ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಷ್ಟಮಾಶ್ವಾಸಂ

೨೦೧

ಅಂತನತಿದೂರದೊಳನತಿಶಯಮಪ್ಪ ದೊಂದು ಮಾಕಂದ ನಂದನದ ಪೊದ
ಅಳುಪೇಂದ್ರನಿರ್ಪುದುಮುತ್ತಲಾ ಪುರದಧಿಪತಿಯಪ್ಪ ಹೃದ್ರೀಧರಮಹಾರಾಜಂಗ
ಮಾತನ ಮಹಾದೇವಿಯಸ್ಸಿಂದ್ರಾಣಿಗಂ ಪುಟ್ಟಿದ ವನಮಾಲೆಯೆಂಬ ಬಾಲೆ-

ಶಾ || ಗಂಡರ್ ಚೆನ್ನಿಗರನ್ನರಿಲ್ಲ ಕಲಿಬಿಲ್ಲಾಳನನಿಲ್ಲೆಂದು ಮುಂ |
ಕಂಡರ್ ಬಣ್ಣಿಸೆ ಕೇಳು ಕೇಳು ಕಿವಿವೇಟಂ ಗೊಂಡು ಲಕ್ಷ್ಮೀಧರಂ ||
ಗಂಡಂ ಪೋ ಮೊಅಲೆಯಲ್ಲರನ್ಯರೆನಗೆಂಬೀ ಪೂಣ್ಯಂ ಕನ್ನೆ ಕೈ |
ಕೊಂಡಳ್ ಗಾಡಿಯನೆಮ್ಮೆ ನೋಡಿದವರಾರಾತಂಗೆ ಕಣೋಲದರ್ || ೫ ||

ಅಂತು ವನಮಾಲೆ ಬಗೆಯೊಳೊಡಂಬಟ್ಟಂತಾಕೆಯ ಮಾತಾಪಿತೃಗಳುಂ ಲಕ್ಷ್ಮಿ
ಣಂಗೆ ಕುಡುವವೆಂದು ನಿಶ್ಚಯಂಗೆಯ್ದು ದಶರಥಂ ತಪಂಬಟ್ಟು ದುಮಂ ರಾಮ
ಲಕ್ಷಣ‌ ಪಟವಟ್ಟು ದುಮಂ ಚರವಚನದಿನದಿಂದ್ರಪುರಮನಾಳ್ವ ಸುಂದರಕು
ಮಾರಂಗೆ ತನ್ನಂ ಕುಡಲೆಂದಿರ್ಪುದುಮದಂ ಕೇಳು ವನದೇವತೆಯನರ್ಚಿಸುವೆನೆಂಬ
ನೆವದಿನುಪವಾಸವಿರ್ದು ಕತಿಪಯ ಪರಿಜನಂ ಬೆರಸು ಮಹಾವಿಭೂತಿಯಿಂ ಬನ
ದೊಳಗೆ ಲಕ್ಷ್ಮಣನಿರ್ದ ದೆಸೆಗೆ ಪುಣ್ಯ ಪ್ರೇರಣೆಯಿಂ ಪೋಗಿ ವನದೇವತೆಯನರ್ಚಿಸಿ
ಜಾಗರಮಿರ್ದಲ್ಲರುಂ ನಿದ್ರಾವಶ ಗತರಾಗೆ ನಿರ್ವೇಗಪರೆ ಶಯಾತಲದಿನೆಟ್ಟು-

ಮ || ತನುಗಂಧಂ ಬನಮೆಲ್ಲಮಂ ಬಳಸೆ ನೇತ್ರ ಜ್ಯೋತೈಯುಂ ರತ್ನಮಂ |
ಡನ ಬಾಲಾತಪಮುಂ ತಮಕ್ಕೆ ತವಿಲಂ ತರ್ಪನ್ನ ಮೇರ್ಪಳಂ |
ವನಲಕ್ಷ್ಮಿವಧುವೋ ಸುರಪ್ರಮದೆಯೋ ವಿದ್ಯಾಧರಸ್ತ್ರೀಯೊ ಪೇ |
ಆತನುತುಂ ಕಣ್ಣೆಮೆಯಿಕ್ಕದೀಕ್ಷಿಸಿದನಾ ಸ್ತ್ರೀರತ್ನಮಂ ಲಕ್ಷ್ಮಣಂ || ೬ ||

ಅ೦ತು ನೀಡುಂ ಭಾವಿಸಿ ನೋಡಿ-

ಮ|| ಸ್ಟ್ರು|| ಬನವೆಲ್ ಬಾಲೆಯೆತ್ತಲ್ ನಡುವಿರುಳೊಡನಿಲ್ಲೋರ್ವರುಂ ಭೀತಿಗೆಟ್ಟಾ |
ವ ನಿಮಿತ್ತಂ ಬಂದಳೆಂಬೀ ತೆ ಅನನ ಅವೆನಾನೆಂದು ಲಕ್ಷ್ಮೀಧರಂ ಬೆ ||
ನನೆ ಪೋದಂ ಪೊಕ್ಕಳಾ ಕನ್ನೆಯುವವನಿ ತಲಾಲಿಂಗಿತಾನೇಕ ಶಾಖಾ |
ಜನಿತ ಧ್ಯಾಂತಾಂತರಾಲ ಪ್ರಬಲ ವಟಮನೇಗೆಯ್ಯದುದ್ವೇಗ ವೇಗಂ || ೭ ||

ಅಂತಾ ಮರದಡಿಯೊಳಾಕೆ ನಿಂದು ರಾಮಾನುಜನಪ್ಪ ಲಕ್ಷಣಕುಮಾರ
ನೆತ್ತಾನುಮಿಾ ಬನಕ್ಕೆ ವಿನೋದದಿಂ ಬಂದನಪ್ರೊಡೀ ನಟ ನಿವಾಸಿನಿಯರಪ್ಪ ದೇವತೆ
ಯರಾರಾನುಮುಳ್ಕೊಡೆ ಲಕ್ಷಣಕುಮಾರ! ವನಮಾಲೆ ನಿನಗಲ್ಲದೆ ವಧುವಾಗೆನೆಂದು
ನೇಲ್ಲು ಸತ್ತಳೆಂಬಿದ೦ ಮರೆಯದ ಪುವುದೆಂದು ಕರುಣವಾಗಿ ನುಡಿದು-


1. ಕಲಿಗಳ್ ಬಿಲ್ಲಾಳಳಿಲ್ಲೆಂದು. ಗ.