ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಮಾಶ್ವಾಸಂ

೧೯೯

ಕಂ|| ಈಜಡಲೊಳಗೋಲಾಡುವ
ಮಾಜ್ಜಳ ಬಳಗಂಗಳೆಂಬಿನಂ ಶರದದ ಬೆ ||
ಜಿಜ್ಜಳೊಳಾಡಿದುವು ಚಕೋ
ರಜ್ಞಳ್ ಚ೦ದ್ರಾಂಶು ಪೂರ್ ಚಂಚು ಪುಟಂಗಳ್ || ೧೬೭ ||


ಬಳಸಿ ಸುಳಿದಾಡಿ ಕಾಲ್ವಡಿ
ದೆಳಸಿ ಕಲಾಲಾಸ ಮೊದವೆ ಜನನಿಯ ಮೊಲೆವಾ||
ಲಳನುಣ್ಣ ಶಿಶುಗಳಂತಿರೆ
ಕಳವೆಯ ಪಾಲ್ಲೆನೆಯ ಸಾಲನುಂಡುವು ಗಿಳಿಗಳ್ || ೧೬೮ ||

ದೂರದೊಳೀಕ್ಷಿಸಿ ತುಂಗಾ
ಕಾರದೊಳೊ೦ದಿದ ಋಜುತ್ವಮಂ ಪದೆದೆಳಸಿ ||
ತಾರನ್ನು ನೋಡದಂತ
ಸ್ವಾರತೆಯಂ ಕಾಶ ಕಣಿಶಮಂ ಶುಕಶಾಬಂ ||೧೬೯ ||

ಆ ಶರತ್ಸಮಯದೊಳ್-

ಮ|| ಸ್ರ|| ತನಗತ್ಯುತ್ಸಾಹದಿಂ ಯಕ್ಷನ ನೆಗಟ್ಟು ಚಿತಾಚಾರಮುಂ ಬೇಲ್ವಿದಂ ಸ |
ಮ್ಮನದಿಂದಂ ಮಾ ಸಂಪ್ರೀತಿಯುಮನವರತಂ ಹರ್ಷಮಂ ಮಾಡೆ ಸಾಹಿ||
ತ್ಯ ನಟೀ ಶೈಲೂಷನತ್ತೂ ರ್ಜಿತ ಶುಭಚರಿತಂ ಸಜ್ಜನಾಧಾರನಿರ್ದ೦ |
ದ್ಯುನದೀ ಫೇನ ಪ್ರತಾನ ಪ್ರಥಿತ ಸೃಥುಯಶಂ ಭಾರತೀ ಕರ್ಣ ಪೂರ೦ ||೧೭೦ ||
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀ
ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
ರಾಮಚಂದ್ರ ಚರಿತ ಪುರಾಣದೊಳ್
ಶರದ್ವರ್ಣನಂ
--ಸಪ್ತಮಾಶ್ವಾಸಂ--