ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ರಾಮಚಂದ್ರಚರಿತಪುರಾಣಂ 4 ಚ ॥ ನಡೆ ನಡುಗೋಲ್ವರಂ ದಶಮುಖಂ ಮನಮಂ ಸುಮನಶೈಲೀಮುಖಂ | ನಡೆಗಿಡೆ ಕೀರ್ತಿ ಬಾರ್ತೆಗಿಡೆ ಲಕ್ಷ್ಮಿ ಮೊದಡೆ ಮಾನಸಿಕೆ ನೇ || ರ್ಪಡುಗಡೆ ಸತ್ಯ ಶೌಚ ಗುಣ ಸಂಪದವೇಳಿದನಾದನೆನ್ನರುಂ | ಕಿಡಿಮಸಿಯಾದವೋಲ್ ವಿಷಯ ಲೋಭದಿನೇಳಿದರಾಗದಿರ್ಪರೇ | ೮೫ || ಮ | ವಿಹಿತಾಚಾರಮನಸ್ವಿಯಾಗತ ಗುಣ ಪ್ರಖ್ಯಾತಿಯ ದುಷ್ಟ ನಿ | ಗ್ರಹ ಶಿಷ್ಟ ಪ್ರತಿ ಪಾಲನ ಕ್ಷಮತೆಯಂ ಕೈ ಗಾಯದನ್ಯಾಂಗನಾ || (ಹೆಯಂ ತಾಳಿ ದನಕ್ಕೆ ಕಾಲವಶದಿಂ ಲಂಕೇಶ್ವರಂ ವಿಸ್ಮಯಾ | ವಹನ ಬೈಯುಮೊ ರ್ಮೆ ಕಾಲವಶದಿಂ ಮಯ್ಯಾದೆಯಂ ದಾ೦ಟದೇ || ೮೬ || ಅಂತು ಮನವೆಳದುವರಿಯೆಕಂ|| ಮದ ಕರಿಯ ದಾನ ಲೇಖೆಗೆ ಪದೆವ ಮಧುವ್ರತದ ಮಾಪಿಳ್ಳೆಯಿಂ ದಶವದನಂ || ಪದೆದ ರಘುವೀರನ ಪಾ ರ್ಶ್ವದ ಸುದತಿಗೆ ವಿಷಯಿ ತನ್ನ ಕೇಡಂ ನೋಡಂ || || ೮೭ 11 ಅವಿವೇಕಿ ದಶಮುಖಂ ದೃ ಷ್ಟಿ ವಿಷಾಹಿಯ ಸೆಡೆಯ ಮಣಿಶಲಾಕೆಗೆ ಕೈ ನೀ || ಡುವ ಗಾಂಪನಂತೆ ರಘುವೀ ರ ವಧೂ ಜನಕಜೆಗೆ ಮನದೋಳ ಲಿಪ೦ ತ೦ದ೦ || ೮೮ || ಚ ॥ ಪರವಧು ಗಾಸೆಗೆಯ್ಯಧಿಕ ಪಾತಕವೊಂದು ರಘುಪ್ರವೀರನೊಳ್ | ಧುರದೊಳಿದಿರ್ಚದೋಸರಿಸಿ ವಂಚಿಸಿ ಸೀತೆಯನುಯ್ದ ಭೀತಿಯೊಂ || ದೆರಡಆಳಂ ಜಸಂ ಮಸುಳೆ ತನ್ನವಲೋಕಿನಿಯಂ ದಶಾನನಂ | ಸ್ಮರಿಸಿದನಾತ್ಮಸತ್ವ ಗುಣ ಹಾನಿಯೆ ಸೂಚಿಸದೇ ವಿನಾಶನಂ || ೮೯ || ಅಂತು ನೆನೆಯಲೊಡಮವಲೋಕಿನೀವಿದ್ಯೆ 'ಮನದೊಡನೆ ಬಂದು ಬೆಸನಾವುದೆನೆ ದಶಮುಖನಿವರಾರೆಂಬುದುಮಯೋಧ್ಯಾ ಸಿಂಹಾಸನಕ್ಕಧಿಪತಿಯುಮಿಕ್ಷಾಕು ವಂಶ ಸಂಭವನುಮಪ್ಪನರಣ್ಯ ತನೂಭವಂ ದಶರಥ ನರನಾಥಂ ತದಸತ್ಯರಿವರೀಕಾಲದ ಬಲದೇವ ವಾಸುದೇವರ್ ದೇವತಾಧಿಷ್ಠಿತಂಗಳಪ್ಪ ವಜ್ರಾವರ್ತ ಸಾಗರಾವರ್ತ ಚಾಪ ರತ್ನಂಗಳನ ಪ್ರಯತ್ನದಿಂ ಪಡೆದ ರಾಮಲಕ್ಷ್ಮಣರೆಂಬ‌, ಮಹಾಬಲ 1: ನಮನ. ಚ.