ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮ ರಾಮಚಂದ್ರಚರಿತ ಪುರಾಣಂ ತದನಂತರಂ ವಂಶಸ್ಥಲಪುರಮನಾಳ್ವ ಸುಪ್ರಭನರೇಂದ್ರಂ ಬಂದು ರಾಮ ಲಕ್ಷಣರಂ ಪೂಜಿಸಿ ವಂಶಸ್ಥಲ ನಗೋಪರಿಮ ತಲದೊಳ್ ವಿಚಿತ್ರ ಚೈತ್ಯ ಭವನಂ ಗಳಿ೦ ಬಹು ಪ್ರಾಕಾರ ಪ್ರಾಸಾದ ಪಜ ಗಳಿನೇಕಾ೦ತ ಕಮನೀಯಮಪ್ಪಂತು ಪೋಲಂ ಮಾಡಿಸಿ ರಾಮಲಕ್ಷ್ಮಣರನಾ ಪೊಳಲೊಳಿರಿಸಿ ಬೆಸಕೆಯ್ಯುತ್ತಿರೆ ವಂಶ ಸ್ಥಲ ಗಿರಿಗೆ ರಾಮಗಿರಿಯೆಂಬ ಹೆಸರಾಯ್ತು ; ಮತ್ತಮವರಲ್ಲಿಂ ತಳರ್ದು ತೆಂಕ ಮೊಗದೆ ನಿಚ್ಚ ವಯಣ೦ಗಳಿ೦ ಬ೦ದು ಪೆರ್ವುವಂ ಪೊಕ್ಕು ಕರ್ಣರವೆಯೆಂಬ ತೊರೆಯಂ ಪಾಯ್ಸ ದ ತೆಂಕಣತಡಿಯೊಳೊಂದು ರಮ್ಯ ಪ್ರದೇಶದೊಳ್ ವಿಶ್ರಮಿ ಸಿರ್ಪುದುಮಲ್ಲಿಗೆ ಸುಗುಸ್ತಿ ಗುಪ್ತರೆಂಬ ಗಗನ ಚಾರಣ ಯುಗಲಂ ಗಗನ ತಲದಿ ನವನಿತಲಕ್ಕವತರಿಸಿ ಮಾಸೋಪವಾಸದ ಪಾರಣೆಯೋಳ್ ಕಾಂತಾರ ಚರೆಗೆಬರ್ಪುದು ಮನರಂ ದೂರದೊಳ್ ಕಂಡು ಮಸ್ತ ದೆಸೆಯಂ ಭೂಷಾಂಶುಗಳ ಚಿತ್ರಿಸೆ ಪದತಲಮಾತ್ಮೀಯ ಶೋಣಾಂಶುವಿಂದ | ರ್ಚಿಸೆ ಧಾತ್ರೀ ದೇವಿಯಂ ಸಂಭ್ರಮ ರಸವಶನೇಂದು ಸದ್ಭಕ್ತಿಯಿಂ ನಂ || ದಿಸಿ ರಾಗೋತ್ಕಂಠನುಚ್ಚಾಸನದೊಳಿರಿಸಿ ದಿವ್ಯಾ ರ್ಚನಾ ದ್ರವ್ಯದಿಂದ | ರ್ಚಿಸಿದಂ ಸಾಹಿತ್ಯ ವಿದ್ಯಾಧರನಮಲಯಶಂ ಭಾರತೀ ಕರ್ಣಪೂರಂ || ೬೮ || ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖ ಕಿರಣ ಚಂದ್ರಿಕಾ ಚಕೋರ ಭಾರತಿ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ಚಾರಣ ಯುಗಲ ದರ್ಶನವನ್ದನಂ ಅಷ್ಟಮಾಶ್ವಾಸಂ