ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩ ನವಮಾಶ್ವಾಸಂ ಳೊಂದು ಯೋಜನದೆಂಟನೆಯ ಭಾಗಂ ಖಾತವಾದಲ್ಲಿ ಪಾತಾಳಲಂಕೆಯೆಂಬ ಪುರ ಮಿರ್ಪುಡದನಾಳ್ವಂ ಖರನೆಂಬನಾತನರಸಿ ರಾವಣನ ತಂಗೆ ಚಂದ್ರನಖಿಯೆಂಬಳವರ್ಗೆ ಶಂಭುಕನುಂ ಸುಂದರನುಮೆಂಬರಿರ್ವರ್ ತನಯರಾದರಲ್ಲಿ ಸಿರಿಯಮಗಂ ಶಂಭುಕಂ ಪೆನಿಗೆ ಹನ್ನೆರಡು ವರ್ಷ ಮೊದಲ್ಗೊಂಡು ಸೂರ ಹಾಸಾಸಿಯಂ ಸಾಧಿಸುತ್ತಿರ್ಪುದು ಮಾತಂಗಾಬಾಳನಿತ್ತು ಬೆಸಕೆಯ್ಯಲೆಂದು ಬಂದ ಯಕಾಮರ ಸಹಸ್ರಮಾ ಖಡ್ಡರತ್ನ ಮನವನಿರ್ದ ಬಿದಿರ ಪೊದ ಮೊದಲೊಳಿರಿಸಿ 'ಮೇರು ಮಂದಾರ ಸುಮನೋ ಮಂಜರಿಯಿನರ್ಚಿಸುತಿರ್ಪುದುಮಿತ್ತ ಲಕ್ಷಣಂ ವನ ವಿಲಾಸ ನಿರೀಕ್ಷಣ ಕುತೂಹಲ ನಾಗಿ ಕಂ|| ಸುವೆಡೆಗೆ ಖಡ್ಗ ಸಿದ್ದಿಗೆ ಬಲಿಯಟ್ಟಿದ ಪುಣ್ಯ ದೇವತಾ ದೂತನವೋಲ್ || ಸುಳಿಗಾಳಿಯೊಡನೆ ಹರ್ಷದ ಮಅತಿ ಬರೆ ಬಂದದೊಂದು ದಿವ್ಯಾಮೋದಂ || ೧೭ ಇದು ಮನುಜ ಲೋಕ ವನ ಕುಸು ನದ ಸೌರಭಮಲ್ಕು ದಿವಿಜ ಲೋಕದ ಮಂದಾ || ರದ ಕುಸುಮ ಸೌರಭ ಬಂ ದುದೆತ್ತಣಿಂದೆಂದು ಲಕ್ಷ ಣಂ ಬಲಸಂದ೦ || || ೧೮ || ತನಿಗಂಪಿನ ಬಟವಟಿಯಿಂ ಜನಾರ್ದನಂ ಭ್ರಂಗದಂತೆ ಸುಮನೋರಾಗಂ || ಜನಿಯಿಸೆ ತಮಾಲ ಪಲ್ಲವ ತನುರುಚಿ ಸೆರ್ವಿದಿರ ಪೊದಅನಂತಂದಂ || ೧೯ || ಸ್ಥಲ ರಕ್ತ ಕಮಲಮಂ ಕೋ ಮಲ ಪದ ತಳಪದ್ಮರಾಗರುಚಿಯಿ೦ ವಂಶ | ಸ್ಥಲಮಂ ತನುಪ್ರಭಾಮಂ ಡಲದಿಂದೆಂಟನೆಯ ಕೇಶವಂ ದ್ವಿಗುಣಿಸಿದಂ 1೨೦ || ಅಂತು ಬಂದು ಬಿದಿರ ಪೊದ ಮೊದಲೊಳಮರ ತರು ಸುಮನೋಮಾಲೆ ಯೊಳಮನರ್ಘ ರತ್ನಮಾಲೆಯೊಳಮರ್ಚಿಸಿರ್ದ ಸೂರ ಹಾಸಾಸಿಗೆ ಕೈಯಂ ನೀಡು ವುದುಂ 1, ನಮರು , ಕ, ಖ, ಘ.