ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ಕಂ| ಶ್ರೀ ಪದವನೀವ ಮುನಿಸ ಶ್ರೀ ಪದಮಂ ಪರಮಭಕ್ತಿಯಿಂದರ್ಚಿಸಿ ಪು || ಜ್ಯೋಪಾರ್ಜನಮಂ ತಳೆದನಿ ೪ಾಪೂಜಿತ ಚಾರು ಚರಿತನಭಿನವಪಂಪಂ || ೧ || ಅಂತರ್ಚಿಸಿ ವಿಧಿಪೂರ್ವಕಂ ನಿರವದ್ಯಾಹಾರಮಂ ಕುಡುವುದುಮವರ್‌ ಸಂಯಮ ಸಂರಕ್ಷಣಾರ್ಥಮಪ್ಪ ಕಾಯಸ್ಥಿತಿಯಂ ನಿರ್ವತಿ್ರಸಿ ಕೈಯೆತ್ತಿಕೊಂ 'ಡಕ್ಷಯಂ ದಾನವೆಂಬುದುಂ ಕಂ || ಏನೆಸೆದುದೊ ರೈ ವೃಷ್ಟಿ ಹಿ ಮಾನಿನಲ್ಲಿ ಮಿಲಿತ ಕುಸುಮವರ್ಷ೦ ಸುರ ಭೇ || ರೀನಿನದಂ ದಿವಿಜರಹೋ ದಾನಶ್ರುತಿ ನೆಗಳೆ ನೆಗಟ್ಟಿ ಪಂಚಾಶ್ಚರಂ || ೨ || ಆಗಳವರ ತಪಸ್ವಾಮರ್ಥ್ಯಕ್ಕೆ ರಾಮಾದಿಗಳ್ ರೋಮಾಂಚ ಕಂಚುಕಿತ ದೇಹರಾಗಿ ಧರ್ಮಕಥಾ ಶ್ರವಣ ಪ್ರಸಂಗದೊಳಿರ್ಪುದುಮವರಿದಿರೊಳಿರ್ದ ವಿಶಾಲ ಸಾಲದ್ರುಮ ಶಾಖಾರೂಢನಾಗಿರ್ದು ಉ | ಪೋದ ಭವ ಪ್ರಪಂಚದ ಅತಂ ಮುನಿ ದರ್ಶನಮಾತ್ರದಿಂ ಮನ | ಕಾದೊಡೆ ಪಾಪ ಸಂಚಯಮನಿನ್ನ ಪವರ್ತಿಸೆನೆಂದು ಬಂದು ಪಾ || ದೋದಕದೊಳ್ ಪೊರಳು ಕನಕಪ್ಪ ಬೆವೆತ್ತು ಪದೋಷಕಂಠ ಲ | ಗೋದರ ಮಸ್ತಕಂ ವಿನತಮಿರ್ದುದು ಪರ್ದುಪಶಾಂತ ಚೇತಸಂ || ೩ || ಆಗಳದಂ ಕಂಡು ರಾಘವಂ ಅವರ ತಪಸ್ಸನ್ನದಿ ಯಂ ಸೀತಗಂ ಸೌಮಿತ್ರಿಗ ನಭಿವರ್ಣಿಸಿ ಮುನಿಗೆ ಮುಗಿದ ಕೈವೆರಸು ಹಿತಾಹಿತ ವಿವೇಕ ವಿಕಲಮುಂ ವಿಜಾತಿಯುಮಪ್ಪ ವಿಹಂಗಮುಪಶಮಕ್ಕೆ ಬಂದ ಕಾರಣವೇನೆಂಬುದುಂ, ಚಾರಣ ಋಷಿಯರಿಂತೆಂದು ಬೆಸಸಿದರೀ ಮಹಾಗಹನಂ ಮುನ್ನಂ ಕರ್ಣಕುಂಡಲ ಪ್ರಮುಖ ನಿಖಿಲಗ್ರಾಮಾಕೀರ್ಣವದನಾಂ ದಂಡ ಕನೆಂಬರಸನಾತನ ಹೆಂಡತಿ ದುರ್ಮನಕ್ಕೆ ಮಸ್ಕರಿ ಸಮಯಮಂ ಪಿಡಿದಿರ್ಪಳಾದಂಡಕನು ಮೊರ್ಮೆ ಪುರಬಹಿಃಪುರದೊಳ್ 1. ಪಂಚ ಮುಷ್ಟಿ ಯಿ೦ ವಂದಿಸಿ, ಕ. ಚ. 2: ಡಕ್ಷಯ ದಾನಮಸ್ತೆ೦ಬುದುಂ. ಗ, ಪ.