ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ರಾಮಚಂದ್ರಚರಿತಪುರಾಣಂ ಕಂ || ಸ್ಮರ ರಾಗಂ ಮನದೊಳ್ ಬೇ ಊರಿವಿನೆಗಂ ಬ್ರಹ್ಮಚಯ್ಯ ನಿಷ್ಟಾಗರಿಮಂ || ಕರಗುವಿನಮೆಳಸೆ ಕಣ್ಣ ೪ ವರಾಕ ಭಿಕ್ಷಾಕನಾಕೆಗಂದಿಂತೆಂದಂ || ೬೧ || ನೀನೀ ಸಂಜೆಯೊಳಂಜದ ನೆರವಿಲ್ಲದೆ ಬಂದ ಬರವಾವುದೆಂಬುದುಮಮ್ಮಬ್ಬೆ ನೆವಮಿಲ್ಲದೆನಗೆ ಮುನಿದು ಜಡಿದು ನುಡಿಯೆ ಬಂದು ನಿಮ್ಮ ಕಂಡು ಸಂತೋಷ ದಂತನೆಯ್ದೆ ದೆನೆನಗೆ ನಿಮ್ಮ ದೀಕ್ಷೆಯಂ ಕುಡುವುದೆನೆ ದಿಟವೆಂದು ಬಗೆದಿದಾವ ಗಹನಮಾಗಳೆ ಕೈಕೊಳ್ಳೆ೦ಬುದುಮಾಕೆ ನಾಂ ಕುಡಗೂಸಪ್ಪನದು ಕಾರಣದಿನೆಮ್ಮ ತಾಯ್ತಲ್ಲಿಗೆ ಪೋಗಿ ಬೇಡಿಮನೆ ಪೆತ್ತ ಮಗಳನೆಮಗೆ ಕುಡಲಾಯರೆಂಬುದುಮಾನರಸಿ ನಡಪಿದ ಕುಡಗೂಸೆನೆನ್ನಂ ಕುಡುವರೆಂಬುದುಂ ತಾಪಸಂ 1 ಮದನ ಸಂತಾಪನ ಶರಪಾತಕ್ಕೆ ಸುಗಿದು ಕೈವಿಡಿಯ ಲಡಹಡಿಸುವುದುಂ ನೀಮೇಕೆ ತುರಿಪಂಗೆಯ್ದಿರೆ kರಸಿಯಂ ಪ್ರಾರ್ಥಿಸಿ ಪೊಡೆವಟ್ಟು ಬೇಡಿಕೊಂಡು ವಿಧಿಪೂರ್ವಕಂ ಮದುವೆನಿಲ್ಲು ದೆಂದೊಡಂಬಡೆ ನುಡಿದೊಡಗೊಂಡು ಪೋಪುದುಂ ಕಂ | ಕನ್ನೆಯ ಬಲಸಂದಿನನೆಂ ಬನ್ನಂ ಮನಸಿಜನ ಪೂವಿನ೦ಬಿನ ಮಳೆಯೊಳ್ || ಕನ್ನೆಯ ಬಲಿ ಸಂದಂ ಮುನಿ ತನ್ನ ತಪಸ್ಸೇಜದೆಸಕಮೊಳಸೋರ್ವಿನೆಗಂ || ೨ || ಅಂತು ರಾತ್ರಿ ಸಮಯದೊಳ್ ರಾಜ ಪುತ್ರಿಯ ಬಳಿವಿಡಿದು ಬಂದು ರಾಜ ಸದನಮಂ ಪೊಕ್ಕು ಮದನವೇಗೆಗೆ ಕೈಗಳಂ ಮುಗಿದು ನಿಮ್ಮ ನಡಪಿದ ಮಗಳಪ್ಪ ನಾಗದತ್ತೆಯನೆಮಗಿತ್ತು ಕನ್ಯಾದಾನ ಫಲಮಂ ಪಡೆವುದೆಂದು ಸರ್ವಾಂಗ ಪ್ರಣತ ನಾಗಿರ್ಪುದುಮಾ ಸಮಯದೊಳರಸನರಸಿಯಲ್ಲಿಗೆ ಬಂದು ಗೊರವನಿರವ ಕಂಡು ಕಡುಮುಳಿದು ಪಲತೆಆದಿಂ ಪರಿಭವಿಸೆ ಪೊಆಮಡಿಸಿ ಕಳೆಯೆ ಕಂ || ಪರಿಭವಮಂ ಪೊರ್ದಿದ ದು ಹೃರಿಣತಿಯಿಂ ಕಟಿಪಿ ಕಾಲಮಂ ದುರ್ಗತಿಯೊಳ್ || ತಿರಿತಂದು ಮನುಜ ಗತಿಯೊಳ್ ದುರಂತ ದುಷ್ಕರ್ಮ ಫಲಮನನುಭವಿಸುತ್ತು | ೩ | 1. ಮದನ ಸಂತಾಪನ ಸಮ್ಮೋಹನ ಶರ ತಾಪಕ್ಕ, ಫ. 2. ಲಡಹರಿ, ಚ.