮಂಗಮೂಲ್ಯ
ಮುಕ್ತಾದಾಮಮುಮಂ ಲಕ್ಷಣಂಗೆ ಮಣಿಕುಂಡಲಮುಮಂ ಸೀತಾದೇವಿಗೆ ಚೂ
ಡಾರತ್ನಮುಮಂ ವೀಣಾರತ್ನಮುಮನೋಲಗಿಸಿ, ವಿಷಮನಾದೆಡೆಗೆನ್ನ ನೆನೆವು
ದೆಂದು ವಿನಯಮಂ ನುಡಿದು ಕಿಜದೆಡೆಯಂ ಕ೦೨ ಸಿ ಬೀಳ್ಕೊಂಡು ಬಂದು,
ಯಕ್ಷ ವೈಕುರ್ವಣ ಪುರಮನದೃಶ್ಯಂಮಾಡಿ ನಿಜ ನಿವಾಸಕ್ಕೆ ಪೋದನಿತ್ತಲಾ ರಾಮ
ಲಕ್ಷಣ‌ ನಿಚ್ಚ ವಯಣಂಗಳಿ೦ ವಿಜಯಪುರದ ಬಹಿರುದ್ಯಾನಮನೆಯೇ ವರ್ಷ

ಸಮಯದೊಳ್ -

ಉ || ಮುನ್ನಿನ ಕಾಯ್ಕುಗೆಟ್ಟು ದಶದಿಟ್ಟುಖದಿಂ ಪೆಡಮೆಟ್ಟಿ ರಶ್ಮಿಗಳ |
ತನ್ನೊಳಡಂಗೆ ಚಂಡಕಿರಣಂ ವರುಣಾನಿಯ ಕೈಯ ಕೆಂಬರ ||
ನಡಿಯಂತೆ ದಿಟ್ಟಗಳವಟ್ಟರೆ ಪೊರ್ದಿದನಬ್ಬ ಷಂಡ ಸಂ |
ಚನ್ನಮನು ಹಂಸ ಮಧುರಸ್ವನನಂ ಬನಮಂ ರಘಧ್ವಹಂ || ೨ ||


ಅಂತತಿಶಯಮಪ್ಪ ವನವಿಲಾಸಮಂ ಸೀತೆಗೆ ತೋಜುತ್ತು ಬಂದದೊಂದು
ತಿಳಿಗೊಳದ ತಡಿಯ ತಮಾಲವನ ಲತಾಗೃಹದೊಳ್ ವಿಶ್ರಮಿಸಿರ್ಪುದುಂ-

ಕಂ || ಲತೆವನೆಯೊಳಗಣ ತಣ್ಣು
ಲ ತಾಣದೊಳ್ ಕುಸುಮದೆಸಳ ಸಸೆಯಂ ಸೀತಾ ||
ಪತಿಗೆ ಸಮದಂ ಸುಮಿತ್ರಾ
ಸುತಂ ಸಹೋದರರೊಳಿ೦ತತಿಸ್ನೇಹಿತರಾರ್ || ೩ ||


ಸೌಮಿತ್ರಿಯ ನಿರತಿಶಯ
ಪ್ರೇಮಮನದನಂತುಟಿಂತುಟೆಂಬಂತುಟಿ ನಿತಾ ||
ದ್ರಾ ಮುದ್ರಿತ ಲೋಚನನಿರೆ
ರಾಮಂ ರಕ್ಷಾನಿಮಿತ್ತ ಮೆಚ್ಚಿರ್ದ೦ || ೪ ||