ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ

೯೪೪


ಶಾ | ಆರೇಸಾಡಿದರಾವ ದಿಣ್ಣುಖದಿನೀ ಕೂರಂಬುಗಳ್ ಬಂದುವೆಂ |
ದಾರುಂ ಕಾಣ್ಣವರಿಲ್ಲ ನಟ್ಟುದನೆ ಕಾರ್ ಮಾಯದಂ-ಬಲ್ಲದಂ |
ದಾರಾನುಂ ಪೊಅಗಾಗಲೇ ಕಣೆಯ ಕೊಳ್ಳೆಂಬಂತು ತನ್ನಂಬು ಸಂ |
ಹಾರಂವಾಡೆ ವಿಪಕ್ಷ ಸೈನಿಕಮನಂಭೋಜಾಕ್ಷನೇಸಾಡಿದಂ|೬೮|

|ಮ| ಮೊನೆಯಂಬವು ನಂಜಿನಂಬುಗಳೆನಲ್ 'ಕೂರಂಬು ಮಾಯಾಂತರಂ |
ಮನದಿಂ ಬೇಗದಿನುರ್ಚಿ ಪೋಗೆ ಸೆಣನಂ ಸಾಲಿಟ್ಟ ವೋಲಾಗೆ ಮೇ ||
ದಿನಿಯೊಳ್ ಖೇಚರ ಸೇನೆ ಬೀತಿ ಬಯಲಾದತ್ತಾಗಸಂ ಕೃಷ್ಣನಂ |
ಬಿನ ಕೃಷ್ಟಾಹಿಯ ಕೊಳ್ಳೆ ಬೆರ್ಚದಿದಿರೊಳ್ ಮೆಯಾರ್ಚಿ ಬಾಲ್ವಿನ್ನರಾರ್ |

| ಕಂ | ಸಿಡಿಲ ಕಡುಗಾಯ್ತು ಸಿಂಗದ
ಪೊಡರ್ಪು ಭೈರವನ ಬಲು ಮಾರಿಯ ಮಸಕಂ ||
ಕಡೆಗಾಲದ ಜವನೆತ್ತಿರ
ಮೊಡರಿಸೆ ಲಕ್ಷ್ಮಣನಡುರ್ತು ಕಾದುತ್ತಿರ್ದ೦|೭೦|

ಅನ್ನೆಗಮರಾವಣಂ ಖರದೂಷಣರಟ್ಟಿದ ಸುದ್ದಿಯಂ ಕೇಳು ಶಂಭು ಕನ ಸಾವಿ೦ಗಲಿಲ್ಲು ಕಡು ಮುಳಿದು_

ಚ | ಬೆದರಿಸಿದತ್ತು ಕಾರಿರುಳನುರ್ವಿದ ಪುರ್ವಿನ ಗಂಟಿನೊಳ್ ಕರಂ|
ಗಿದ ಮೊಗವಂಜಿಸಿತ್ತು ಕಿಸುಸಂಜೆಯನಾಸುರನಾಗೆ ಕೆ೦ಪುವೇ |
ಅದ ಬಿಡುಗಣ್ಣ ಬಣ್ಣವಯಟ್ಟಿದುದಲ್ಕು ಜತೆ ಕಣ್ಳುಳ್ಳುವು !
ಛದ ತೆಆನಂ ಸಕಂಸವಧರಂ ದಶಕಂಧರ ಚಕ್ರವರ್ತಿಯಾ|೭೧|

ಅಂತು ಸಂವರ್ತ ಸಮಯದ ಸಮುದ್ರದಂತೆ ಕದಡಿ_

ಚ | ನಿಯಮದಿನಿರ್ದನಂ ನಿರಪರಾಧನನನ್ನೆ ಯದಿ೦ದಮೆನ್ನ ತಂ |
ಗೆಯ ಮಗನಂ ವಿದಾರಿಸಿದನಂ ತದಾತನ ಮೆಯ್ಯ ರಕ್ತ ವಾ |
ರಿಯನೆಅಲೆದಾಅಪೆಂ ಖರನ ಶೋಕ ಕೃಶಾನುವನೆಂದು ಕಾಯ್ದು ದು |
ರ್ಜಯನಸುರಾಧಿಸಂ ಜಡಿದನಾಸುರಮಂ ನಿಜ ಚಂದ್ರಹಾಸಮಂ |೭೨|

ಚ ॥ ಒದವಿದ ಕೋಪ ವಕ್ಕಿಯುರಿಯುಂ ಪೊಗೆಯುಂ ನೆಗೆವಂತೆ ಪದ್ಮರಾ |
ಗದ ಹರಿನೀಲದುನ್ಮುಖ ವಿಭೂಷಣ ರಶ್ಮಿ ಪಗಂಡುಗೊಳ್ಳಿನಂ |
ಕದನ ಮದೋದ್ದ ತಂ ಖಚರನಾಯಕರಂ ಬರವೇಯ್ದು ಸಿಂಹ ಪೀ |
ಠದಿನಿರದೆಟ್ಟಿನಸ್ತಮಿತ ಪುಣ್ಯ ದಶಾನನನಾ ದಶಾನನಂ|೭೬|

1: ತೂ೦ಬು , ಗ, ಚ, 11 ೭೩ ||