ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೩

ರಾಮಚಂದ್ರ ಚರಿತಪುರಾಣಂ

ಅನಂತರಂ ಬಂದು -
ಕಂ|| ಎಗದೆ ವಸ್ತಂಭದ
ತೆಆದಿಂದಿರೆ ಮುಳಿಸು ಕಣ್ಣ ಕಿಸುಸೆರೆಯಿಂ ಕ ||
ಣ್ಣೆ ಜತೆಯೆ ನಡೆ ನೋಡಿ ಬಂದುದ
ನಆಸೆನೆ ದುಂದುಭಿ' ಗಭೀರ ರನನಿಂತೆಂದಂ || ೨೫ ||

ಉ | ಎತ್ತಿ ಬರುತ್ತು ಮಿರ್ದ ನಿದಿರಾಂತವರಾರ್ ಭರತೇಶ್ವರಂಗೆ ಭೂ |
ಪೋತ್ತಮನಾಜ್ಞೆಯಂ ತಲೆಯೊಳಾಂತು ಪದಾನತನಾಗಿ ಕಪ್ಪಮಂ ||
ತೆತ್ತು ಗಂಡುಗೆಯ್ಯದಿಜವಿಟ್ಟಿಗೆ ಜಟ್ಟಿಗನಾಗಿ ಬಾಚ್ಚಿದ |
ತ್ಯುತ್ತಮ ಪಕ್ಷವಾಂತೊಡಪವರ್ತಿಸುಗುಂ ಕ್ಷಣದಿಂ ನಿಷೇಕಮಂ ||೨೬ ||

ಕಂ|| ಆಳಾಗಿ ಬರ್ದು೦ಕದೆ ಬಿ
ಬ್ಲಾಳಾಗಿ ಬರ್ದು೦ಕಲೊಡರಿಪೊಡೆ ಭರತನ ಕೂ ||
ರ್ವಾಳ ನಸುಮಸೆಗೆ ಬಾಲನ್ನು
ಣಾಳಂ ರಿಪುನೃಪರ ಕಂಠನಾಳಂ ಧುರದೊಳ್ || ೨೭ ||

ಎಂಬುದುಂ ಕಡುಮುಳಿದು-

ಕಂ || ಸಿಡಿಲ ದನಿಗೇಳ್ ಸಿ೦ಹಂ
ಸಿಡಿಲ್ಲು ನೆಗೆವಂತೆ ಗಜರಿ ಗರ್ಜಿಸಿ ಬಾಳ೦ ||
ಜಡಿದೆ ಪೊಯ್ಯ ಕೈಯಂ
ಪಿಡಿದಾತನ ಬೀರಸಿರಿಯುಮಂ ಕೈವಿಡಿದಂ || ೨೮ ||

ಶಾ || ಮುಂಗಯ್ಯಂ ಪಿಡಿದೊತ್ತಿ ಕೈಯ ಕರವಾಳ್ ಬೀರ್ಪಿನಂ ವಕ್ತರಂ |
ಧ್ರಂಗಳ್ ಕಾಣುವಿನಂ ಕದುಷ್ಣ ರುಧಿರಾಂಭಃಪೂರಮಂ ಪೊಯ್ದು ಪೊ ||
ಯಂಗಯ್ತಿಂ ಮೊಗಮಂ ಮುಸುಂಬು ಬಿಟುಬಿದ್ದಂಬೋಗೆ ವೀರಂಗೆ ದೋ |
ರ್ಭ೦ಗ೦ಮಾಡಿದನೇನಲಂಘ್ರಬಲನೋ ರಾಮಾನುಜಂ ಲಕ್ಷಣಂ || ೨೯ ||

ಅ೦ತು ಪರಿಭವಿಸಿ -
ಕಂ || ಭರತನೊಳಿದಿರ್ಚಿ ಕಾದುವ
ಭರವಶದಿಂ ಬ೦ದ ಕಲಿಗಳಿರ್ದೆಡೆಯಿಂ ಸಂ ||
ಚರಿಸಿದೊಡೆ ಮೆಟ್ಟಿ 'ಕೀತ್ವಂ
ಶಿರಮಂ ಕೀಲ್ವಂತೆ ವನ್ಯಗಜಮಂಬುಜಮಂ || ೩೦ ||


1. ಬೆಟ್ಟಗ, ಚ. 2. ಸೀಳ್ಳೆಂ . ಚ.