ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಷ್ಟಮಾಶ್ವಾಸಂ

೨೧೧

ಅಂತಲ್ಲಿ ಕತಿಪಯ ದಿನಮಿರ್ದಾ ಮೂವರುಂ ಪೂಾಭಿಮುಖದಿಂ ಪಯಣಂ
ಬೋಗಿ ವಂಶಸ್ಥಲಮೆಂಬ ಪೊಳಲನೆಯ್ಲಿ ತತ್ಸಮಾಸದ ವಂಶಸ್ಥಲ ಗಿರಿದರೀ ದೇಶಮಂ
ದಿವಸಾವಸಾನ ಸಮಯದೊಳೆಯ್ಲಿ ದೆಸೆಗೆಟ್ಟೋಡುವ ಪೌರಜನಮಂ ರಘುವೀರಂ
ಕಂಡಿದೇಕಾರಣಮೋಡಿದ ಪುದೆಂದು ಬೆಸಗೊಳ್ಳುದುಮಿಂದಿಂಗೆ ಮೂರುದಿನಂ ಮೊದ
ಲ್ಗೊ೦ಡು ರಾತ್ರಿ ಸಮಯದೊಳೀ ಶಿಖರಿ ಶಿಖರದೊಳತಿಭಯಂಕರಮು
ಮತ್ಯದ್ಭುತಮು ಮಾಗೆ ಹಲವು ಸಿಡಿಲ ದನಿಗಳೊಂದಾದಂತಶ್ರುತಮಪ್ಪದೊಂದು ರೌದ್ರ ಧ್ವನಿಯಂ
ಕೇಳಂಜಿ ಪೋಲೀಲೆಲ್ಲಂ ಯಥಾಯಥಮಾಗೋಡಿದಪ್ಪುದೆಂದು ಪೇಳ್ವುದುಮಾ ಧ್ವನಿ
ಗೆಯೂ ರಾರೆಂಬುದನಾರಯ್ಯ ಮೆಂದಾನಗಮನೇ ಆ ನೋಟ್ಯಾಗಳಲ್ಲಿ ಚತುರ್ಮುಖ
ಪ್ರತಿಮಾ ಯೋಗದೊಳ್ ನಿಂದು ಶುಭಧ್ಯಾನಮನಸ್ಸು ಕೆಯ್ಯು ಮಹರ್ಷಿಯರಂ
ಕಂಡೆಯೇ ವರ್ಪುದುಮವರಂ ಸುತ್ತಿ ಸುಯ್ಯುತ್ತಿರ್ದ ವಿಷಮ ವಿಷೋರಗ೦ಗಳು
ಮಾಪಾದಮಸ್ತಕಂಬರಮೆಡೆವಜಯದೆ ಮುಸುರಿ ಮುರ್ದ ವಿಷಮವೃಶ್ಚಿಕಂಗಳುಂ
ರಾಮಲಕ್ಷ್ಮಣರ ಪುಣ್ಯ ಪ್ರಭಾವದಿನದೃಶ್ಯವಪ್ಪುದುಮಾ ಪಕ್ವತದ ಸುಗಂಧ ಕುಸು
ಮ೦ಗಳಿ೦ದಮವರನರ್ಚಿಸುತ್ತು ಮಿರೆ ನೇಸರ್ಪಡುವುದುಮತಿ ರೌದ್ರಮಪ್ಪ ಭೂತ
ಬೇತಾಳ ಸಮೂಹಮುಮನತಿಭಯಂಕರಮಾಗೆ ಗಜ ಗರ್ಜಿಸುವ ಸಿಂಹ ಶರಭ
ಶಾರ್ದೂಲಂಗಳುಮನತ್ಯದ್ಭುತಮುಮಗುರ್ವುಮಾಗೆ ಮಿಂಚುಂ ಮೋಳಿಗುಂ ಬೆರಸು
ಸುರಿವ ಬಿಸುನೆತ್ತರ ಮಳಿಯುಮಂ ವಿಗುರ್ವಿಸೆ__

ಕಂ || ಪರಮ ಜಿನಮುನಿಗೆ ಯೋಗಾಂ
ತರಾಯಮಮರೋಪಸರ್ಗದಿಂದಕ್ಕುಮೆ ನಿ ||
 ಷ್ಟುರ ಮಾರುತ ಹತಿಯಿಂದಂ
ತರು ಸಂಚಲಿನಂತೆ ಮೇರು ಸಂಚಲಿಸುಗುಮೇ|| ೪೭ ||

ಅಂತಾ ಮುನಿಗೆ ಮಹೋಪಸರ್ಗಮಂ ಮಾ ದೇವನ ಮಹಾರೌದ್ರಾನು
ಭಾವಮಂ ಕಿಡಿಸಲೆಂದು ತಮ್ಮ ದೇವತಾಧಿಷ್ಠಿತ ಧನುರ್ಯುಗಳಮನೇಲಿಸಿ__

ಚ || ಕೆಡೆದುದೊ ಮಂದರಂ ಧರೆಗೆ ಬಿಟ್ಟು ದೊ ಭಾನುರಥಂ ನಭಸ್ಸಲಂ |
ಸಿಡಿಸಿದುದೋ ಧರಿತ್ರಿ ಮೊಲಗಿತ್ತೊ ಮಹಾಪ್ರಲಯಾನಲಾರ್ಚಿಯಿಂ ||
 ದೊಡೆದುದೊ ವಜ್ರ ವೇದಿಕೆಯೆನಲ್ ನಭಮಂ ಪುದಿದತ್ತು ನೀವಿ ಜೇ |
ವೊಡೆಯೆ ಬಲಾಚ್ಯುತರ್ ತ್ರಿಭುವನೈಕಭಯಂ ಕೃತ ಚಾಪ ಟಂಕೃತಂ || ೪೮ ||

ಆರೌದ್ರಧ್ವನಿ ಕರ್ಣಲಗ್ನಮಾಗೆ ಭಾಶಯನಗ್ನಿ ಪ್ರಭಂ ಹತಪ್ರಭನಾಗಿ
ವಿಭಂಗ ಜ್ಞಾನದಿನಿವರೆಂಟನೆಯ ಬಲದೇವ ವಾಸುದೇವರೆಂದದು ನಿಜ ಜ್ಯೋತಿ
ರ್ಲೋಕಮನೋಡಿ ಪೊಕ್ಕನಿತ್ತಲ್