ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೮

ರಾಮಚಂದ್ರಚರಿತಪುರಾಣಂ

ಕಂ || ಓವದೆ ಕುಡುಮಿಂಚಿನ ಕೈ
ದೀವಿಗೆಗಳಿನಯಿಸಿ ಮನ್ಮಥಂ ಬಿರಯಿಗಳ೦ ||
ತೀವಿ ತೆಗೆನೆ ಆದ ಕೇದಗೆ
ಪೂವಿನ ಕೊನೆಗ ಜಯ ಸಲಗಿನಂಬಿನೊಳಿಸುವಂ || ೧೬೨ ||

ಒಲ್ಲದೆ ಬಿಸತಂತು ಜ್ಞಾ
ವಲ್ಲರಿಯಂ ಕುಸುಮಬಾಣಮಂ ಕರ್ವಿನ ಬ ||
ಲೈಲ್ಲಂ ಕಾಮಂ ಕಾಮನ
ಬಿಲ್ಗೊಳೆ ಬಿರಯಿಗಳನಟ್ಟ ಮೋದಿದನಾಗಳ್ || ೧೬೩ ||

ಅಂತತಿ ಪ್ರಬಲವಾದ ಘನಸಮಯಮತಿ ಕ್ರಮಿಸೆ ಮೊಲ್ಲೆಯ ಪ್ರಗುಡಿ ಪಲ್ಲಟ
ಸೆಯುಂ, ಗಿರಿಮಲ್ಲಿಗೆ ಬೀತು ಬಿನ್ನನಾಗೆಯುಂ, ಕಡವು ಮೊಗರಾಗಂಗಿಡೆಯುಂ,
ಚಾದಗೆ ನವೋದಕ ಕಣ ಭಕ್ಷಣ ವ್ರತಮನುಜ್ಞೆಸೆಯುಂ, ಸೋಗೆನವಿಲ ಪಿಂಡು
ತಾಂಡವಕ್ಕಲಸೆಯುಂ, ಹಂಸಮಂಡಲಿ ಮೃಣಾಳ ಕಾಂಡಮಂ ಸವಿದು ಸೊರ್ಕೆಯುಂ,
ಗಿರಿ ದರಿ ವನಕ್ಕೆ ನಿರ್ಝುರ ಜಲಾಭಿಷವಣಮನೊಡರ್ಚೆಯುಂ, ಪೊನ್ನೆ ಪೊಸನನೆಯ
ಪಸದನದಿನೆಸೆಯೆಯುಂ, ಪೊಂದಾವರೆಯನಂದ ಮಕರಂದವನಳಿಗೆ ಬಲಿಯ
ಟೈಯುಂ, ಅತಿ ಪ್ರಕಾಶನಾದ ಶರತ್ರವೇಶದೊಳ್-


ಕಂ ||ಸೆರೆಯಿಕ್ಕಿ ಪೋದುವಚಿರಾಂ
ಶು ರಸನ ಘನಕಾಲ ವಿಷಧರಂಗಳ ಗಗನೋ ||
ದರ ಗಹ್ವರದೊಳೆನಲ್ ತರ
ತರದಿಂ ಪಸರಿಸಿದುವಂದು ಬಿಳಿಯ ಮುಗಿಲ್ಲಳ್ || ೧೬೪ ||

ಇರುಳಿಂದುವಿನೊಡವೋಗದೆ
ಶರದದ ಬೆಲ್ಲಿಂಗಳಹಿಮಕರ ಕರ ತಪ್ತಂ ||
ತೆರಳಿ ಕೆನೆಗಟ್ಟಿದಂತಿರೆ
ಪೊರೆವೊರೆಗೊಂಡಿರೆ ಮುಗಿಲ್ ಗಿಲ್ಕುವು ನಭದೊಳ್ ||೧೬೫ ||


ಉ || ಓವದೆ ಮಾನ ಮೇಷ ವೃಷಭಾದಿಗಳಂ ಕ್ರಮದಿಂ ದಿನಾಧಿಪಂ |
ಸೇವಿಸಿ ಮತ್ತೆ ಕನ್ನೆಯೊಡಗೂಡಲೊಡಂ ಕಿಡೆ ತನ್ನ ತೇಜಮಿ ||
ನ್ಯಾವುದು ಕಷ್ಟವೆಂದು ತೊಲೆಯಂ ಜನರಂಜನೆಗೇ ತಿ ರಾಗಮಂ |
ಭೂವಲಯಕ್ಕೆ ಬೀಅದನದೇಂ ಪ್ರಭುಮಾಡಿದ ಮಾಯೆ ಸಲ್ಲದೇ || ೧೬೬ ||


1. ಗು೦ಯಸಿಯಲಗಂಬಿನೊ.ಚ. 2. ಗಳ೦ದಹಿಮಕರ ತಪ್ರ೦. ಕ. ಚ. 3. ತೇಜ. ಗ. ಘ '