ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟ ಮಾಶ್ವಾಸಂ ೨೧೭ ಮತ್ತಂ ತಾಪಸ ರೂಪಂ ಕಳೆದು ಕಾಯ ಕೇಶದ ಫಲದಿಂ ಜ್ಯೋತಿರ್ಲೋಕ ದೊಳಗ್ನಿಪ್ರಭನೆಂಬ ದೇವನಾದನಿತ್ತಲನಂತವೀರ ಕೇವಲಿಗಳ ಪೂಜೆಗೆ ಬಂದ ದೇವ ಸಭೆಯೊಳೊರ್ವ ದೇವಂ ಮುನಿಸುವ್ರತ ತೀರ್ಥಕರ ಭಟ್ಟಾರಕರ ತೀರ್ಥ ಸಂತಾನ ದೊಳ್ ನಿಮ್ಮಂತೆ ಕೇವಲಿಗಳಾಗಿ ಧರೋಪದೇಶಂಗೆಯ್ದರಾರೆಂದು ಬೆಸಗೊಳ್ವುದುಂ ಕಂ || ಜಲಜಲಿಸೆ ದಶನ ಕಿರಣಾ ವಲಿ ಮೃದು ಮಧುರ ಪ್ರಣಾದದಿಂ ಕೇವಲಿ ಕೇ || ವಲಲಬ್ಲಿ ದೇಶಭೂಷಣ ಕುಲಭೂಷಣ ದಿವ್ಯಮುನಿ ಯುಗಕ್ಕಕ್ಕು ಮೆನಲ್ || ೬೪ !! ಅದನಾ ಸಭೆಯೊಳಿರ್ದಗ್ನಿ ಪ್ರಭದೇವಂ ಕೇಳೆ ಮೊಳಾದ ಜನ್ಮಾಂತರ ವೈರಮಂ ವಿಭಂಗಜ್ಞಾನದಿಂದಅದೀಗಳೆಮಗೆ ಯೋಗ ವಿಘ್ನದ್ರೋಗದೊಳಿರ್ದು ನೀ೦ ಪುಣ್ಯ ಪುರುಷನುಂ ಚರಮದೇಹಧಾರಿಯುಮಪ್ಪುದರಿಂದೀತಂ ನಿನ್ನ ಮುಳಿಸಿಂಗೆ ಭೀತ ನಾಗಿ ಮುನ್ನಿನ ತನ್ನ ಮುಳಿಸನು ದುಪಶಾಂತ ಸ್ವಾಂತನೀ ಸಭೆಗೆ ಬಂದಿರ್ದ ನೆಂದು ರಾಘವಂಗೆ ಬೆಸಸುವುದುಮದೆಲ್ಲಮಂ ಗರುಡಾಧಿಪಂ ಕೇಳು ಸಂತೋಷ ದಂತಮನೆಉ || ಮನಯೋಪಸರ್ಗಮನದಿರ್ಸಿದ ನಿನ್ನ ಗುಣಪ್ರತಿಷ್ಟೆ ಲೋ | ಕೋತ್ತರವಾಯ್ತು ನಿನ್ನ ಸಮಯ ಪ್ರತಿಪಾಲನ ಶೀಲ ಶಕ್ತಿ ಸಂ || ಪತ್ತಿಗೆ ಮೆಚ್ಚಿದೆಂ ನೆನೆವುದುಂ ನೆನೆದಾಗಳೆ ಬರ್ಪೆನೆಂದು ಮೆ ! ಚೈತನಿದೇವಮಾನುಷ ರಾಘವ ಸಂಚಿತ ಪುಣ್ಯ ಸಂಚಯ ಮ|| ಪ್ರ|ನರನಾಥಂಗಿತ್ತು ತನ್ನಂ ನೆನೆದ ಸಮಯದೊಳ್ ಬರ್ಪೆನಾನೆಂದು ಮೆಚ್ಚಂ। ಚರಿತಾರ್ಥ೦ ಭಕ್ತಿ ಭಾರಾನತ ಮಣಿಮುಕುಟಂ ಹರ್ಷ ಬಾಷ್ಪಾಂಬುವರ್ಷ೦ || ಗರುಡಂ ಬೀ ಆ೦ಡು ತತ್ತೆವಲಿಯ ಪದಪಯೋಜಂಗಳಂ ತನ್ನ ತೊಟ್ಟಾ! ಭರಣ 'ಪ್ರದ್ಯೋತಿಯಿಂದಸ್ಕಲಿತಮೆನೆ ನಭಂ ತನ್ನ ಲೋಕಕ್ಕೆ ಪೋದಂ|| ೬೬ || ಕಂ|| ಭೂವಂದ್ಯ ದೇಶ ಭೂಷಣ ಕೇವಲಿಗಳ ಸಮವಸ್ಕೃತಿ ವಿಹಾರಿಸಿದುದು ಭ || ವ್ಯಾವಲಿಗಳನಾರಾಖಂ ಡಾವನಿಯೊಳ್ ತಣಿಸಲೆಂದು ಧರ್ಮಾಮೃತದಿಂ 11 ೬೭ || 1, ಊರ್ವ೦ದೇವ ಮುನಿ ಸುವ್ರತಮುನಿ ಭಟ್ಟಾರಕರ, ಗ. 2. ಪ್ರದ್ಯೋತಿ ವಂಶಸ್ಥಳಿತಮನ ನಭಚರ೦. ಚ.